ಅಖಂಡವಾಗಿ ಮುದಿಮಲ್ಲೇಶ್ವರ ಪುರಾಣ ಜರುಗಲಿದೆ : ವಿರುಪಾಕ್ಷಪ್ಪ ಕುಂಬಾರ
ಬಳ್ಳಾರಿ 09: ತಾಲೂಕಿನ ಮೊಕ ಬಳಿಯ ತಂಬ್ರಳ್ಳಿ ಗ್ರಾಮದಲ್ಲಿ 29ನೇ ವರ್ಷದ ಮೋಕ್ಷಾಂಬಿಕಾ ಪರಿಣಯ ಮೋಕ್ಷಪುರಿ ಮುದಿಮಲ್ಲೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮನೃಪ ಶಾತವಾಹನ ಶಕೆ 1946ನೇ ಕ್ರೋಧಿ ನಾಮ ಸಂವತ್ಸರದ ಮಾಘ ಶುದ್ಧ ಏಕಾದಶಿ ದಿನಾಂಕ 08-02-2025 ಶನಿವಾರ ದಿಂದ ಪ್ರಾರಂಭ ಗೊಂಡು ಮಾಘ ಬಹುಳ ಷಷ್ಠಿ ದಿನಾಂಕ 18-02-2025 ಮಂಗಳವಾರದ ವರೆಗೆ ಪ್ರತಿದಿವಸ ಸಾಯಂಕಾಲ 6-30 ಗಂಟೆಯಿಂದ 8-30 ಗಂಟೆಯವರೆಗೆ ಪುರಾಣ ಅಖಂಡವಾಗಿ ಜರುಗಿ ಮಂಗಳಗೊಳ್ಳಲಿದೆ.ಕಾರ್ಯಕ್ರಮವು ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠ, ಉಜ್ಜಯಿನಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲಾ ಹಾಗೂ ಅಂಗೈಕ್ಯ ಷಽಽಬ್ರಽಽ ವೃಷಭೇಂದ್ರ ಶಿವಾಚಾರ್ಯರು, ಹಿರೇಮಠ, ಮೋಕ, ಸಾನಿಧ್ಯ : ಬಾಲತಪಸ್ವಿ ಅಜಾತ ಶಂಭುಅಂಗ ಶಿವಾಚಾರ್ಯ ಮಹಾಸ್ವಾಮಿಗಳು, ಪುರವರ್ಗ ಮಠ, ಜಂಗಮರಹೊಸಳ್ಳಿ, ಮಲ್ಲಯ್ಯ ತಾತನವರು ಆಲೂರು, ಶರಣಮ್ಮ ಅವ್ವ, ಕೊಕ್ಕರಬೇಡು, ರುದ್ರಮುನಿ ತಾತನವರು ಹಾಗೂ ನಂಜುಡೇಶ್ವರ ತಾತನವರು ಡಿ.ಎನ್. ಹಳ್ಳಶ್ರೀ ಗುರು ಶಿವಕುಮಾರ ತಾತನವರು, ತಂಬ್ರಳ್ಳಿ. ಗುರು ಗಂಗಾಧರ ತಾತನವರು ಜಿ.ಎನ್.ಹಳ್ಳಿಇವರುಗಳ ಹರಗುರುಚರಮೂರ್ತಿಗಳ ಕೃಪಾಶೀರ್ವಾದದಿಂದ ಜರುಗುವುದು.
ಪರಾಣ ಪ್ರವಚನವನ್ನು ಸಿದ್ಧರಾಮನಗೌಡಮಸೂದಿಪುರ.ಲ, ಪುರಾಣ ವಾಚನೆಯನ್ನು, ಶರಣ ಬಸವ ಗವಾಯಿಗಳು ಸಂಗಮ ಕ್ಷೇತ್ರ, ಸಿದ್ಧರಾಂಮರ ಸಿರುಗುಪ್ಪ ತಾಽಽ, ಬಳ್ಳಾರಿ ಜ, ಸಾ, ಬಳ್ಳಾರಿ,ತಬಲ ವಾದ್ಯವನ್ನು ಮಲ್ಲೇಶ ಮದ್ಲಾಪುರ ಮಾನ್ವಿ ತಾ, ಇವರುಗಳ ಅಮೋಘ ಪುರಾಣ ಪ್ರವಚನ, ಸುಮದುರ ಸಂಗೀತದೊಂದಿಗೆ ಪ್ರಾರಂಭಗೊಂಡು ದಿನಾಂಕ 18-02-2025ಮಂಗಳವಾರ ದಂದು ವೇದಾವತಿ ನದಿಯಿಂದ ಬ್ರಾಹ್ಮ ಮುಹೂರ್ತದಲ್ಲಿ ಸಕಲ ವಾದ್ಯ ವೈಭವದಿಂದ ನಂದಿಧ್ವಜ, ಕುಂಭೋತ್ಸವದೊಡನೆ ದೇವಸ್ಥಾನಕ್ಕೆ ಬರುವುದು.
ನಂತರ ಮುದಿಮಲ್ಲೇಶ್ವರ ಅಂಗಕ್ಕೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಜರುಗುವುದು. ನಂತರ ಭೂಲಗಣಾರಾಧನೆ, ತದನಂತರ ಮಹಾಪ್ರಸಾದ ವಿತರಣೆಯಾಗುವುದು. ಕಾರಣ ಸರ್ವಧರ್ಮ ಸಮ್ಭಕ್ತರು ಈ ಕಾರ್ಯಕ್ರಮದಲ್ಲಿ ತನು, ಮನ, ಧನಾದಿಗಳಿಂದ ಸೇವೆ ಸಲ್ಲಿಸಿ ಮುದಿಮಲ್ಲೇಶ್ವರನ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿ ವಾಸ್ತು ತಜ್ಞರಾದ ವಿರುಪಾಕ್ಷಪ್ಪ ಕುಂಬಾರ,ಇವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಮೋಕಾ ಮುದಿಮಲ್ಲೇಶ್ವರ ಸ್ವಾಮಿಯ ರಥೋತ್ಸವವು ದಿನಾಂಕ 19-02-2025 ಬುಧವಾರ ದಂದು ಜರುಗುವುದು. ಸುಕ್ಷೇತ್ರ ಮುದಿಮಲ್ಲೇಶ್ವರ ದೇವಸ್ಥಾನದ ಅಭಿವೃದ್ಧಿ ಸೇವಾ ಸಮಿತಿಯಿಂದ ತಿಳಿದು ಬಂದಿದೆ. ಪ್ರತಿನಿತ್ಯ ಪುರಾಣಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಪುರಾಣ ಪ್ರಸಾದ ಸೇವೆ ಮಾಡಲಿಚ್ಛಿಸುವವರು ಇನ್ನು ಹೆಚ್ಚಿನ ಮಾಹಿತಿಗಾಗಿ 7619691092, 7353259603. 9008321416, 9411068192, 9945952821,ಈ ಪುರಾಣ ಸಮಿತಿಯವರನ್ನು ಸಂಪರ್ಕಿಸಬಹುದು.