ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಪರೀಕ್ಷಿಸಿಕೊಂಡ ಅಧ್ಯಕ್ಷೆ
ರನ್ನ ಬೆಳಗಲಿ 20: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡ. ಸಾಮಾನ್ಯ ನಾಗರಿಕರಂತೆ ಸರದಿ ಸಾಲಿನಲ್ಲಿ ನಿಂತು. ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪಾ ಸದಾಶಿವ ಹೊಸಟ್ಟಿ ಅವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ನೀಡ, ಸಮಯ ಪಾಲನೆಗೆ ಒತ್ತು ನೀಡಬೇಕೆಂದು ತಿಳಿಸಿ. ಆಸ್ಪತ್ರೆಯ ಎಲ್ಲಾ ವಿಭಾಗಗಳ ಕಛೇರಿಗಳಿಗೆ ಭೇಟಿ ನೀಡಿ. ಪರೀಶೀಲನೆ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಚ್ಛತೆ, ಮತ್ತು ಪ್ರತಿನಿತ್ಯ ಜನರು 80 ರಿಂದ 120 ರಷ್ಟು ರೋಗಿಗಳು ತಮ್ಮ ಆರೋಗ್ಯ ತಪಾಸಣೆಗೆ ಬರುತ್ತಿರುವ ದಾಖಲೆಗಳನ್ನು ನೋಡಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳ ಜೊತೆಗೆ ಮೃದುವಾಗಿ ವರ್ತಿಸಿ, ಚಿಕಿತ್ಸೆ ನೀಡಬೇಕೆಂದು ಸ್ಥಳೀಯ ವೈದ್ಯಾಧಿಕಾರಿಗಳಾದ ಡಾಽಽ ರಶ್ಮಿ ಎಸ್ ಪೂಜಾರಿ, ಆಯುರ್ವೇದ ವೈದ್ಯರಾದ ಡಾಽಽಆನಂದ ಕುಲಕರ್ಣಿ ಅವರಿಗೆ ತಿಳಿಸಿದರು. ಈ ಸಮಯದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.