ಧಾರವಾಡ 01: ಕನ್ನಡ-ಕನ್ನಡಿಗ-ಕನರ್ಾಟಕತ್ವ ಎಂಬ ಧ್ಯೇಯದೊಂದಿಗೆ, ನಾಡು ನುಡಿಯ ಹಿರಿಮೆ, ಗರಿಮೆ ಎತ್ತಿ ಹಿಡಿಯುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಕನ್ನಡ ಸಾಕ್ಷಿಪ್ರಜ್ಞೆಯಾಗಿ, 129 ವಸಂತಗಳುದ್ದಕ್ಕೂ ತಲೆಯೆತ್ತಿ ನಿಂತ ನಮ್ಮೀ ಕನರ್ಾಟಕ ವಿದ್ಯಾವರ್ಧಕ ಸಂಘವು ಸದಾವಕಾಲ ನಾಡು-ನುಡಿಯ ಘನತೆಯನ್ನು ಎತ್ತಿ ಹಿಡಿದ ಈ ಸಂಸ್ಥೆ ನಮಗೆಲ್ಲ ವಂದನೀಯ, ಸಮರ್ಪಣೆಯ ಭೂಮಿ. ಇಂಥ ಸಂಘದ ಚುಕ್ಕಾಣಿ ಹಿಡಿದವರು ಸಂತ ಸದೃಶ ಶತಾಯುಷಿ. ಸಂತನೆಂದರೆ ಯಾರು ? ದಿವ್ಯತೆಯ ಅರಿತವರು, ಸರಳತೆಯ ಸೂತ್ರದಲಿ ಸುಖವ ಕಂಡವರು, ಮಮತೆ ಬಂಧನ ಕಳಚಿ ಬಹುದೂರ ನಿಂತವರು, ಅವರೇ ನಮ್ಮ ಹಿರಿಯ ಚೇತನ, ಅನಿಕೇತನರಾದ ಡಾ. ಪಾಟೀಲ ಪುಟ್ಟಪ್ಪನವರು ಎಂದು ಕನರ್ಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಬಿ. ಎಲ್. ಪಾಟೀಲ ಹೇಳಿದರು.
ಕವಿವ ಸಂಘವು 63ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ 15 ದಿನಗಳ ಕಾಲ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ 13ನೇ ದಿನ `ನೀ ಹೆಂಗಂತಿ ಹಂಗ' ಹಾಸ್ಯ ನಾಟಕಕ್ಕೆ ಚಾಲನೆ ನೀಡಿ ವರು ಮಾತನಾಡಿದರು. ಕನ್ನಡ ವಿಷಯಕ್ಕೆ ಬಂದರೆ ನಾಡೋಜ ಡಾ. ಪಾಪುರವರು, ಕುವೆಂಪುರವರ ಭಾಷೆಯಲ್ಲಿ ಹೇಳುವುದಾದರೆ, ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ. ನೀವು ದಾರಿ ಬಿಟ್ಟಿರೋ ಸರಿ, ಇಲ್ಲವೇ ಅಪ್ಪಚ್ಚಿಯಾಗಿ ಹೋಗುತ್ತೀರಿ. ಹಾಗೆ ಕನ್ನಡದ ಈ ಭೀಷ್ಮರ ನಾಡು, ನುಡಿಯ, ಅಭಿಮಾನದ ಕೆಚ್ಚಿನಲ್ಲಿ ಕೊಚ್ಚಿ ಹೋದವರಲ್ಲಿ ಅದೆಷ್ಟೋ ಜನ. ಕನ್ನಡದ ಪ್ರಶ್ನೆ ಬಂದಾಗ ಎಂದೂ ರಾಜಿ ಸಂಧಾನವಿಲ್ಲ. ನಮ್ಮಿಂದ ಬಿಟ್ಟುಹೋದ ಕರವೀರ, ಸೊಲ್ಲಾಪುರಗಳಲ್ಲದೇ, ಕೇರಳ, ತಮಿಳುನಾಡುಗಳಲ್ಲಿ ಉಳಿದ ನಮ್ಮ ಪ್ರದೇಶಗಳ ಬಗ್ಗೆ ಹಗಲಿರುಳು ಮಿಡಿಯುವ ಕನ್ನಡದ ಈ ಮೇರುಗಿರಿ ನಿಜಕ್ಕೂ ರಾಜೇಶ್ವರಿಯ ವರಪುತ್ರ. ಇವರ ಪ್ರಬಲ ಇಚ್ಛಾಶಕ್ತಿ, ನೂರು ದಾಟಿದರೂ ನೆನಪಿನ ಸಾಗರವನ್ನೇ ಹೊಂದಿದ ಅವರ ಅಪಾರ ಜ್ಞಾಪಕಶಕ್ತಿ, ದೇಶವಿದೇಶಗಳಲ್ಲಿ ಇಂದಿಗೂ ಜೀವಂತವಾಗಿರುವ ಅವರ ಉನ್ನತ ಮಟ್ಟದ ಸಂಬಂಧಗಳು ಎಂಥವರನ್ನೂ ದಿಗಿಲುಗೊಳಿಸುತ್ತವೆ. ಇಂಥವರನ್ನು ಕಂಡೇ ಕವಿ ಯುಗವೇ ಯುಗಪುರುಷನಾದ ಐತಿಹಾಸಿಕ ಘಳಿಗೆಯಿದು ಎಂದು ಉದ್ಗಾರ ತೆಗೆದಿರಲು ಸಾಕು. ಇಂಥ ಡಾ. ಪಾಪುರವರ ನೇತೃತ್ವದಲ್ಲಿ ಕ.ವಿ.ವ. ಸಂಘವು ಉತ್ತರೋತ್ತರವಾಗಿ ಬೆಳೆಯುತ್ತಿದೆ ಎಂದರು.
