ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು : ಬೆಳಗಾವಿ ಡಿ.ಡಿ.ಪಿ.ಐ ಲೀಲಾವತಿ ಹಿರೇಮಠ

ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು : ಬೆಳಗಾವಿ ಡಿ.ಡಿ.ಪಿ.ಐ ಲೀಲಾವತಿ ಹಿರೇಮಠ The role of alumni in the development of the school is huge: Belgaum DDPI Lilavati Hiremath

                ಕೊಪ್ಪಳ 25 : ಗುರು ವಂದನೆ ಕಾರ್ಯಕ್ರಮಗಳ ಮೂಲಕ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವುದು  ಶ್ಲಾಘನೀಯ ಕಾರ್ಯ ಎಂದು ಬೆಳಗಾವಿ ಜಿಲ್ಲೆಯ ಡಿ.ಡಿ.ಪಿ.ಐ ಲೀಲಾವತಿ ಹಿರೇಮಠ ಹೇಳಿದರು.ಅವರು ರವಿವಾರ ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 1998-99 ನೇ ಸಾಲಿನ 10ನೇ ತರಗತಿ ಹಳೆ ವಿದ್ಯಾರ್ಥಿಗಳ ಗುರು ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಪ್ಪಳದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು,ನಾನು ಶಿಕ್ಷಕಿಯಾಗಿ ಮೊದಲು ಸೇವೆಗೈದ ಶಾಲೆ ಇದು. ಹಾಗಾಗಿ ಮುಂದಿನ ದಿನಗಳಲ್ಲಿ ಇದನ್ನು ಕಟ್ಟುವ ಕೆಲಸ ಮಾಡವೆ. ಪ್ರತಿಯೊಂದು ತರಗತಿಯ ಕೊಠಿಡಿಗಳು ಹಳೆಯ ನೆನಪನ್ನು ಮರುಕಳಿಸುವಂತೆ ಮಾಡುತ್ತವೆ.

                 ಇಲ್ಲಿನ ಹಿರಿಯ ಶಿಕ್ಷಕರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದರಿಂದ ಮತ್ತು ಮಸಬಹಂಚಿನಾಳ ಗ್ರಾಮದಲ್ಲಿ ನಾನು ಮುಖ್ಯೋಪಾಧ್ಯಾಯೆಯಾಗಿ ಕಾರ್ಯನಿರ್ವಹಿಸಿದಾಗ  ಸಮಾಜಮುಖಿಯ ಚಿಂತನೆಗಳು ಜನಸಾಮಾನ್ಯರಲ್ಲಿ ಬೆರೆಯುವ ಮೂಲಕ ನನ್ನಲ್ಲಿ ಬೆಳದವು ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಇಲ್ಲಿಯ ವಿದ್ಯಾರ್ಥಿಗಳು ಸ್ವಲ್ಪ ಒರಟಾಗಿದ್ದರೂ ಅವರ ನಿಷ್ಕಲ್ಮಷ ಮನಸ್ಸು ಇಂದು ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾರಣವಾಯಿತು. ಎಲ್ಲ ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.  ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಮಹಾಂತೇಶ ಮಲ್ಲನಗೌಡರ ಉದ್ಘಾಟನೆ ನೆರೆವೇರಿಸಿದರು. ನಿವೃತ್ತ ಶಿಕ್ಷಕ ಶ್ರೀ ಹರಿ ಮಾತನಾಡಿ, ನಾನು ಏನು ಪಾಠ ಮಾಡಿದ್ದೇನೆ ಅದರ ಫಲ ನನ್ನ ಪ್ರತಿರೂಪವಾಗಿ ನಿಮ್ಮಲ್ಲಿ ಕಾಣುತ್ತಿದ್ದೇನೆ. ಸಾಧನೆ ಮಾಡುವ ಛಲ ನಿಮ್ಮಲ್ಲಿದ್ದರೆ ಸಾಧನೆಗೆ ಸರಳ ಮಾರ್ಗದರ್ಶನ ನೀಡುವ ಹೋಣೆ ನಮ್ಮದಾಗಿದೆ. ಆರೋಗ್ಯದಾಯಕ ಜೀವನ ಮತ್ತು ಸಾಮಾಜಿಕ ಹೊಣೆಗಾರಿಕೆಯ ಜೀವನ ಪ್ರತಿಯೊಬ್ಬ ವಿದ್ಯಾರ್ಥಿ ಪಾಲಿಸಿದಾಗ ವಿದ್ಯೆ ಕಲಿಸಿದ ಗುರುವಿನ ಬದುಕು ಸಾರ್ಥಕವಾಗುತ್ತದೆ.   

