ಲೋಕದರ್ಶನವರದಿ
ಧಾರವಾಡ07: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾಥರ್ಿಗಳ ಜವಾಬ್ದಾರಿ ಹೆಚ್ಚಾಗಿದ್ದು, ದೇಶದ ರಕ್ಷಣೆ, ಸುಸ್ಥಿರ ಅಭಿವೃದ್ಧಿಯಲ್ಲಿ ಎನ್.ಎಸ್.ಎಸ್.ನ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ಈ ಕಾರ್ಯಕ್ರಮದ ಸಫಲತೆಯನ್ನು ಶಿಬಿರಾಥರ್ಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಎಂದು ಮುಖ್ಯ ಅತಿಥಿಗಳಾಗಿ ಡಾ. ಬಿ.ಎಲ್.ಲಕ್ಕಣ್ಣವರ ಹೇಳಿದರು.
ಸಕರ್ಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು, ಗಾಂಧಿಚೌಕ ಧಾರವಾಡ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾಷರ್ಿಕ ಶಿಬಿರವನ್ನು ಕ್ಯಾರಕೊಪ್ಪ ಗ್ರಾಮದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಸ್ತುತ ಕಾರ್ಯಕ್ರಮವು ನೂರಕ್ಕೆ ನೂರರಷ್ಟು ಸಫಲತೆಯನ್ನು ಪಡೆದಿದ್ದು ಬೇರೆ ಘಟಕಗಳಿಗೆ ಇದು ಮಾದರಿಯಾಗಿದೆ ಎಂದು ಕಾರ್ಯಕ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರಸ್ವತಿ ಆರ್. ಕಳಸದ ಇವರು ಮಹಾವಿದ್ಯಾಲಯದ ಸ್ವಯಂ ಸೇವಕಿಯರ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದರು. ವಿದ್ಯಾಥರ್ಿಗಳು ಶಿಸ್ತು, ಸಂಯಮವನ್ನು ರೂಢಿಸಿಕೊಂಡು ಕಾಲೇಜಿಗೆ ಹೆಸರು ತರಬೇಕೆಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಮಪಂಚಾಯತಿ ಸದಸ್ಯರಾದ ನಾಗರಾಜ ತಳ್ಳಿಹಾರ ಇವರು ಸ್ವಯಂ ಸೇವಕಿಯರ ಶ್ರಮಧಾನವನ್ನು ಮೆಚ್ಚಿ ಅಭಿನಂದಿಸಿದರು. ಮತು ಸೇವಾ ಮನೋಭಾವನೆಯನ್ನು ಜೀವಮಾನದುದ್ದಕ್ಕೂ ರೂಢಿಸಿಕೊಳ್ಳಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾದ ಡಾ. ನಮ್ರತಾ ಎಂ. ಅವರು ಮಾತನಾಡಿದರು.
ಈ ಕಾರ್ಯಕ್ರದಲ್ಲಿ ಡಾ. ಧನೇರಾಜೇಂದ್ರ ಮಣಿಕರಾವ್, ಪ್ರೊ.ಸುಮಂಗಲಾ ಮರಡಿ, ಶಿವರಾಮ ಸರವಂತ, ಎಸ್.ಡಿ.ಎಂ. ಸದಸ್ಯರು, ಕ್ಯಾರಕೊಪ್ಪ, ಸುಕ್ಕಬಾಯಿ ಮುತ್ತಣ್ಣವರ, ಸರೋಜನಿ ಭಜಂತ್ರಿ, ಮಾದೇವಿ ಹೆಗ್ಗೇರಿ, ಬಸವರಾಜ ಮಮ್ಮಿಗಟ್ಟಿ ಉಪಸ್ಥಿತರಿದ್ದರು. ಡಾ. ಗಿರೀಶ ಚಿಲ್ಲನ್ನವರ ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟರು. ದಶರಥ ಶಿಂಗಿ ಅವರು ನಿರೂಪಿಸಿದರು.