ಬೈಕ್ ನಲ್ಲಿ ಮನೆಗೆ ತೇರುಳಿತಿದ್ದಾಗ ಅಪಹರಣ ಮಾಡಿದ ದುಷ್ಕರ್ಮಿಗಳು
ಮುಂಡಗೋಡ 11: ಪಟ್ಟಣದ ಶಾಸಕರ ಮಾದರಿ ಶಾಲೆ ಮುಂಭಾಗ್ ರಸ್ತೆಯಲ್ಲಿ ಬೈಕನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯಿತಲ್ಲದೇ ಬೈಕ್ ಸವಾರನನ್ನು ಕಾರಿನಲ್ಲಿದ್ದವರು ಅಪಹರಿಸಿಕೊಂಡು ಹೋದ ಘಟನೆ ಗುರುವಾರ ಸಂಜೆ ಜರುಗಿದೆ. ಪಟ್ಟಣದ ಯುವಮುಖಂಡ ನೂರಾನಿಗಲ್ಲಿಯ ನಿವಾಸಿ ಜಮೀರ ಅಹ್ಮದ್ ದರ್ಗಾವಾಲೆ(37) ಎಂಬಾತನೇ ಅಪಹರಣಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ. ಶಾಸಕರ ಮಾದರಿ ಶಾಲೆಯ ಮುಂಭಾಗದ ಮಾರ್ಗವಾಗಿ ಬೈಕನಲ್ಲಿ ಮನೆಗೆ ಹೋಗುತಿರುವಾಗ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ಬೈಕನಲ್ಲಿ ಹಿಂಬದಿಯಲ್ಲಿ ಮತ್ತೊಬ್ಬ ಸವಾರ ಆರೋಪಿಗಳಿಂದ ತಪ್ಪಿಸಿಕೊಂಡು, ಪೊಲೀಸರಿಗೆ ಘಟನೆಯ ವಿವರ ತಿಳಿಸಿದ್ದಾನೆ. ಪಟ್ಟಣದ ಜಮೀರ ಅಹ್ಮದ ದರ್ಗಾವಾಲೆಯನ್ನು ಕಾರಿನಲ್ಲಿ ಬಂದ ವ್ಯಕ್ತಿಗಳು ಅಪಹರಿಸಿದ ಘಟನೆ ಬೇಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಕೃತ್ಯದ ಹಿಂದೆ ಯಾರಿದ್ದಾರೆ. ಯಾವ ಉದ್ದೇಶಕ್ಕೆ ಅಪಹರಣ ಮಾಡಿದ್ದರು ಎಂಬುದು ತನಿಖೆಯ ನಂತರ ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.