ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಜನರು, ಪ್ರಮುಖವಾಗಿ ರೈತರು ಕ್ಷಮಿಸಬಾರದು್; ಯಶವಂತ್ ಸಿನ್ಹಾ ಕರೆ

ಜುನಾಗಡ 01:  ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಜನರು ಕ್ಷಮಿಸಬಾರದು, ಕೇಂದ್ರ ಎನ್ ಡಿ ಎ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಯಶವಂತ್ ಸಿನ್ಹಾ ಕರೆ ನೀಡಿದ್ದಾರೆ.

ಗುಜರಾತಿನ ಜುನಾಗಡ ಜಿಲ್ಲೆಯ ವಾಂತಾಲಿ ಬಳಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಂಗಗಳಲ್ಲಿ ಪ್ರಧಾನಿ ಮೋದಿ ಸರ್ಕಾರ ವಿಫಲವಾಗಿದೆ. ಮುಖ್ಯವಾಗಿ  ಸರ್ಕಾರದ ನೀತಿಯಿಂದ ರೈತರು, ಯುವಕರು, ಮಹಿಳೆಯರು,ದಲಿತರು ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ರೈತರು ಪ್ರಧಾನಿ ಮೋದಿಯನ್ನು ಕ್ಷಮಿಸಬಾರದು ಎಂದು ಗುಡುಗಿದ್ದಾರೆ.  

ಕೇಂದ್ರ ಎನ್ ಡಿ ಎ ಸರ್ಕಾರ ಕೇವಲ ಹೊಸ ಹೊಸ ಘೋಷಣೆಗಳನ್ನು ಮಾತ್ರ ಮಾಡಿದೆ. ಭರವಸೆಗಳನ್ನು ಮಾತ್ರ ನೀಡುತ್ತೊದೆ ಹೊರತು ಯಾವುದೇ ಅನುಕೂಲಗಳನ್ನು ,ಆಡುತ್ತಿಲ್ಲ. ದೇಶದ ಯಾರಿಗೂ ಅನುಕೂಲ ಮಾಡದ ಈ ಸರ್ಕಾರವನ್ನು  ಮುಂದಿನ ಚುನಾವಣೆಯಲ್ಲಿ ಸೋಲಿಸುವುದರಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ ಎಂದರು.

ಹಿಂದೆ 2014ರ ಲೋಕಸಭಾ ಚುನಾವಣೆ ವೇಳೆ ತಾವೂ ಬಿಜೆಪಿಯಲ್ಲಿದ್ದು, ಪಕ್ಷವನ್ನು ಬೆಂಬಲಿಸಿದ್ದೆ. ಆದರೆ ಕೇಂದ್ರದ ನಡೆ ತಮಗೆ ನೋವು ತಂದಿದ್ದು, ಈಗ ಅದರಿಂದ ಹೊರಬಂದಿದ್ದೇನೆ. ಹಾಗೂ ಹಿಂದಿನ ಚುನಾವಣೆಯಲ್ಲಿ ತಾನು ಆಪಕ್ಷದಲ್ಲಿದ್ದಿದ್ದಕ್ಕೆ  ಕ್ಷಮೆಯಾಚಿಸುತ್ತೇನೆ. ಆದರೆ. ಮುಂದಿನ ಚುನಾವಣೆಯಲ್ಲಿ ಮೋದಿಯನ್ನು ಯಾವುದೇ ಕಾರಣಕ್ಕೂ ಮನ್ನಿಸಬೇಡಿ ಎಂದು ಕರೆ ನೀಡಿದರು.

ನರ್ಮದಾ ನದಿ ದಡದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿಮೋದಿಯವರಿಗೆ ರೈತರು ನೆನಪಿಗೆ ಬರಲಿಲ್ಲ. ಹೀಗಾಗಿ ಅವರು ರೈತರ  ಪರ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.