                   ಪ್ರಶ್ನಿಸುವ ಮತ್ತು ಉತ್ತರ ಕಂಡುಕೊಳ್ಳುವ ಮನೋಭಾವ ನಮ್ಮದಾದಗಬೇಕು ಎಂದರು. ನಿವೃತ್ತ ಉಪನ್ಯಾಸಕ ಮಹೇಶ ಸೊಪ್ಪಿಮಠ ಮಾತನಾಡಿ, ತಂದೆ ತಾಯಿಗಳು ಮೊದಲ ಗುರುವಾದರೆ ನಂತರದ ಗುರುವಿನ ಸ್ಥಾನ ಶಿಕ್ಷಕರಿಗೆ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಶಿಕ್ಷಕ ಪ್ರಮುಖ ಪಾತ್ರವಹಿಸುತ್ತಾನೆ ಆದ್ದರಿಂದ ಗುರು ಶಿಷ್ಯರ ಅನುಬಂಧ ಶಾಶ್ವತ ಎಂದು ಹೇಳಿದರು.ಬಡಮಕ್ಕಳು ಹೆಚ್ಚಾಗಿ ನಮ್ಮ ಶಾಲೆಯಲ್ಲಿ ಓದುತ್ತಿದ್ದರು ಅವರನ್ನು ಉತ್ತಮ ಮಾರ್ಗದೆಡೆಗೆ ಕಳುಹಿಸುವ ಜವಾಬ್ದಾರಿ ನಮ್ಮದಾಗಿತ್ತು. ಗಣಿತ, ಇಂಗ್ಲಿಷ್ ವಿಷಯ  ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದ ವಿದ್ಯಾರ್ಥಿಗಳನ್ನು ಅವರ ಕಲಿಕಾ ಮಟ್ಟವನ್ನು ಸುಧಾರಿಸಲು ಬಹಳ ಶ್ರಮವಹಿಸಬೇಕಾಯಿತು. ಎಲ್ಲಾ ವಿಷಯಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡು ಪ್ರೀತಿಯಿಂತ ಪಾಠ ಮಾಡಿದ್ದಾರೆ ಅದನ್ನು ನೆನಪು ಮಾಡಿಕೊಂಡು ಇಂದು ವಿದ್ಯಾರ್ಥಿಗಳು ಗುರು ವಂದನೆ ಕಾರ್ಯಕ್ರಮ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

                     ನಿವೃತ್ತ ವಿಜ್ಞಾನ ಉಪನ್ಯಾಸಕಿ ಶೋಭಾದೇವಿ ಕಂಬಾಳಿಮಠ ಮಾತನಾಡಿ, ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದ ನಮ್ಮ ಶಾಲೆ ಸುಂದರ ಹೂದೋಟದಂತೆ ಕಂಗೊಳಿಸುತ್ತಿತ್ತು ವಿದ್ಯಾರ್ಥಿಗಳ ಲವಲವಿಕೆ ಕಂಡು ಉತ್ಸುಕತೆಯಿಂದ ಪಾಠ ಬೋಧನೆಯಲ್ಲಿ ತೊಡಗುತ್ತಿದ್ದೇವು ಅದರ ಪ್ರತಿಫಲ ಇಂದು ನಮ್ಮ ವಿದ್ಯಾರ್ಥಿಗಳ ಸಾಧನೆಯಲ್ಲಿ ಕಾಣುತ್ತಿದ್ದೇವೆ. ಉತ್ತಮ ವ್ಯಕ್ತಿತ್ವ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ನಮ್ಮ ಬದುಕನ್ನು ಉತ್ತಮಗೊಳಿಸುತ್ತವೆ. ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಿವೃತ್ತ ಹಿಂದಿ ಶಿಕ್ಷಕ ಶಿವಪ್ಪ ಬಿಸರಳ್ಳಿ ಮಾತನಾಡಿ, ನಮ್ಮ ಜೀವನ ಅರ್ಥಪೂರ್ಣವಾಗಿರಲು ಶಿಸ್ತು ತುಂಬಾ ಅವಶ್ಯಕ. ಹಿಂದಿ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ತುಂಬಾ ಆಸಕ್ತಿ ಹೊಂದಿದ್ದರು. ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಆಚರಣೆಯಲ್ಲಿ ತರುವ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಜೀವನ ನಡಸಬೇಕು ಎಂದರು. ನಿವೃತ್ತ ಕಲಾ ಶಿಕ್ಷಕ ಬಸವರಾಜ ಬಿಸರಳ್ಳಿ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ಪ್ರತಿ ಹಂತದಲ್ಲಿಯೂ ನಾನು ಬದುಕಿನ ಕಷ್ಟಗಳನ್ನು ಸವಾಲಾಗಿ ಎದುರಿಸಿದ್ದೇನೆ.  

