ಲಕ್ಷ್ಮೀ ನಾರಾಯಣ ನಾಗವಾರ ಅವರ ನಿಧನದ ಅಂತ್ಯಕ್ರಿಯನ್ನು ಸರಕಾರಿ ಗೌರವದೊಂದಿಗೆ ನೇರವೆರಿಸಿದ್ದು ಸಂಘಟನೆ

The organization conducted the funeral of Lakshmi Narayana Nagawara with state honors

ಲಕ್ಷ್ಮೀ ನಾರಾಯಣ ನಾಗವಾರ ಅವರ ನಿಧನದ ಅಂತ್ಯಕ್ರಿಯನ್ನು ಸರಕಾರಿ ಗೌರವದೊಂದಿಗೆ ನೇರವೆರಿಸಿದ್ದು ಸಂಘಟನೆ

ಜಮಖಂಡಿ  05 : ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ದಿಟ್ಟ ಹೋರಾಟಗಾರರು. ದಲಿತರಲ್ಲಿ ಜಾಗೃತಿ ಮೂಡಿಸಿವ ನಾಯಕರು ನಿಧನ ಹೊಂದಿರುವದು ದಲಿತ ಸಮುದಾಯಕ್ಕೆ ತುಂಬಲಾರದಷ್ಟು ನಷ್ಟವಾಗಿದೆ. ಸರಕಾರ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ಸರಕಾರಿ ನೌಕರಿಯನ್ನು ನೀಡಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ರಾಜ್ಯ ಸಂಘಟನಾ ಸಂಚಾಲಕ ಶ್ಯಾಮರಾವ ಘಾಟಗೆ ಒತ್ತಾಯಿಸಿದರು.ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಲಕ್ಷ್ಮೀ ನಾರಾಯಣ ನಾಗವಾರ ಅವರ ನಿಧನದ ಅಂತ್ಯಕ್ರಿಯನ್ನು ಸರಕಾರಿ ಗೌರವದೊಂದಿಗೆ ನೇರವೆರಿಸಿದ್ದು ಸಂಘಟನೆಯು ಧನ್ಯವಾಗಳನ್ನು ತಿಳಿಸುತ್ತದೆ. ಲಕ್ಷೀ ನಾರಾಯಣ ನಾಗವಾರ ಗ್ರಾಮದಲ್ಲಿ ಜನಿಸಿದರು. ಮೂರನೇ ಮಗನಾಗಿದ್ದು. ಹೋರಾಟ ಆಸಕ್ತಿ ಹೊಂದಿದ್ದರು. ಪ್ರೋ,ಬಿ,ಕೃಷ್ಣಪ್ಪ, ದೇವನೂರ ಮಾದೇವ ಅವರಿಂದ ಹೋರಾಟದಲ್ಲಿ ಧುಮುಕಿದರು. ಡಿ,ಜಿ,ಸಾಗರ ಅವರ ಜೊತೆ ಸೇರಿ ರಾಜ್ಯಾದ್ಯಂತ ಸಂಘಟನೆ ಮಾಡಿದರು. ಸಾಹಿತ್ಯ ಯು,ಅರ್, ಅನಂತಮೂರ್ತಿ, ಕೆ,ಸಿ, ಗುರ​‍್ಪ, ಜಿ,ಕೆ, ಗೋವಿಂದರಾವ, ಅನುಪನಾ, ಅನುಸುಯಾ ಕಾಂಬಳೆ ಇನ್ನೂ ಅನೇಕ ಸಾಹಿತ್ಯಗಳ ಮಾರ್ಗದರ್ಶನದಲ್ಲಿ ಸಂಘಟನೆ ಮಾಡಿದರು. ಹಲವಾರು ಕೃತಿಗಳನ್ನು ಬರೆದಿದ್ದಾರೆ. ಆತಂಕ, ಭಕ್ತದ ಬೆಳಂದಿಗಳು, ಬೆಳದಿಂಗಳ ಹೊನಲು ಹೀಗೆ ಹಲವು ಕೃತಿ ಬರೆದಿದ್ದಾರೆ. ಬೂತಾ ಚಳವಳಿಯಲ್ಲಿ ಬೂತಾ ಕೃತಿ ಸಹವನ್ನು ಬರೆದಿದ್ದಾರೆ. ಬುದ್ದ, ಬಸವ, ಗಾಂಧಿ ದತ್ತಿ ಪ್ರಶಸ್ತಿ, ಟೀಪು ಪ್ರಶಸ್ತಿ ದೊರಕಿವೆ. ಅವರೊಬ್ಬರು ದಿಟ್ಟ ಹೋರಾಟಗಾರರು, ತರಬೇತಿ ಶಿಬಿರಗಳನ್ನು, ಧರಣಿ ಸತ್ಯಾಗ್ರಹ ಹೋರಾಟ ಮಾಡುವ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸಿದರು ಎಂದರು. 

ಇವಾಗ ಅವರ ನಿಧನದಿಂದ ದಲಿತ ಸಂಘಟನೆಯು ಆತಂಕದಲ್ಲಿ ಆವರಿಸಿದೆ. ನಡೆದು ಬಂದ ದಾರಿಯಲ್ಲಿ ಮುಂದೆ ನಡೆಸಿಕೊಂಡು ಹೋಗುತ್ತದೆ. ಎಚ್,ಜಿ, ಮಾದೇವಪ್ಪನ್ನವರ ಹಾದಿಯಲ್ಲಿ ನಡೆಯುತ್ತದೆ. ಪ್ರಭು ಲಿಂಗಸೂರ, ಕಟ್ಟಿಮನಿ ಹೀಗೆ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ ನಡೆಯುತ್ತದೆ. ಇವಾಗ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಜೊತೆಗೆ ಸರಕಾರಿ ನೌಕರಿಯನ್ನು ನೀಡಬೇಕೆಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ನಗರಸಭೆ ಸದಸ್ಯ ಈಶ್ವರ ವಾಳೇನ್ನವರ, ಜಿಲ್ಲಾ ಸಂಘಟನಾ ಸಂಚಾಲಕ ಮುತ್ತಣ್ಣ ಮೇತ್ರಿ, ತಾಲೂಕಾ ಸಂಚಾಲಕ ಮಾರುತಿ ಮರೆಗುದ್ದಿ, ಸಂಘಟನಾ ಸಂಚಾಲಕ ಪ್ರಕಾಶ ಹುಗ್ಗೆನ್ನವರ, ರಮೇಶ ಪೂಜಾರಿ, ಬಸವರಾಜ ಜಮಖಂಡಿ,ರಾಜು ಲೋಕಂಡೆ, ಅರುಣ ಲಳಿ, ಸುನೀಲ ಘಾಟಗೆ ಸೇರಿದಂತೆ ಅನೇಕರು ಇದ್ದರು.