ಬಾಗಲಕೋಟೆ 05: ಸಕರ್ಾರ ಜನಸಾಮಾನ್ಯರಿಗೆ ರೂಪಿಸಿರುವ ಆರೋಗ್ಯ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮೂಡಿಸುವ ಮೂಲಕ ಆರೋಗ್ಯವಂತ ಭಾರತ ನಿಮರ್ಾಣಕ್ಕೆ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳು ಕೈಜೊಡಿಸಬೇಕೆಂದು ಜಿಲ್ಲಾ ಪಂಚಾಯತ ಸದಸ್ಯ ರಂಗಪ್ಪ ಗೌಡರ ಹೇಳಿದರು.
ತಾಲೂಕಿನ ನೀಲಾನಗರ ಗ್ರಾಮದ ದುಗರ್ಾದೇವಿ ದೇವಸ್ಥಾನದಲ್ಲಿ ಬುಧವಾರ ಜರುಗಿದ ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ವಿಜಯಪುರ ಹಾಗೂ ಆರೋಗ್ಯ ಇಲಖೆ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ,ಬಾಗಲಕೊಟ ತಾಲೂಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರ ಹಾಗೂ ಗ್ರಾಮ ಪಂಚಾಯತ ನೀಲಾನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಆಯುಷ್ಮಾನ್ ಭಾರತ ಕುರಿತು ಏರ್ಪಡಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಸಿ.ಪವಾಡೆಪ್ಪ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯ ಪ್ರಾರಂಭಿಕ ಹಂತದಲ್ಲಿ ರೋಗಿಗೆ ಮೊದಲು ಸಕರ್ಾರಿ ಆಸ್ಪತ್ತ್ರೆಯಲ್ಲಿ 169 ಉಚಿತ ಆರೋಗ್ಯ ಸೇವೆಗಳ ತುತರ್ು ಚಿಕಿತ್ಸೆಯನ್ನು ನೀಡಲಾಗುವುದು, ತದನಂತರದಲ್ಲಿ ಪ್ರಮುಖ ಗಂಡಾಂತರ ತುತರ್ು ಪರಿಸ್ಥಿತಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಕೇಂದ್ರ ಸಕರ್ಾರ ಶೇ.60 ಮತ್ತು ರಾಜ್ಯದ ಪಾಲು ಶೇ.40 ಇದ್ದು, ಇನ್ನೂ ಮುಂದಿನ ದಿನಗಳಲ್ಲಿ ಇಲಾಖೆಯಿಂದ ಕಾಡರ್ು ನೀಡುವ ಮೂಲಕ ಎಲ್ಲ ರೀತಿಯ ಆರೋಗ್ಯ ಯೋಜನೆಗಳನ್ನು ಇದರ ಅಡಿಯಲ್ಲಿ ಸೇರಿಸುವದರ ಜೊತೆಗೆ ಪ್ರತಿ ಕುಟಂಬಕ್ಕೆ ಕನಿಷ್ಠ 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆಯನ್ನು ಆಯುಷ್ಮಾನ್ ಭಾರತ ಯೋಜನೆ ಮೂಲಕ ಜನಸಾಮಾನ್ಯರಿಗೆ ಸಕರ್ಾರ ಒದಗಿಸಲಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ವಿಮಾ ಹಾಗೂ ಆರೋಗ್ಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ವಾಯ್.ಉಕ್ಕಲಿ ಮಾತನಾಡಿ, ಕಾನೂನಿನ ಪ್ರಕಾರ ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಹಾಗೂ ಗಂಡು ಮಕ್ಕಳ ಮದುವೆಯ ವಯಸ್ಸು 21 ವರ್ಷ ದಾಟಿರಬೇಕು, ಅಂದಾಗಲೇ ಅವರು ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ ಹೊಂದಲು ಸಾಧ್ಯ. ಈ ನೀಯಮವನ್ನು ಮೀರಿ ಯಾರಾದರೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸಲು ಮುಂದಾದಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಯಾರಿಗಾದರು ಇಂತಹ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ನೇರವಾಗಿ 1098 ಉಚಿತ ಸಹಾಯವಾಣಿಗೆ ಕರೆ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೆರವಿಗೆ ಧಾವಿಸುತ್ತಾರೆ ಎಂದು ಹೇಳಿ, ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಇರುವ ವಿವಿಧ ಯೋಜನೆಗಳನ್ನು ತಿಳಿಸಿಕೊಟ್ಟರು.
ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ವಿನೋದ ಹಾದಿಮನಿ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿದಿನ ಸರಿಯಾದ ರೀತಿಯ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಆಧುನಿಕ ಕಾಲದ ಭರಾಟೆಗೆ ಸಿಲುಕಿ ರಾಸಾಯನಿಕ ಭರಿತ ವಸ್ತುಗಳನ್ನು ಉಪಯೋಗಿಸದೆ, ಸಹಜ, ನೈಸಗರ್ಿಕವಾದ ಪದಾರ್ಥಗಳ ಬಳಕೆ ಮಾಡುವ ಮೂಲಕ ತಮ್ಮ ಮುಖ, ಚರ್ಮದ ಹಾಗೂ ವ್ಯಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜಯಪುರ ಕ್ಷೇತ್ರ ಜನಸಂಪರ್ಕ ಕಾಯರ್ಾಲಯದ ಮುರಳಿಧರ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ ಭಾರತ ಮತ್ತು ಭಾರತ ಸರಕಾರದ ವಿವಿಧ ಆರೋಗ್ಯ ಯೋಜನೆಯ ಕುರಿತು ವಿವರಣೆ ನೀಡಿದರು. ಆಯುಷ್ಮಾನ್ ಭಾರತ ಹಾಗೂ ವಿಶ್ವ ಸೋಳ್ಳೆ ದಿನಾಚರಣೆ 2018ರ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವೀತಿಯ ಹಾಗೂ ತೃತಿಯ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯೆಕ್ಷೆ ಮಂಜುಳಾ ರಮೇಶ ದೊಡ್ಡಮನಿ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಮೇಶ ಕುರಿಗಾರ ಹಾಗೂ ಎಲ್ಲ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ರತ್ನಾ ಮೂಕಿ, ಕುಮಾರ ಮಹಾರಾಜ, ರಮೇಶ ಕಟ್ಟಿಮನಿ ಆರೋಗ್ಯ ಇಲಾಖೆಯ ಕುಬೇರ ಪವಾರ, ಆರ್.ಪಿ.ಜಡಗಣ್ಣವರ, ಪಿ.ಎಸ್.ಮದಬಾಳ, ಕೆ.ಎಫ್.ಮಾಯಾಚಾರಿ, ಏ.ಸಿ.ಡಿ.ಎಸ್. ಮೇಲ್ವಿಚಾರಕಿಯರಾದ ಎಸ್.ಎಸ್.ಮಾಚಾ, ಪಿ.ಆರ್.ತಳವಾರ, ಶಿಕ್ಷಕರಾದ ಎಮ್.ಬಿ.ಪಾಟೀಲ, ಜಿ.ಎಮ್.ಮಂಗಳಗುಡ್ಡ, ವಿ.ಪಿ.ಕೊಟ್ರಣ್ಣವರ, ಸೋಮು ಚವ್ಹಾಣ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಇತರೆ ವಿವಿಧ ಇಲಾಖೆಗಳ ಸಿಬ್ಬಂದಿಗಳು, ಗ್ರಾಮದ ಮುಖಂಡರು, ಮಹಿಳೆಯರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು, ವಿದ್ಯಾಥರ್ಿಗಳು ಮತ್ತಿತರರು ಉಪಸ್ಥಿತರಿದ್ದರು. ಬೇಟಿ ಬಚಾವ ಬೇಟಿ ಪಡಾವ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.