ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ: ಲಮಾಣಿ

ಲೋಕದರ್ಶನ ವರದಿ

ಶಿರಹಟ್ಟಿ 10: ಮತಕ್ಷೇತ್ರದಲ್ಲಿನ ಗ್ರಾಮಗಳು ಉದ್ದಾರವಾದಾಲೆ ಮತಕ್ಷೇತ್ರ ಅಭಿವೃದ್ಧಿಯಾದಂತೆ, ದೇಶದಲ್ಲಿನ ಗ್ರಾಮೀಣ ಭಾಗಗಳು ಉದ್ದಾರವಾದಲೇ ದೇಶ ಉದ್ದಾರವಾದಂತೆ. ಆದ್ದರಿಂದ ಗ್ರಾಮಗಳಲ್ಲಿನ ಮೂಲ ಭೂತ ಬೇಡಿಕೆಗಳನ್ನು ಈಡೇರಿಸಿದಾಗಲೇ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಅವರು ತಾಲೂಕಿನ ಹೊಳಲಾಪುರ ಗ್ರಾಮದಲ್ಲಿ 10 ಲಕ್ಷ ಮೊತ್ತದ ಸಿಸಿರಸ್ತೆ ಮತ್ತು 25 ಲಕ್ಷ್ ಮೊತ್ತದ ಮೇಲಸ್ತರದ ಜಲಾಗಾರ ನಿಮರ್ಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಮತಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯವನ್ನು ಒದಗಿಸುವುದಕ್ಕಾಗಿ ಆದ್ಯತೆ ಯನ್ನು ನೀಡಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ದೇವಕ್ಕ ಲಮಾಣಿ, ತಾಪಂ ಸದಸ್ಯರಾದ ಮಂಜುನಾಥ ಜೋಗಿ, ಬಸವರಾಜ ಮತ್ತೂರ, ಮಲ್ಲೇಶಪ್ಪ ಲಮಾಣಿ, ದ್ಯಾಮಣ್ಣ ಜೆಲ್ಲಿಗೇರಿ, ನೀಲನಗೌಡ ಪಾಟೀಲ್, ಯಲ್ಲಪ್ಪ ಕರೆಣ್ಣವರ, ಮುತ್ತನಗೌಡ ಪಾಟೀಲ್, ಮುತ್ತಪ್ಪ ಡೊಂಕಬಳ್ಳಿ, ಬಸವರಾಜ ನಾಯ್ಕರ, ರಮೇಶ ಡೊಂಕಬಳ್ಳಿ, ಮುಂತಾದವರು ಉಪಸ್ಥಿತರಿದ್ದರು.