ಲೋಕದರ್ಶನ ವರದಿ
ಕಂಪ್ಲಿ11: ತಾಲೂಕು ಸಮೀಪದ ರಾಮಸಾಗರ ಗ್ರಾಮದ 1ನೇ ವಾಡರ್್ನ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ 8 ಲಕ್ಷ ವೆಚ್ಚದಲ್ಲಿ ನಿಮರ್ಿಸಿರುವ 1ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಜೆ.ಎನ್.ಗಣೇಶ್ ಶನಿವಾರ ಉದ್ಘಾಟಿಸಿದರು.
ನಂತರ ಶಾಸಕ ಮಾತನಾಡಿ, ನಾಡಿನ ಜನತೆಗೆ ಟಿಪ್ಪು ಜಯಂತಿಯ ಶುಭಾಶಯಗಳು.
ಟಿಪ್ಪು ಜಯಂತಿ ರಾಜಕೀಯವಾಗಿ ಮಾರ್ಪಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ.
ಭಾರತ ದೇಶದಲ್ಲಿನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರು ಒಂದೇ. ಟಿಪ್ಪು ಜಯಂತಿಯಲ್ಲಿ ರಾಜಕೀಯ ಬೆರತಿದೆ.
ಕಂಪ್ಲಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ರಾಮಸಾಗರ ಅಥವಾ ದೇವಸಮುದ್ರ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜ್ ತೆರೆಯಲು ಈಗಾಗಲೇ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮುಂದಿನ ದಿನದಲ್ಲಿ ಗ್ರಾಮೀಣ ಭಾಗದ ಕಾಲೇಜು ವಿದ್ಯಾಥರ್ಿಗಳ ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಸದಸ್ಯ ಎಚ್.ಜಗದೀಶಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಇಟಿಗಿ ಬಸವರಾಜಗೌಡ, ಮುಖಂಡರಾದ ಎಚ್.ಶಿವಶಂಕರಗೌಡ, ಬಿ.ನಾರಾಯಣಪ್ಪ, ಗ್ರಾಪಂ ಅಧ್ಯಕ್ಷೆ ಆನೆ ಪಾರ್ವತಮ್ಮ, ಸದಸ್ಯರಾದ ಆರ್.ಎಂ.ರಾಮಯ್ಯ, ಮಂಜುನಾಥ, ಎನ್.ರಂಗಪ್ಪ, ಶರಣಪ್ಪ, ಹುಸೇನಪ್ಪ, ರಾಘವೇಂದ್ರ, ಉಜ್ಜಿನಿ ಯಂಕಮ್ಮ, ಶಿವಮ್ಮ, ಪಿಡಿಒ ಹನುಮಂತಪ್ಪ, ಕಾರ್ಯದಶರ್ಿ ನಾಗರಾಜರಾವ್, ಅಂಗನವಾಡಿ ಮೇಲ್ವಿಚಾರಕಿ ಎಲ್.ಡಿ.ನದಾಫ್, ಅಂಗನವಾಡಿ ಶಿಕ್ಷಕಿಯರಾದ ಮಂಜುಳಾ, ನೀಲಮ್ಮ, ಸರಸ್ವತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.