ಲೋಕದರ್ಶನ ವರದಿ
ಸಿದ್ದಾಪುರ: ಗೋವಿನ ಸಂರಕ್ಷಣೆಗೆ ಬಿದ್ದ ಬೆವರು, ಇದು ಗಂಗೆಗೆ ಸಮಾನ. ಬೆವರಿನಲ್ಲಿ ದೋಷವು ಇದೆ. ಸತ್ವವು ಇದೆ. ನಿಮ್ಮೇಲ್ಲರ ಶ್ರಮದಿಂದ ಈ ಗೋ ಸ್ವರ್ಗ ನಿಮರ್ಾಣವಾಗಿದೆ ಎಂದು ರಾವಚಂದ್ರ ಪುರಮಠದ ಪರಮಪೂಜ್ಯ ಶ್ರೀ ಮಜ್ಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ತೀರ್ಥ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ಶ್ರೀ ರಾಮದೇವರ ಮಠ ಭಾನ್ಕುಳಿಮಠದಲ್ಲಿ ನಡೆದ ಕಾರಣ-ಸ್ಮರಣ ದಾನಮಾನ, ಸೇವಾಸಮ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ನೀವು ಗೋಸ್ವರ್ಗಕ್ಕೆ ನೀಡಿದ ಒಂದು ರೂಪಾಯಿ ಲಕ್ಷ್ಮೀದೇವಿ ಇದ್ದಂತೆ. ಕೆಟ್ಟದ್ದನ್ನು ಮಾಡಿದ, ದೀನ ದಲಿತರಿಗೆ ಒಳ್ಳೆಯದನ್ನು ಮಾಡದ ಹಣ ದೇವರಲ್ಲ, ಸಂಪತ್ತಲ್ಲಾ. ನೀವೆಲ್ಲಾ ಇರದಿದ್ದರೆ ಈ ಗೋಸ್ವರ್ಗ ಇರುತ್ತಿರಲಿಲ್ಲಾ. ಇದು ಜಗತ್ತಿಗೆ ಮಾದರಿಯಾಗಿದೆ. ಇದೆಲ್ಲಾ ಸಾಧ್ಯವಾದದ್ದು ನಿಮ್ಮೇಲ್ಲರಿಂದ. ಆದ್ದರಿಂದ ಗೋಸ್ವರ್ಗಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ಇದು. ಈಗ ಎರಡು ಹೆಜ್ಜೆ ಇಟ್ಟಿದ್ದೇವೆ. ಇನ್ನು ಒಂದು ಗೋ ಸಂಶೋಧನಾ ಕೇಂದ್ರವಾಗಬೇಕಿದೆ. ಗೋ ಸ್ವರ್ಗಕ್ಕೆ ಮೇವಿನಸೇವೆ ಎಲ್ಲರಿಂದಲೂ ಆಗಬೇಕಿದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ನಾಗರಾಜ ನಾಯ್ಕ ಮಾತನಾಡಿ ಗೋಸ್ವರ್ಗದ ನಿಮರ್ಾಣಕ್ಕೆ ಕಾಣದ ಕೈಗಳು ಹಾಗೂ ನಿಮ್ಮಲ್ಲರ ಸತತ ಪರೀಶ್ರಮ ಇದೆ. ಇಂದು ನಮ್ಮಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತದೆ. ಇಂತಹ ಮಹಾನ್ ಪುರುಷರ ಪಾದದ ಧೂಳಿಯ ಸ್ಪರ್ಶದ ಕಾರಣದಿಂದ ನಮ್ಮಲ್ಲಿ ಸಂಸ್ಕೃತಿ ಇನ್ನೂ ಉಳಿದಿದೆ. ನಮ್ಮಲ್ಲಿರುವ ನಂಬಿಕೆ, ಶ್ರದ್ಧೆಯಿಂದ ಇವೆಲ್ಲವು ಸಾಧ್ಯವಾಗಿದೆ ಎಂದರು. ಜಿಲ್ಲಾ ಪಂಚಾಯತ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ತಾಲೂಕ ಪಂಚಾಯತ ಸದಸ್ಯ ಸುಧೀರ್ ಗೌಡರ್, ತಾಲೂಕ ಪಂಚಾಯತ ಸ್ಥಾಯಿಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಗುರುಮೂತರ್ಿ ಶಿಕಾರಿಪುರ ಮಾತನಾಡಿದರು. ಮಠದ ಆಡಳಿತಾಧಿಕಾರಿ ಕೆ.ಜಿ.ಭಟ್, ನರಗುಂದ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಜಿ ಉಪಸ್ಥಿತರಿದ್ದರು. ರಾಘವೇಂದ್ರ ಭಟ್ ಕ್ಯಾದಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿಗೋ ಸ್ವರ್ಗ ನಿರ್ಮಣಕ್ಕೆ ಸಹಕರಿಸಿದ ಎಲ್ಲರನ್ನು ಸನ್ಮಾನಿಸಲಾಯಿತು.