ವೃದ್ಧೆ ಕಾಣೆ
ಹಾವೇರಿ 11: ರಾಣೇಬೆನ್ನೂರ ತಾಲೂಕು ಮಣಕೂರ ಗ್ರಾಮದ 65 ವರ್ಷದ ಶಾಂತಮ್ಮ ಗಿರಿಯಪ್ಪ ಹರಿಹರ ಎಂಬ ವೃದ್ಧೆ ಮಾರ್ಚ್ 7 ರಂದು ಮನೆಯಿಂದ ಹೋದವಳು ಕಾಣೆಯಾಗಿರುವುದಾಗಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾಣೆಯಾದ ವೃದ್ಧೆ 5.2 ಫೂಟ್ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಕೇಸರಿ ಬಣ್ಣದ ಸೀರೆ, ಹಸಿರು ಬಣ್ಣದ ಬ್ಲೌಜ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಹಲಗೇರಿ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.