ಲೋಕದರ್ಶನ ವರದಿ
ಸಿದ್ದಾಪುರ,28: ತಾಲೂಕಿನ ಶಿರಳಗಿ ಗ್ರಾಮಪಂಚಾಯತ ಬಾಳೆಕೊಪ್ಪ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಚಿರೆ (ಕೆಂಪು) ಕಲ್ಲು ಕ್ವಾರಿಯ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಏಳು ಟಿಲ್ಲರ್ ವಶಪಡಿಸಿಕೊಂಡಿದ್ದಾರೆ.
ಬಾಳೆಕೊಪ್ಪ ಗ್ರಾಮದ ಸವರ್ೇ ನಂ 11,12 ರಲ್ಲಿ ಸರಕಾರದಿಂದ ಏಂಟು ಜನರಿಗೆ ಮಂಜೂರಾಗಿತ್ತು. ಈ ಜಾಗದಲ್ಲಿ ಮನೆ ಕಟ್ಟಲು ಉಪಯೋಗಿಸುವ ಕೆಂಪುಕಲ್ಲುಗಳನ್ನು ಸುಮಾರು 16 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ತೆಗೆಯಲಾಗಿದೆ. ಜಾಗ ಮಂಜೂರಿ ಪಡೆದಿದ್ದವರು ಕಲ್ಲು ಕ್ವಾರೆ ನಡೆಸಲು ನಾಲ್ವರಿಗೆ ನೀಡಿದ್ದಾರೆ. ಈ ಹಿಂದೆ ತಹಸೀಲ್ದಾರ ಪಟ್ಟರಾಜ ಗೌಡ ಈ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಕಲ್ಲುಕ್ವಾರೆ ನಡೆಸುತಿದ್ದ ಬಗ್ಗೆ ಮಾಹಿತಿ ಪಡೆದು ದಂಡ ಹಾಕಿದ್ದು ಆವಾಗ ಕ್ವಾರೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಪುನಃ ಕ್ವಾರೆಯನ್ನು ಆರಂಭಿಸಲಾಗಿದೆ.
ಈ ಕುರಿತು ದೂರು ಬಂದ ಹಿನ್ನೇಲೆಯಲ್ಲಿ ಶಿರಸಿ ಉಪವಿಭಾಗಾದಿಕಾರಿ ರಾಜು ಮೊಗವೀರ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು, ಸುಮಾರು ಒಂದು ಸಾವಿರಕ್ಕಿಂತ ಅಧಿಕ ಕಡಿದಿಟ್ಟ ಕಲ್ಲುಗಳು ಕಂಡು ಬಂದಿದೆ ಎಂದು ಉಪವಿಭಾಗಾದಿಕಾರಿ ತಿಳಿಸಿದ್ದಾರೆ. ಈ ಸಂದರ್ಬದಲ್ಲಿ ತಹಸೀಲ್ದಾರ ಪಟ್ಟರಾಜ ಗೌಡ ಇದ್ದರು.