ಗೌರವಯುತ ಜೀವನ ಪಡೆಯಲು ಹೋರಾಟವೊಂದೆ ಏಕೈಕ ಮಾರ್ಗ

ಲೋಕದರ್ಶನ ವರದಿ

ಹೋಸಪೇಟೆ 09:ಆಲ್ ಇಂಡಿಯಾ ಯುನೈಟೆಡೆ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತೆಯರ ಸಂಘ(ರಿ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಸಂಘನೆಗಳು ಜಂಟಿಯಾಗಿ 8.9 ನೇ ಜನವರಿ 2019ರಂದು 2 ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದದ ಅಂಗವಾಗಿ ಹೊಸಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದವು.

ವಿವಿಧ ಬೇಡಿಕೆಗಳು ಎಲ್ಲಾ ಕಾಮರ್ಿಕರಿಗೂ ರೂ.18000/- ಕನಿಷ್ಠ ವೇತನ ನಿಗದಿಮಾಡಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕರಣ ಗೊಳಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆ ಹಾಕಬೇಕು ಮತ್ತು ಕಾಳ ಸಂತೆ ವ್ಯಾಪಾರವನ್ನು ನಿಷೇಧಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಬಗೆ ಹರಿಸಲು ಮತ್ತು ಹೊಸ ಉದ್ಯೋಗ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಮರ್ಿಕ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕೆಲಸ ಕಳೆದುಕೊಂಡ ಎಲ್ಲ ಗಣಿ ಕಾಮರ್ಿಕರಿ ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ನೀಡಬೇಕು. ಆಶಾ-ಅಂಗನವಾಡಿ-ಬಿಸಿಯೂಟ ನೌಕರರ ಸೇವೆಯನ್ನು ಕಾಯಂ ಗೊಳಿಸಬೇಕು. ಎಲ್ಲಾ ನೀವೃತ್ತ ಕಾಮರ್ಿಕರಿಗೆ ಕನಿಷ್ಠ ಪಕ್ಷ ತಿಂಗಳಿಗೆ ರೂ.6000/- ಗಳಿಗೆ ಕಡಿಮೆ ಇಲ್ಲದಂತೆ ಪಿಂಚಣಿ ನೀಡಬೇಕು ಸ್ಪಾಂಜ್ ಐರನ್ ಫ್ಯಾಕ್ಟರಿಗಳಲ್ಲಿ ಕೆಲಸಮಾಡುವ ಕಾಮರ್ಿಕರಿಗೆ ಕನಿಷ್ಠ ವೇತನ ಪಿಎಫ್, ಈಎಸ್ಐ ರಜೆ ಮುಂತಾದ ಸೌಲಭ್ಯಗಳನ್ನು ನೀಡಬೇಕು ಕಾಯಂ ಸ್ವರೂಪದ ಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಗುತ್ತಿಗೆ ಕಾಮರ್ಿಕರಿಗೂ ಕಾಯಂ ಕಾಮರ್ಿಕರಂತೆಯೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರೈಲ್ವೆ, ವಿಮೆ ಹಾಗೂ ರಕ್ಷಣಾ ಕ್ರೇತ್ರದಲ್ಲಿ ವಿದೇಶಿ ನೇರ ಬಂಡವಾಳ ಬೇಡ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ನೂರಾರು ಆಶಾ ಕಾರ್ಯಕತರ್ೆಯರು, ಯುವಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮುನ್ಸಿಪಲ್ ಮೈದಾನದಿಂದ ಆರಂಭವಾಗಿ ಹೊಸಪೇಟೆಯ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆ ತಹಶಿಲ್ದಾರರ ಕಛೇರಿಯಲ್ಲಿ ಸಮಾವೇಶ ಗೊಂಡಿತು. ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸಕರ್ಾರ ದೆಹಲಿ ಇವರಿಗೆ ಕಾಮರ್ಿಕರ ಹಕ್ಕೊತ್ತಾಯಗಳ ಪತ್ರವನ್ನು ಮಾನ್ಯ ತಹಶಿಲ್ದಾರರು ಹೊಸಪೇಟೆ ಇವರ ಮುಖಾಂತರ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕಾಂ. ಮಂಜುಳಾ ರಾಜ್ಯ ಉಪಾಧ್ಯಕ್ಷರು ಕೇಂದ್ರದಲ್ಲಿ ಆಳ್ವಿಕೆ ಮಾಡಿದ ಎಲ್ಲ ಸಕರ್ಾರಗಳು ಶ್ರೀಮಂತ ವರ್ಗದ ಸೇವೆಯನ್ನು ಮಾಡಲಿಕ್ಕೆ ನಿಂತಿವೆ, ಕಾಪರ್ೋರೆಟ್ ದಣಿಗಳ ಸನ್ನೆಯಂತೆ ಕೆಲಸ ಮಾಡುತ್ತಿವೆ. ಕೇಂದ್ರ ಸಕರ್ಾರಗಳು ಬಂಡವಾಳಶಾಹಿಗಳ ಪರವಾದ ನಿಯಮಗಳನ್ನು ಜಾರಿಗೆ ತರುವ ಕಾರಣ ಇಂದು ನಿರುದ್ಯೋಗ, ಅಗತ್ಯವಸ್ತುಗಳ ಬೆಲೆಏರಿಕೆ, ಗುತ್ತಿಗೆಪದ್ಧತಿ, ಕಾಮರ್ಿಕ ಕಾನೂನುಗಳ ಸಡಿಲಿಕೆ ಇತ್ಯಾದಿಗಳು ಜರಗುತ್ತಿವೆ. ಇದರಿಂದಾಗಿ ದೇಶದಲ್ಲಿ ಅಪಾರವಾದ ಬಡತನ, ನಿರುದ್ಯೋಗ, ಬೆಲೆಏರಿಕೆ ಎಲ್ಲ ಜನರನ್ನು ದಿನನಿತ್ಯ ಕಾಡುತ್ತಿವೆ. ಕಾಖರ್ಾನೆಗಳಲ್ಲಿ ನೌಕರರ ವಜಾ, ನಿರುದ್ಯೋಗಿ ಯುವಕರ ಹಾಗೂ ರೈತರ ಆತ್ಮಹತ್ಯೆಗಳು ದಿನನಿತ್ಯದ ಸಂಗತಿಗಳಾಗಿರುವುದು ವಿಷಾಧನೀಯ. ಇವುಗಳ ವಿರುದ್ಧ್ಧ ರಾಷ್ಟ್ರಮಟ್ಟದಲ್ಲಿ ರೈತರ ಕೃಷಿಕರ ಕಾಮರ್ಿಕರ ಹೋರಾಟಗಳು ಎಳ್ಳುತ್ತಿರುವುದು ಅನ್ಯಾಯವನ್ನು ಮತ್ತು ಅನೀತಿಯನ್ನು, ಸಹಿಸುವುದಿಲ್ಲ ಎಂದು ಸಕರ್ಾರಕ್ಕೆ ಸ್ಪಷ್ಟ ಸಂದೇಶವನ್ನು ನೀಡಿವೆ. ಒಂದು ಸಮಾನತೆಯ ತಳಹದಿಯ ಮೇಲಿನ ಸಮಾಜದ ನಿಮರ್ಾಣಕ್ಕೆ ಹೋರಾಟವೊಂದೆ ದಾರಿ. ಇದಕ್ಕೆ ಯಾವುದೇ ಒಳಮಾರ್ಗಗಳು ಇರುವುದಿಲ. ಕಾಮರ್ಿಕ ವರ್ಗವು ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯಗಳನ್ನು ಮೀರಿ ತಮ್ಮ ಸಮಾನ ಸಮಸ್ಯೆಗಳ ಬಗ್ಗೆ, ಸಮಾನ ಶೋಷಣೆಯ ಬಗ್ಗೆ ಸಂಘಟಿತರಾಗಿ ಪ್ರಬಲ ಐಕ್ಯ ಹೋರಾಟವನ್ನು ಬೆಳೆಸ ಬೇಕು ಎಂದು ಕರೆಯಿತ್ತರು. ಉದ್ಯೋಗ ರಹಿತ ಸ್ಥಿತಿಯು ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣ. ಬಂಡವಾಳಶಾಹಿ ವ್ಯವಸ್ಥೆಯನ್ನು ಬದಲಾಯಿಸಿ ಸಮಾನತೆಯ ಮೇಲೆ ನಿಂತ ಸಮಾಜವಾದಿ ಸಮಾಜವನ್ನು ನಿಮರ್ಿಸಲು ಕಾಮರ್ಿಕ ವರ್ಗವು ಮುಂದಾಗಬೇಕು ಎಂದು ಎಐಡಿವೈಓ ಯುವಜನ ಸಂಘಟನೆಯ ರವಿ ಮಾತನಾಡಿದರು. ಮೆರವಣಿಗೆಯಲ್ಲಿ ಆಶಾ ಕಾರ್ಯಕತರ್ೆಯರಾದ ನಾಯಕರುಗಳಾದ ಹೇಮಾವತಿ, ರೇಖಾ, ವೀರಮ್ಮ, ಸುಜಾತಾ, ಮಾರೆಕ್ಕ, ಭುವನಾ, ಲಕ್ಷ್ಮೀದೇವಿ, ಎಐಎಮ್ಎಸ್ಎಸ್ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ರೇಖಾ, ಭುವನ, ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಸಮಿತಿಯ ನಾಯಕರುಗಳಾದ ರವಿ, ಅಭಿಷೇಕ್, ಹುಲುಗಪ್ಪ ಉಪಸ್ಥಿತರಿದ್ದರು.