ಲೋಕದರ್ಶನ ವರದಿ
ಯಲಬುರ್ಗಾ 06: ಸದಸ್ಯತ್ವ ಅಭಿಯಾನದ ಮೂಲಕ ಎಲ್ಲಾ ವರ್ಗದ ಜನರನ್ನು ಸದಸ್ಯತ್ವ ಮಾಡುವ ಮೂಲಕ ಒಂದುಗೂಡಿಸಿ ಪಕ್ಷದ ಶಕ್ತಿಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಅದಕ್ಕೆ ಸಂಘಟನೆಯು ಪಕ್ಷದ ಮೂಲಭೂತ ಶಕ್ತಿಯಾಗಿದೆ ಎಂದು ತಾಲೂಕ ಅದ್ಯಕ್ಷ ರತನ್ ದೇಸಾಯಿ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಏಕತೆಗೆ ಪ್ರಾಣತ್ಯಾಗ ಮಾಡಿದ ಪಕ್ಷದ ಸಂಸ್ಥಾಪಕ ಶ್ಯಾಂಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ 45 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ ಜುಲೈ 7ರಿಂದ ಆಗಸ್ಟ್ 11ರವರೆಗೆ ಅಭಿಯಾನ ನಡೆಯಲಿದೆ ಮಾಡುವ ಗುರಿ ಹೊಂದಲಾಗಿದೆ ಹಾಗೂ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಮಾಡುವುದಷ್ಟೆ ನಮ್ಮ ಉದ್ದೇಶವಲ್ಲ ಜತೆಗೆ ಪ್ರತಿ ಬೂತ್ನಲ್ಲಿ ಹತ್ತು ಸಸಿ ನೆಡುವುದು, ಒತ್ತು ನೀಡುವುದಕ್ಕಾಗಿ ಎಂದರು.
ನಂತರ ಮಾತನಾಡಿದ ಮಾಜಿ ಜಿಪಂ ಸದಸ್ಯರಾದ ಈರಪ್ಪ ಕುಡಗುಂಟಿ ಜನರು ಬಿಜೆಪಿ ಸದಸ್ಯರಾಗಲು ಸಿದ್ಧರಿದ್ದಾರೆ ನಾವು ಅವರ ಬಳಿ ಹೋಗಬೇಕಾಗಿದೆ. ಮತದಾರರ ಪಟ್ಟಿ ಹಿಡಿದು ಸದಸ್ಯತ್ವ ಮಾಡಿದ ಕಾಂಗ್ರೆಸ್ ಜನರಿಂದ ದೂರವಾಗಿದೆ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗೆ ತಿರಸ್ಕಾರ ಉಂಟಾಗಿದೆ ಆದರು ರಾಜ್ಯದಲ್ಲಿ ರಾಜಕಾರಣ ಮಾಡುವ ಹಂತಕ್ಕೆ ಸಮ್ಮಿಶ್ರ ಸಕರ್ಾರ ಬಂದಿದ್ದರು ಅದು ಸಾದ್ಯವಾಗುತ್ತಿಲ್ಲಾ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆ ಆಗುತ್ತಿಲ್ಲ ಸಾಲಮನ್ನಾ ವಿಚಾರ ಗೊಂದಲದ ಗೂಡಾಗಿದೆ ಮೋಸದ ರಾಜಕೀಯದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ ಸದಸ್ಯತ್ವ ಅಭಿಯಾನಕ್ಕೆ ತಾಲೂಕಿನಲ್ಲಿ ಅತಿಹೆಚ್ಚು ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಪ್ರತಿ ಬೂತ ಮಟ್ಟದಲ್ಲಿ ಕನಿಷ್ಠ 200 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಯುವಕರು, ಮಹಿಳೆಯರು ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗುವುದು ಎಂದರು.
ಎ,ಪಿಎಮ್.ಸಿ ಸದಸ್ಯರಾದ ಹಂಚಾಳಪ್ಪ ತಳವಾರ್ ಮಾತನಾಡಿ ಮೋದಿಯವರನ್ನು ನಮ್ಮ ದೇಶದ ಜನತೆ ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ ಭ್ರಷ್ಟಾಚಾರ ರಹಿತ ಆಡಳಿತದಿಂದ ಭಾರತ ದೇಶದ ಜನ ಹೆಮ್ಮೆ ಪಡುವಂತಾಗಿದೆ, ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದು ಅದರಲ್ಲಿ ಮಹಿಳೆಯರ, ಬಡವರ, ದಿನ ದಲಿತರ, ರೈತರ ಪರವಾದ ಯೋಜನೆಗಳು ಸಾಕಷ್ಟು ಜನಮನ ಗೆದ್ದಿವೆ ಅದರಂತೆ ದೇಶದ ಭದ್ರತೆ ಹೆಚ್ಚಾಗಿದೆ ವೈರಿ ರಾಷ್ಟ್ರಗಳು ಭಾರತವನ್ನು ಕಂಡು ಭಯ ಪಡುವಂತ ಪರಸ್ಥಿತಿಯನ್ನು ನಿಮರ್ಾಣ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರು, ಸದಸ್ಯ ರಾಮಣ್ಣ ಹೊಸಮನಿ, ಜಿಲ್ಲಾ ಪ್ರದಾನ ಕಾರ್ಯದಶರ್ಿ ಚಂದ್ರಶೇಖರ ಹಲಗೇರಿ, ಶಿವಶಂಕರ್ ದೇಸಾಯಿ, ಬಸವರಾಜ ಗೌರಾ, ರಸೂಲಸಾಬ ದಮ್ಮೂರು, ಶರಣಪ್ಪ ಬಣ್ಣದಬಾವಿ, ವೀರಣ್ಣ ಹುಬ್ಬಳ್ಳಿ, ಶಿವನಗೌಡ್ರ ಬನ್ನಪ್ಪಗೌಡ್ರ, ಸಿದ್ರಾಮೇಶ್ವರ ಬೆಲೇರಿ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ವಸಂತ ಬಾವಿಮನಿ, ಈರಪ್ಪ ಬಣಕಾರ, ಶಿವಾನಂದ ಬಣಕಾರ್, ಪ್ರಭುರಾಜ ಕಲಬುಗರ್ಿ, ಸೇರಿದಂತೆ ಅನೇಕರು ಹಾಜರಿದ್ದರು.