ಸಂಘದ ಹಿರಿಯ ಸದಸ್ಯರಾದ ಬಿ. ಎಂ. ಅಮರಣ್ಣವರ, ಎಸ್. ಬಿ. ಮತ್ತೂರ, ಎಸ್. ಟಿ. ಅಂಬೋರೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಕಿತ್ತೂರಿನ ರಂಗಕಮರ್ಿ ಶಶಿಧರ ಮರಕುಂಬಿ ಇವರಿಗೆ ರಂಗಕಲಾ ಸನ್ಮಾನ ಮಾಡಲಾಯಿತು.
ಸನ್ಮಾನಿತರ ಪರವಾಗಿ ಅಮರಣ್ಣವರ ಮಾತನಾಡಿ, ಕನರ್ಾಟಕ ವಿದ್ಯಾವರ್ಧಕ ಸಂಘವು 15 ದಿನಗಳ ಕಾಲ ರಾಜ್ಯೋತ್ಸವದ ಅಂಗವಾಗಿ ಹಲವಾರು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಹಿರಿಯ ಸದಸ್ಯರನ್ನು ಸನ್ಮಾನಿಸುತ್ತಿರುವುದು ಒಂದು ಸತ್ ಸಂಪ್ರದಾಯ ಎಂದರು.
ಶಶಿಧರ ಮರಕುಂಬಿ ಮಾತನಾಡಿ, ಸಂಘದ ಈ ಸನ್ಮಾನ ನನಗೆ ಬಯಸದೇ ಬಂದ ಭಾಗ್ಯ, ಇದರಿಂದ ನನಗೆ ತುಂಬಾ ಸಂತಸವಾಗಿದೆ ಎಂದರು.
ವೇದಿಕೆ ಮೆಲೆ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ, ಗೌರವ ಉಪಾಧ್ಯಕ್ಷ ಡಾ. ಇಸಬೆಲ್ಲಾ ಝೇವಿಯರ್ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ಸ್ವಾಗತಿಸಿದರು. ಶಾಂತೇಶ ಗಾಮನಗಟ್ಟಿ ನಿರ್ವಹಿಸಿದರು, ಶಿವಾನಂದ ಭಾವಿಕಟ್ಟಿ ವಂದಿಸಿದರು. ಬಸಲಿಂಗಯ್ಯ ಹಿರೇಮಠ ನಾಡಗೀತೆ ಹಾಗೂ ಅತ್ರಿ ಹುಣಸಿಮರದ ಕನ್ನಡ ಗೀತೆ ಹಾಡಿದರು.
ನಂತರ ಜೋಸೆಫ್ ಮಲ್ಲಾಡಿ ರಚನೆ, ನಿದರ್ೇಶನದ `ನೀ ಹೆಂಗಂತಿ ಹಂಗ' ಹಾಸ್ಯ ನಾಟಕವನ್ನು ಜೋಗುಳದೀಪ ಸಾಂಸ್ಕೃತಿಕ ಸಂಘ, ತುಮರಿಕೊಪ್ಪ ತಂಡದವರು ಪ್ರಸ್ತುತಪಡಿಸಿ ನೆರೆದ ಸಭೀಕರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರೊ. ವೀಣಾ ಸಂಕನಗೌಡರ, ಎಸ್. ಬಿ. ಗುತ್ತಲ, ಸೋಮಶೇಖರ ಜಾಡರ, ಜಯಶ್ರೀ ಗವಳಿ, ವಾಯ್. ಸಿ. ಬಿಜಾಪುರ, ವಾಯ್.ಎನ್. ಮಾಳಗಿ, ಅಣಜಿ, ಶಿವಯೋಗಿ ಹಂಚಿನಾಳ, ಪ್ರಕಾಶ ಮುಳಗುಂದ, ವೀರಣ್ಣ ಒಡ್ಡೀನ, ವೀರಯ್ಯ ಪತ್ರಿಮಠ, ಸೇರಿದಂತೆ ಅನೇಕರು ಭಾಗವಹಿಸಿದ್ದರು.