ಅಲೆಮಾರಿ ನಿಗಮ ಮಂಡಳಿ ರಚನೆ ಮಾಡುವಂತೆ ಮನವಿ

ಅಲೆಮಾರಿ ನಿಗಮ ಮಂಡಳಿ ರಚನೆ ಮಾಡುವಂತೆ ಮನವಿ

ಲೋಕದರ್ಶನ ವರದಿ

ಹೊಸಪೇಟೆ 04:ಪರಿಶಿಷ್ಟ ಜಾತಿ ಅಲೆಮಾರಿ, ಅರೆಅಲೆಮಾರಿ ಸೂಕ್ಷ್ಮ ಅತೀ ಸೂಕ್ಷ್ಮ ಸಮುದಾಯಗಳಾದ 2015-16ನೇ ಸಾಲಿನ ಅಲೆಮಾರಿ ಕೋಶ ಸ್ಥಾಪನೆಯಾಗಿ ಇದುವರೆಗೆ ಯಾವುದೇ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಅಲೆಮಾರಿ ಕೋಶದ ಜೊತೆಗೆ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಅತೀ ಸೂಕ್ಷ್ಮ ರಾಜ್ಯಧ್ಯಂತ ಸುಮಾರು 50 ಲಕ್ಷಕ್ಕು ಹೆಚ್ಚು ಜನ ಸಂಖ್ಯೆಯಿದ್ದು ಮತ್ತು ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಜನಸಂಖ್ಯೆ ಹೊಂದಿರುತ್ತದೆ. ಅಲೆಮಾರಿ ನಿಗಮ ರಚನೆ ಮಾಡಬೇಕೆಂದು ಹೇಳಿ ಕನರ್ಾಟಕ ಸಕರ್ಾರಕ್ಕೆ ಮನವಿ ಮೂಲಕ ಮುಂದೆ ನಡೆಯುವ ಬಜೆಟ್ನಲ್ಲಿ ಘೋಷಣೆ ಮಾಡಬೇಕೆಂದು ಹೇಳಿ, ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷರು ಸಣ್ಣಮಾರೆಪ್ಪರವರು ಒತ್ತಾಯ ಮಾಡಿದ್ದಾರೆ. ಮತ್ತು ನಿಗಮ ಮಾಡುವುದರ ಜೊತೆಗೆ ಎಲ್ಲ ಅಲೆಮಾರಿಗಳಿಗೆ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕೆಂದು ಎಲ್ಲ ಅಲೆಮಾರಿಗಳಿಗೆ ಹಂತ-ಹಂತವಾಗಿ ನ್ಯಾಯ ಸಿಗುವಂತದು, ಈಗಾಗಲೇ ಭಾರತ ಸಕರ್ಾರ ಅಲೆಮಾರಿ ಜನಾಂಗಳಿಗೆ ಪ್ರತ್ಯೇಕ ಅಭಿವೃದ್ದಿ ನಿಗಮ ರಚನೆ ಮಾಡಲು ಘೋಷಣೆ ಮಾಡಲಾಗಿದೆ ಇದ್ದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸಕರ್ಾರ ಕೂಡಲೇ ಅಭಿವೃದ್ದಿ ನಿಗಮ ಮಂಡಳಿಯನ್ನು ಘೋಷಣೆ ಮಾಡಿದಾಗ ಮಾತ್ರ  ನ್ಯಾಯ ಸಿಗುವಂತಾಗುತ್ತದೆ, ಸುಮಾರು 72ವರ್ಷಗಳ ಕನಸು ನನಸಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ ಮತ್ತು ಕನರ್ಾಟಕ ಅಲೆಮಾರಿ ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳಿಂದ ಎಲ್ಲಾ ಜಿಲ್ಲೆಗಳಲ್ಲಿ ಸಕರ್ಾರಕ್ಕೆ ಮನವಿಗಳು ಸಲ್ಲಿಸಲಾಗಿದೆ. ಹೀಗಾಗಿ ಅಲೆಮಾರಿ ನಿಗಮದಿಂದ ಅಲೆಮಾರಿಗಳಿಂದ ನ್ಯಾಯ ಸಿಗುವಂತಾಗಲಿ ಎಂದು ಕೋರುತ್ತೇವೆ. ನಮ್ಮ ಅಲೆಮಾರಿ ಜೀವನ ಹೀಗೆ ಇರುತ್ತದೆ. 

