ಲೋಕದರ್ಶನ
ವರದಿ
ಕೊಪ್ಪಳ 14: ಕಾವ್ಯ ಅನ್ನುವದು ಬರೀ ಪದಗಳ ಗುಚ್ಚ ಅಲ್ಲ, ಅದು ಕವಿಯ ಸಾರ್ಥಕ ಓದಿನ ಫಲ. ಅದುಗನ ಹೃದಯ ಮಿಡಿವಂತಿರಬೇಕು ಎಂದು ಕನ್ನಡ ಭಾಷಾ ಉಪನ್ಯಾಸಕ ಹಾಗೂ ವಿಮರ್ಶಕ ಶಿವಪ್ರಸಾದ ಹಾದಿಮನಿ ಅಭಿಪ್ರಾಯಪಟ್ಟರು.
ಸ್ಥಳೀಯ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ
ಸಂಯುಕ್ತವಾಗಿ ನಾಡ ಹಬ್ಬದ ನಿಮಿತ್ಯ ಆಯೋಜಿಸಿದ್ದ ಕವಿಗೋಷ್ಟಿಯಲ್ಲಿ ಕವಿಗಳ ಕಾವ್ಯ ಕುರಿತು ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ಕಾವ್ಯ ರಚನೆಯಲ್ಲಿ
ರೂಪಕ ಬಹು ಮುಖ್ಯ ಪಾತ್ರವಹಿಸುತ್ತದೆ ಹಾಗಾಗಿ ಕವಿಗಳು ಹೊಸ ಹೊಸ ರೂಪಕಗಳ ಹುಡುಕಾಟ ಬೇಕಾಗುತ್ತದೆ
ಎಂದರು.
ಹಿರಿಯ ಕವಿ ಹಾಗು ರಂಗಕಮರ್ಿ ಈಶ್ವರ ಹತ್ತಿ ಗಜಲ್
ಕುರಿತು ಮಾತನಾಡುತ್ತ ಹೈದರಾಬಾದ್ ಕನರ್ಾಟಕ ಪ್ರದೇಶದಲ್ಲಿ ಶಾಂತರಸ ಹೆಂಬೇರಾಳು ಅವರು ಕನ್ನಡದಲ್ಲ
ಗಜಲಿನ ಗಮ್ಮತ್ತು ತೋರಿಸಿದರು. ಮೂಲತಃ ಅದು ಅರಬ್ಬಿ ಭಾಷೆಯಲ್ಲಿ ಇದ್ದುದರಿಂದ ಅದು ನಮಗೆ ತಿಳಿಯುತ್ತಿರಲಿಲ್ಲ
ಎಂದರು.
ಸರಕಾರಿ ಮೊದಲ ದಜರ್ೆ ಕಾಲೇಜು ಪ್ರಾಚಾರ್ಯ ಹಾಗೂ
ವಿಮರ್ಶಕ ಡಾ. ಸಿ ಬಿ ಚಿಲ್ಕರಾಗಿ ಕವಿತೆ ಕುರಿತು ಮಾತನಾಡುತ್ತ, ಕಾವ್ಯ ಸಾಹಿತ್ಯದಲ್ಲಿ ಬಹುದೊಡ್ಡ
ಮಾಧ್ಯಮ. ಹಾಗಾಗಿ ಅದರ ಅಧ್ಯಯನ ಬಹಳ ಮುಖ್ಯ ಎಂದರು.
ಸಾಹಿತಿ ವಿಠ್ಠಪ್ಪ ಗೋರಂಟ್ಲಿ ರಂಗ ವಿಜ್ಞಾನಿ
ಹಾಲ್ಕುರಿಕೆ ಶಿವ ಶಿವಶಂಕರ್ ಕಾವ್ಯ ರಚನೆ ಹಾಗು ಹುಡುಕಾಟಗಳ ಕುರಿತು ಮಾತನಾಡಿದರು.
ಕವಿಗಳಾದ ಗಾಯಿತ್ರಿ ಬಾವಿಕಟ್ಟಿ, ಅರುಣಾ ನರೇಂದ್ರ,
ಅರಳಿ ನಾಗಭೂಷಣ, ಕಳಕೇಶ ಬಳಿಗಾರ, ಇಸ್ಮಾಯಿಲ್ ತಳಕಲ್, ವಿಜಯ ಅಮೃತರಾಜ, ವಿಜಯಲಕ್ಷ್ಮಿ ಕೊಟಗಿ, ಸೋಮಲಿಂಗಪ್ಪ
ಬೆಣ್ಣಿ, ಜಿ ಎಸ್ ಗೋನಾಳ ಕಾವ್ಯ ವಾಚಿಸಿದರು. ಕವಯಿತ್ರಿ
ಶಾಂತಾದೇವಿ ಹಿರೇಮಠ, ಸಾಹಿತಿಗಳಾದ ಎ ಎಂ ಮದರಿ, ಎಸ್
ಕಾಶೀಂ ಸಾಹೇಬ, ಮಹಾಂತೇಶ್ ಮಲ್ಲನಗೌಡರ್ ಹಾಗು ಶಂ ನಿ ತಿಮ್ಮನಗೌಡರ್ ವೇದಿಕೆಯಲ್ಲಿದ್ದರು. ಪ್ರಕಾಶಕ
ಡಿ ಎಂ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಶಿ ಕಾ ಬಡಿಗೇರ ಕಾರ್ಯಕ್ರಮ ನಿರೂಪಿಸಿದರ. ಕೊನೆಯಲ್ಲಿ
ಅಕ್ಬರ ಕಾಲಿಮಿಚರ್ಿ ವಂದಿಸಿದರು.