                   ನನಗೆ ಉತ್ತಮ ಗುರು ಸಿಕ್ಕಿದ್ದರಿಂದ ಮತ್ತು ಅವರ ಆಶೀರ್ವಾದ ನನ್ನ ಮೇಲಿದ್ದುದ್ದರಿಂದ ನಾನು ಶಿಕ್ಷಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ನಿಷ್ಕಲ್ಮಷ ಸೇವೆ ಮಾಡುವ ಗುಣ ನಮ್ಮಲ್ಲಿದ್ದರೆ ಅದುವೇ ಗುರುವಂದನೆ ಹಾಗಾಗಿ ನಿಮ್ಮ ಪ್ರೀತಿಯ ಆಹ್ವಾನ ನನಗೆ ಖಷಿ ತಂದಿದೆ ಎಂದರು.ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶರಣಬಸನಗೌಡ ಹಿರೇಗೌಡರ  ಮಾತನಾಡಿ, ಗುರು ವಂದನೆ ಕಾರ್ಯಕ್ರಮ ನಡೆಯಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಹಳೆಯ ವಿದ್ಯಾರ್ಥಿಗಳು ನಮ್ಮ ಜೊತೆ ಸೇರಿರುವುದು ನಮಗೆ ಹರ್ಷ ತಂದಿದೆ. ಶಾಲೆಯ ಅಭಿವೃದ್ಧಿಗೆ ನಾವು ಸದಾ ಸಿದ್ಧ ಎನ್ನುವ ಹಳೆಯ ವಿದ್ಯಾರ್ಥಿಗಳ ಕಾಳಜಿ ಇತರರಿಗೆ ಮಾದರಿಯಾಗಿದೆ ಎಂದರು. ಅಲಿನವಾಜ್ ಹುಸೇನ್ ಅವರು ಪ್ರಾಸ್ತಾವಿಕ ಮಾತನಾಡಿ, ಕಾಣದ ದೇವರಿಗಿಂತ ಕಾಣುವ ಗುರುಗಳ ಸ್ಥಾನ ದೊಡ್ಡದು 26 ವರ್ಷಗಳ ನಂತರ ಗುರುಗಳನ್ನು ಕಣ್ತುಂಬಿಕೊಳ್ಳವ ಸೌಭಾಗ್ಯ ದೊರಕಿದ್ದು ನಮ್ಮ ಪುಣ್ಯ ಆದ್ದರಿಂದ ಗುರುಗಳು ಹಾಕಿದ ಹಾದಿಯಲ್ಲಿ ನಡೆದು ಅವರಿಗೆ ಗೌರವ ಸಲ್ಲಿಸೋಣ. ಮುಂದಿನ ದಿನಗಳಲ್ಲಿ ಶಾಲೆಯ ಭೌತಿಕ ಸೌಂದರ್ಯ ಹೆಚ್ಚಿಸಲು ಕಾರ್ಯ ಕೈಗೊಳ್ಳೊಣ ಎಂದು ಹೇಳಿದರು.ವಿದ್ಯಾರ್ಥಿಗಳು ಗುರುಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.

              ಮಾರುತಿ ಇಂದರಗಿ ಅವರು ಗುರುವಂದನೆ ಕಾರ್ಯಕ್ರಮವನ್ನು  ವಿದ್ಯಾರ್ಥಿಗಳಿಂದ ಎಲ್ಲಾ ಗುರುಗಳಿಗೆ ಸನ್ಮಾನ ಮಾಡುವ ಮೂಲಕ ನೆರವೇರಿಸಿದರು. ನಿವೃತ್ತ ವೃತ್ತಿ ಶಿಕ್ಷಕ ಆಮೀರ್ ಹಮ್ಜಾ ಅ.ನದಾಫ್ ಅವರ ನೇತೃತ್ವದಲ್ಲಿ ಗಿಡ ನೇಡುವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಬಸವರಾಜ ಕಮ್ಮಾರ, ಶಿಕ್ಷಕಿ ಅನಸೂಯಾ, ನಿವೃತ್ತ ಶಿಕ್ಷಕ ಅನ್ವರ್ ಹುಸೇನ್,  ಶಿಕ್ಷಕ ಮಹಮ್ಮದ್ ಖಯುಮ್ ಸೈಯದ್ ಗೌಸ್ ಪಾಷಾ ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಂಗನಾಥ ಕೋಳೂರು ನಿರೂಪಿಸಿದರು. ಫಕ್ರುದ್ದಿನ್ ನದಾಫ್ ಸ್ವಾಗತಿಸಿದರು. ಮೆಹಬೂಬ ಮಣ್ಣೂರು ವಂದಿಸಿದರು.