ಕನರ್ಾಟಕದಾದ್ಯಂತ ಅನೇಕ ಅಲೆಮಾರಿ, ಅರೆ ಅಲೆಮಾರಿ, ಆದಿವಾಸಿ ಬುಡಕಟ್ಟುಗಳು ತಮ್ಮ ಬದುಕಿಗಾಗಿ ತಮ್ಮ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಿ ತದನಂತರ ದಿನಗಳಲ್ಲಿ ಈ ಬುಡಕಟ್ಟುಗಳು ಅಲ್ಲಲ್ಲಿ ನೆಲೆ ನಿಲ್ಲಲ್ಲು ಪ್ರಾರಂಭವಾದವು ಸಮಾಜದಲ್ಲಿ ಇಂದಿಗೂ ಶಾಶ್ವತವಾಗಿ ನೆಲೆ ಕಾಣದೆ ತಮ್ಮ ಹೊಟ್ಟೆಪಾಡಿಗಾಗಿ ಬದುಕಲು ಊರೂರು ಸಣ್ಣಪುಟ್ಟ ವ್ಯಾಪಾರ ಕಲಾವಿದರಾಗಿ ಬಿಕ್ಷೆ ಬೇಡುತ್ತ ಕೂಲಿ ನಾಲಿ ಮನೆ ಕೆಲಸಗಳು ಮಾಡಿ ಮುಸೂರಿ ತೊಳೆಯುತ್ತ ಅಲೆದಾಡುತ್ತಿರುವ ಈ ಸಮುದಾಯಗಳು ಇಂದಿಗೂ ಗೊಂದಲಗಳಿಗೆ ಸಿಲುಕಿ ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇಂದಿಗೂ ರಸ್ತೆ ಬದಿಗಳಲ್ಲಿ ಗುಡಿ ಗುಂಡಾರಗಳಲ್ಲಿ ಗಿಡ ಮರಗಳಲ್ಲಿ ಟೆಂಟ್ಗಳು ಹಾಕಿಕೊಂಡು ವಾಸವಾಗಿರುತ್ತಾರೆ. ನಮ್ಮ ಮಕ್ಕಳ ವಿದ್ಯಬ್ಯಾಸವಿಲ್ಲದೆ ಮತ್ತು ಹಿರಿಯ ಕಲಾವಿದರಿಗೆ ಮಾಶಾಸನ ಮತ್ತು ಪಿಂಚಣಿ ಇಲ್ಲದೆ ಹಾಗೂ ಭೂವಡೆತನದ ಯೋಜನೆಯ ಅಡಿಯಲ್ಲಿ 2 ಎಕರೆ ಭೂಮಿ ಪ್ರತಿ ಕುಟುಂಬಕ್ಕೆ ಕೊಡಬೇಕು, ಭೂಮಿ ಇದ್ದವರಿಗೆ ಗಂಗಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ನಿಮರ್ಿಸಿಕೊಡಬೇಕು, ನಿವವೇಶನ ಮತ್ತು ಮನೆಯನ್ನು ನಿಮರ್ಿಸಿಕೊಡಬೇಕು. ಮತ್ತು ನೇರಸಾಲ ಯೋಜನೆ ಅಡಿಯಲ್ಲಿ ಸಣ್ಣ ಪುಟ್ಟ ವ್ಯಾಪಾರಗಳು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಲ್ಲಿ ಅಲೆಮಾರಿಗಳು ನೆಲೆ ನಿಲ್ಲುವಂತಾಗುತ್ತದೆ.  

ಈಗ ಕನರ್ಾಟಕ ಸಕರ್ಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 49 ಸಮುದಾಯಗಳು ಮತ್ತು ಪರಿಶಿಷ್ಟ ಪಂಗಡದಲ್ಲಿ 23 ಸಮುದಾಯಗಳಿವೆ ಇವೆರಡು ಒಟ್ಟು 72 ಸಮುದಾಯಗಳು ಸೂಕ್ಷ್ಮ, ಅತಿಸೂಕ್ಷ್ಮ ಇರುತ್ತದೆ. ಈ ಸಮುದಾಯಗಳಿಗೆ ಅಲೆಮಾರಿ ಕೋಶದ ಜೊತೆಗೆ ಅಲೆಮಾರಿ ನಿಗಮ ಮಂಡಳಿ ರಚನೆ ಮಾಡಲು ಕೋರುತ್ತೇವೆ. ಈಗಾಗಲೇ ಓ.ಬಿ.ಸಿ ಅಲೆಮಾರಿ ಪಟ್ಟಿಯಲ್ಲಿ ಬರುವ ಸುಮಾರು 46 ಸಮುದಾಯಗಳಿಗೆ ಮಾನ್ಯ ಘನ ಸಕರ್ಾರವು ನಿಗಮವನ್ನು ರಚನೆ ಮಾಡಲಾಗಿದೆ. ಇನ್ನು ಉಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನಿಗಮ ಮಾಡುವಂತೆ ಮನವಿ. ಗೌರವ ವಂದನೆಗಳೊಂದಿಗೆ ಎಲ್ಲಾ ಅಲೆಮಾರಿಗಳು ಅಧ್ಯಕ್ಷರು ಮತ್ತು ಸಂಘದ ಸರ್ವ ಪದಾಧಿಕಾರಿಗಳು.