ಕಲಬುರಗಿ: ಮುಂದಿನ ದಿನಗಳಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಪ್ರತಿಭಟನೆ ನಡೆದು ನಕಾರಾತ್ಮಕ ಪರಿಣಾಮ ಉಂಟಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣ ಇಲ್ಲದೆ ಮಾಧ್ಯಮಗಳು ಉರಿಯುವ ಬೆಂಕಿಗೆ ಎಣ್ಣೆ ಹಾಕುತ್ತಿವೆ. ಉತ್ತರ ಕನರ್ಾಟಕ ಜನ ಸಕರ್ಾರದ ಜೊತೆಯಲ್ಲಿದ್ದಾರೆ. ಒಂದು ವೇಳೆ ಏನಾದರೂ ಸಂಭವಿಸಿದ್ದರೆ ಮಾಧ್ಯಮಗಳೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ಹೇಳಿದರು.
ಮುಖ್ಯಮಂತ್ರಿ ನಾಲ್ಕು ಜಿಲ್ಲೆಗಳಿಗೆ ಮಾತ್ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಮಾಧ್ಯಮಗಳೇ ವರದಿ ಮಾಡುತ್ತಿವೆ. 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ರಾಜ್ಯ ಬಜೆಟ್ನಲ್ಲಿ ನಾಲ್ಕು ಜಿಲ್ಲೆಗಳಿಗೆ 500 ಕೋಟಿ ರೂಪಾಯಿಗಳ ಸಣ್ಣ ಪ್ರಮಾಣದ ಅನುದಾನ ನೀಡಲಾಗಿದೆ ಹಾಗಾದರೆ ಏಲ್ಲಿ ತಾರತಾಮ್ಯ ಮಾಡಲಾಗಿದೆ ಎಂದು ಪ್ರಶ್ನಿಸಿದರು. ನನ್ನನ್ನು ನಾಲ್ಕು ಜಿಲ್ಲೆಗಳ ಮುಖ್ಯಮಂತ್ರಿ ಅಂತಾ ಮಾಧ್ಯಮಗಳಲ್ಲಿ ಬಣ್ಣಿಸಲಾಗುತ್ತಿದೆ.2, 18, 000 ಸಾವಿರ ಕೋಟಿ ಬಜೆಟ್ ನಲ್ಲಿ 514 ಕೋಟಿ ರೂಪಾಯಿಯನ್ನು ನಾಲ್ಕು ಜಿಲ್ಲೆಗಳಿಗೆ ನೀಡಲಾಗಿದೆ. ಏನು ದೊಡ್ಡ ಒಪ್ಪಂದವೇ ಎಂದರು. ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರತ್ಯೇಕ ರಾಜ್ಯದ ಹೋರಾಟದ ಕೂಗು ಎತ್ತಿದ್ದು, ಆಗಸ್ಟ್ 2 ರಂದು ಈ ಭಾಗದ 13 ಜಿಲ್ಲೆಗಳಲ್ಲಿ ಒಂದು ದಿನದ ಬಂದ್ ನಡೆಸಲು ಕರೆ ನೀಡಲಾಗಿದೆ.
ಈ ಮಧ್ಯೆ ರಾಜಕೀಯ ಕಾರಣದಿಂದ ರಾಜ್ಯವನ್ನು ಒಡೆಯಲು ಮುಖ್ಯಮಂತ್ರಿ ನಾಟಕವಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಉತ್ತರ ಕನರ್ಾಟಕ ಭಾಗವನ್ನು ನಿರ್ಲಕ್ಷಿಸುತ್ತಿದ್ದು, ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯಕ್ಕೆ ಹೋರಾಟ ಮಾಡುವುದಾಗಿ ಮೊದಲು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದರು. ನಂತರ ನಾಯಕರು ಹೇಳಿಕೆ ನೀಡುತ್ತಿದ್ದಂತೆ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ತೀವ್ರಗೊಂಡಿತ್ತು.