ಲಖನೌ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಪೌರತ್ವ ಹಾಗೂ ಶಿಕ್ಷಣದ ಅರ್ಹತೆ ವಿಚಾರದಲ್ಲಿ ಭಿನ್ನತೆ ಇದೆ ಎಂದು ಪಕ್ಷೇತರ ಅಭ್ಯಥರ್ಿ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ಶನಿವಾರ ನಡೆಯಬೇಕಿದ್ದ ರಾಹುಲ್ ನಾಮಪತ್ರ ಪರಿಶೀಲನೆಯನ್ನು ರಿಟರ್ನಿಂಗ್ ಆಫೀಸರ್ ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಪೌರತ್ವ ವಿಚಾರಕ್ಕೆ ಸಂಬಮಧಿಸಿದಂತೆ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ ಹಾಗೂ ಅವರು ಯಾವುದೇ ಅಡಚಣೆ ಇಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸ್ಪಧರ್ಿಸಬಹುದಾಗಿದೆ. ರಾಹುಲ್ ಗಾಂಧಿ ಭಾರತದಲ್ಲಿ ಜನಿಸಿದ್ದು, ಈ ದೇಶದ ಪಾಸ್ ಪೋ ಹೊಂದಿದ್ದಾರೆ. ಅವರು ಇತರ ಯಾವುದೇ ರಾಷ್ಟ್ರದ ಪೌರತ್ವ ಹೊಂದಿಲ್ಲ, ಅವರ ಪಾಸ್ ಪೋರ್ಟ, ವೋಟರ್ ಐಡಿ, ಆದಾಯ ತೆರಿಗೆ ಎಲ್ಲವೂ ಭಾರತಕ್ಕೆ ಸೇರಿವೆ ಎಂದು ರಾಹುಲ್ ಪರ ವಕೀಲ ಕೆ. ಸಿ. ಕೌಶಿಕ್ ಹೇಳಿದ್ದಾರೆ. ಇದೇ ವೇಳೆ ರಾಹುಲ್ ಅವರ ಶಿಕ್ಷಣ ಅರ್ಹತೆ ಕುರಿತಂತೆ ಪ್ರತಿಕ್ರಿಯಿಸಿದ ಕೌಶಿಕ್, ರಾಹುಲ್ ವಿಂಚಿ ಯಾರು, ಅವರು ಎಲ್ಲಿಂದ ಬಂದರು ಎಂಬುದು ಗೊತ್ತಿಲ್ಲ. ರಾಹುಲ್ ಗಾಂಧಿ 1995ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಎಂಪಿಲ್ ಪದವಿ ಪಡೆದುಕೊಂಡಿದ್ದಾರೆ. ಅದರ ಪ್ರತಿಯನ್ನು ಲಗತ್ತಿಸಲಾಗಿದೆ ಎಂದು ಅವರು ಹೇಳಿದರು. ದೂರುದಾರರ ಪರ ವಕೀಲ ರವಿ ಪ್ರಕಾಶ್ ಮಾತನಾಡಿ, ಇಂಗ್ಲೆಂಡ್ ನೋಂದಣಿಯ ಕಂಪನಿಯ ಪ್ರಮಾಣ ಪತ್ರಗಳು ಕಾಂಗ್ರೆಸ್ ನಾಯಕರು ಬ್ರಿಟಿಷ್ ಪ್ರಜೆ ಎಂಬುದನ್ನು ತೋರಿಸುತ್ತವೆ ಎಂದು ಹೇಳಿದರು.