ಮುಂಡಗೋಡ 17: ನರಿಗಳ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸಾರ್ವಜನಿಕರು.
ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಅರಣ್ಯದಲ್ಲಿ ಸಾಯಂಕಾಲ ಈ ಘಟನೆ ನಡೆದಿದೆ.
ಮುಂಡಗೋಡದಿಂದ ಹನುಮಾಪೂರ ಗ್ರಾಮಕ್ಕೆ ಹಾದೂ ಹೋಗುವ ರಸ್ತೆಯ ಪಕ್ಕದ ಅರಣ್ಯದಲ್ಲಿ ಜಿಂಕೆ ಮತ್ತು ಮರಿಯನ್ನು ನರಿಗಳು ಕಾಡಿನಿಂದ ಬೆನ್ನಟ್ಟಿಕೊಂಡು ರಸ್ತೆಯ ಪಕ್ಕದಲ್ಲಿ ಹೋಗುತ್ತಿರುವಾಗ ಜಿಂಕೆಯು ಭಯದಿಂದ ಮರಿಯನ್ನು ಬಿಟ್ಟು ಓಡಿ ಕಾಡು ಸೇರಿಕೊಂಡಿದೆ. ಆಗ ನರಿಗಳು ಮರಿಯನ್ನು ತಿನ್ನಲು ಹೊಂಚು ಹಾಕುವ ಸಂದರ್ಭದಲ್ಲಿ ಅದೆ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಲಕ್ಷಣ ಬನಸೋಡೆ ಹಾಗೂ ಅವರ ಸ್ನೇಹಿತರು ನರಿಗಳನ್ನು ಓಡಿಸಿ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಷಾತ್ ಜಿಂಕೆ ಮರಿಗೆ ಯಾವುದೆ ಪ್ರಾಣಾಪಾಯವಾಗಿಲ್ಲ. ಜಿಂಕೆ ಮರಿಯನ್ನು ತಂದು ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.