ಲೋಕದರ್ಶನ ವರದಿ
ಬೆಳಗಾವಿ 31: ಭಕ್ತಿ ಮಾರ್ಗ ಭಗವಂತನ ಕಡೆ ಕರೆದುಕೊಂಡು ಹೋಗುವ ಮಾರ್ಗ. ಭಕ್ತನಾದವನಲ್ಲಿ ನಿಜವಾದ ಭಕ್ತಿ. ಮನುಷ್ಯನಲ್ಲಿ ಭಕ್ತಿ ಎನ್ನುವುದು ಇತ್ತು ಎಂದರೆ ಭಗವಂತ ಒಪ್ಪ್ಪುತ್ತಾನೆ ಎಂದು ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರು ಹೇಳಿದರು.
ನಗರದ ಉಷಾಕಾಲೋನಿಯಲ್ಲಿರುವ ಲಕ್ಷ್ಮೀ ದೇವಸ್ಥಾನದ ವಾಷರ್ಿಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಭಗವಂತನು ಒಪ್ಪುವ ಹಾಗೂ ಅಪ್ಪುವ ಹಾಗೆ ನಮ್ಮ ಬದುಕು ಇರಬೇಕಾದರೆ ನಾವು ಎಂದಿಗೂ ನಿಸ್ವಾರ್ಥ ಬುದ್ದಿಯಿಂದ ಇರಬೇಕು. ಮಠ ಮಂದಿರ ಮಾಡುವ ಕೆಲಸ ಭಕ್ತನಲ್ಲಿ ಅಹಂಕಾರವನ್ನು ಕಳೆದು ಭಗವಂತನ ಭಾಗಿಲ ಕಡೆ ಕರೆದುಕೊಂಡು ಹೋಗುವ ಅಪರೂಪದ ಕಾರ್ಯ ಮಾಡುತ್ತದೆ ಎಂದರು.
ಯಾವುದೇ ಸಂಪ್ರದಾಯವಿರಲಿ ಆ ಸಂಪ್ರದಾಯದಲ್ಲಿ ಹೇಳುವುದು ಇಷ್ಟೆ. ಎಲ್ಲರನ್ನು ಪ್ರೀತಿಸಿ ಎಲ್ಲರೊಂದಿಗೆ ಬೇರತಿರು ಎಲ್ಲರೂ ನನ್ನವರು ಎಂದು ತಿಳಿ ಎನ್ನುವ ವಿಚಾರ. ಈ ವಿಚಾರವನ್ನು ಅಥರ್ೈಸಿಕೊಂಡು ಮನುಷ್ಯ ಸತೃಪ್ತಿಯಿಂದ ಇರಬೇಕು ಎಂದರು.
ಉತ್ತರ ಕನರ್ಾಟಕ ಭಾಗದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಭಕ್ತರಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ದೇವಸ್ಥಾನದ ಧರ್ಮದಶರ್ಿ ಡಾ. ಶಿವರಾಮ ಮಾತನಾಡಿ, ಲಕ್ಷ್ಮೀ ದೇವಸ್ಥಾನಕ್ಕೆ ಈಗಾಗಲೇ ರಂಭಾಪುರಿ, ಉಜ್ಜೈನಿ, ಶ್ರೀಶೈಲ, ಕಾಶಿ ಜಗದ್ಗುರುಗಳು ಆಗಮಿಸಿ ಆಶೀರ್ವದಿಸಿದ್ದಾರೆ. ನಮ್ಮ ಉದ್ದೇಶ ಪಂಚಪೀಠಾಧೀಶರು ಸರ್ವ ಧರ್ಮರಿಯರಿಗೂ ಕೂಡ ಗುರುಗಳಾಗಿರುವುದರಿಂದ ಅವರ ಆಶೀವರ್ಾದ ನಗರಕ್ಕೆ ಆಗಲಿ ಎಂದು ನಾವು ಪ್ರತಿ ವರ್ಷ ಪಂಚಪೀಠಾಧೀಶರನ್ನು ಹುಕ್ಕೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಕರೆಸುತ್ತಿದ್ದೇವೆ ಎಂದರು.
ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಹಂಕಾರವನ್ನು ಕಡಿಮೆ ಮಾಡಿಕೊಂಡಾಗ ಭಗವಂತನ ಅನುಗ್ರಹವಾಗಲು ಸಾಧ್ಯ. ನಾನೇನು ಎಂಬುದು ಬಿಡಿರೋ ನರಕವೇ ಪ್ರಾಪ್ತಿ ಜ್ಞಾನಿಗಳ ಒಡನಾಡಿರೋ ಎಂಬ. ಮಹಾತ್ಮರ ಸಂದೇಶ ಅರಿತು ಬಾಳಿದರೆ ನಿತ್ಯವೂ ಆನಂದವಾಗಿರಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಲಕ್ಷ್ಮೀ ದೇವಸ್ಥಾನದ ವತಿಯಿಂದ ನಗರದ ಚನ್ನಮ್ಮ ವೃತ್ತದಿಂದ ಕ್ಲಬ್ ರಸ್ತೆಯ ಮಾರ್ಗವಾಗಿ ಲಕ್ಷ್ಮೀ ದೇವಸ್ಥಾನದ ವರೆಗೂ ಶ್ರೀಶೈಲ್ ಜಗದ್ಗುರುಗಳ ಸಾರೋಟದ ಉತ್ಸವದೊಂದಿಗೆ ಕರೆತರಲಾಯಿತು.
ದೇವಸ್ಥಾನ ಸಮಿತಿಯ ಮಾತೆಯರು ಪ್ರಾರ್ಥನೆ ಮಾಡಿದರು. ಮಠದ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ವೀರುಪಾಕ್ಷಯ್ಯ ನೀರಲಗಿಮಠ ಮಾತನಾಡಿದರು. ವೇದಿಕೆ ಮೇಲೆ ಗೋಕಾಕದ ಬ್ರಹ್ಮಾನದಂದ ಸ್ವಾಮೀಜಿ, ಚಂದ್ರಶೇಖರಯ್ಯ ಸಾಲಿಮಠಸವಡಿ, ಲಕ್ಷ್ಮೀ ದೇವಸ್ಥಾನದ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.