ಧಾರವಾಡ:14: 12 ನೇ ಶತಮಾನದಲ್ಲಿ ಬಸವಣ್ಣನ್ನವರು ವಚನಗಳ ಮೂಲಕ ನೈತಿಕ ನೆಲಗಟ್ಟಿನ ಮೇಲೆ ಅಂದ ಶ್ರದ್ಧೆ, ಕಂದಾಚಾರ ಜಾತೀಯತೆ, ಲಿಂಗ ತಾರತಮ್ಯ ಹೊಗಲಾಡಿಸಿದ ಸಾಮಾಜಿಕ ಸುಧಾರಕ ಏಕೈಕ ವ್ಯಕ್ತಿ ಎಂದರೆ ಬಸವಣ್ಣನವರು ಎಂದು ಕನರ್ಾಟಕ ವಿಶ್ವವಿದ್ಯಾಲಯದ ಬಸವ ಪೀಠ ಅಧ್ಯಯನದ ನಿದರ್ೇಶಕರು ಹಾಗೂ ಪ್ರಾಧ್ಯಾಪಕರಾದ ಡಾ. ಸಿ.ಎಂ.ಕುಂದಗೋಳ ಹೇಳಿದರು.
ಅವರು ನಗರದ ಅಕ್ಕನ ಬಳಗದಲ್ಲಿ ಇಂದು ಆಯೋಜಿಸಲಾಗಿದ್ದ ಬಸವಜಯಂತಿ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸ್ತ್ರೀಯರ ಸಮಾನತೆ ಅವರ ಹಕ್ಕುಗಳ ಕುರಿತಂತೆ ಪ್ರಪ್ರಥಮವಾಗಿ ಹೋರಾಡಿದ ವ್ಯಕ್ತಿ ಬಸವಣ್ಣನವರು ಅಷ್ಟೇಯಲ್ಲದೆ ಪರಸತಿ, ಪರಧನಗಳ ವ್ಯಾಮೋಹಕ್ಕೊಳಗಾಗದೆ ಕಾಯಕ ಜೀವಿಯಾಗಿ ಬದುಕುತ್ತ ಸಮಾಜಕ್ಕೆ ಪ್ರೇರಣೆಯಾಗಿ ಅಂತರಜ್ಯಾತಿ ವಿವಾಹಗಳನ್ನು ನಡೆಸುವ ಮೂಲಕ ಕಲ್ಯಾಣ ಕ್ರಾಂತಿಗೆ ಮುನ್ನೂಡಿ ಬರೆದರು.
ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಅವರ ಆಚರಣೆಗಳು ಇಂದಿಗೂ ಅರ್ಥ ಪೂರ್ಣವಾಗಿವೆ.
ಮಾತು ಕೃತಿಗಳ ನಡುವೆ ವ್ಯತ್ಯಾಸವಿಲ್ಲದಂತೆ ಬದುಕಿ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ರೂಪಗೊಂಡವರೆ ಬಸವಣ್ಣನವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಕನ ಬಳಗದ ಅಧ್ಯಕ್ಷರಾದ ಮೀನಾಕ್ಷಿ ಕೋಟುರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಲತಾ ಶಹಾಪೂರ, ಕುಸುಮಾ ಒತಗೇರಿ, ಪುಷ್ಪಾ ಪಾಟೀಲ್ ಉಪಸ್ಥಿತರಿದ್ದರು.