ಹಿಂದು ಧರ್ಮದ ರಕ್ಷಣೆ ಪ್ರತಿಯೊಬ್ಬ ಹಿಂದುನ ಕರ್ತವ್ಯ! ಪೀಳಿಗೆಯಿಂದ ಪೀಳಿಗೆಗೆ ಧರ್ಮದ ದೀಪ ಬೆಳಗಲಿ!
The protection of Hinduism is the duty of every Hindu! May the lamp of religion shine from generati
ಮುಂಡಗೋಡ 12: ಹಿಂದು ಧರ್ಮದ ರಕ್ಷಣೆ ಕೇವಲ ಹಿಂದು ಜಾಗರಣೆ, ಬಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬ ಹಿಂದು ಧರ್ಮಿಯ ಕರ್ತವ್ಯವೂ ಹೌದು. ಆದ್ದರಿಂದ ಇಂತಹ ಸಭೆ ಸಮಾರಂಭಗಳಲ್ಲಿ ಪ್ರತಿಯೊಬ್ಬ ಹಿಂದು ಭಾಗವಹಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ಸಂಚಾಲಕ ವಸಂತ ಗಿಳಿಯಾರ ಹೇಳಿದರು.ಅವರು ಭಾನುವಾರ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಹಿಂದು ಸಮ್ಮೇಳನದಲ್ಲಿ ಮಾತನಾಡಿದರು.ಆರ್‌ಎಸ್‌ಎಸ್ ಶಿರಸಿ ವಿಭಾಗದ ಸಂಪರ್ಕ ಪ್ರಮುಖ ಶ್ರೀಧರ ಹಿರೇಹದ್ದ ಮಾತನಾಡಿ, ಆರ್‌ಎಸ್‌ಎಸ್ ವ್ಯಕ್ತಿಗೆ ಸಂಸ್ಕಾರ ಕಲಿಸುತ್ತದೆ.
ಲಕ್ಷಾಂತರ ಸ್ವಯಂಸೇವಕರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ ಸ್ವದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು ಎಂದು ಹೇಳಿದರು.ಪಟ್ಟಣದ ಹಳೂರಿನ ಹಿರೇಮಠದ ವೇದಮೂರ್ತಿ ರುದ್ರಮುನಿ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಪ್ರಮುಖ ಶ್ರೀಧರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವನವಾಸಿ ಕಲ್ಯಾಣದ ಮಹಿಳಾ ಕಾರ್ಯಕರ್ತೆ ಸುರೇಖಾ ಗಾಯತೊಂಡೆ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ 23 ಹಿಂದು ಸಮುದಾಯದ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ತಂಗಮ್ ಚಿನ್ನಣ್ಣತೇವರ, ಕಾರ್ಯದರ್ಶಿ ಸುರೇಶ ಕುಳ್ಳೋಳಿ ಉಪಸ್ಥಿತರಿದ್ದರು. ವಿವಿಧ ಹಿಂದು ಸಂಘಟನೆಗಳ ಸಂಚಾಲಕರಾದ ಸುರೇಶ ಲಮಾಣಿ, ಪ್ರಕಾಶ ಬಡಿಗೇರ, ಎಚ್. ಮಂಜುನಾಥ, ಮಂಜುನಾಥ ಹಿರೇಮಠ, ನಿಂಗಪ್ಪ ಕುರುಬರ, ಬಸವರಾಜ ಓಶಿಮಠ, ನಾಗರಾಜ ಬೆಣ್ಣಿ, ಸಿದ್ದಪ್ಪ ಹಡಪದ, ಶರೀಫ್ ಶಿಗಟ್ಟಿ, ಚಿದಾನಂದ ಹರಿಜನ, ಎನ್.ಡಿ. ಕಿತ್ತೂರ, ದೇವೇಂದ್ರ್ಪ ಇಂಗಳೆ, ವಸಂತ ಕೋಣಸಾಲಿ, ನಾಗರಾಜ ಸಂಕನಾಳ, ಅಶೋಕ ಚಲವಾದಿ, ರಮೇಶ ಕಾಮತ್, ಮಲ್ಲಿಕಾರ್ಜುನ ಕಲ್ಲಮೆಟ್ಟರ, ಮಂಜುನಾಥ ಮತ್ಯಿಗಟ್ಟಿ, ತುಕಾರಾಮ ಇಂಗಳೆ, ನವೀನ ಇಂಗಳೆ, ರಮೇಶ ರಾಮಣ್ಣ, ಸಂಗಪ್ಪ ಕೋಳೂರ, ನವರ ಸೇರಿದಂತೆ ಹಿಂದೂ ಸಮುದಾಯದ ಹಿರಿಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಮಾರಿಕಾಂಬ ದೇವಸ್ಥಾನದಿಂದ ವಿವೇಕಾನಂದ ಬಯಲು ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 