ಸಂತೃಪ್ತ ಸಂಸಾರ ಮಹಿಳೆಯ ಸಾರ್ಥಕತೆ- ಶಕುಂತಲಮ್ಮ
ರಾಣೇಬೆನ್ನೂರು 22: ಇಂದು ಮಹಿಳೆ ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡರೂ ಸಹ ಸಂತೃಪ್ತ ಸಂಸಾರ ನಡೆಸುವುದರಲ್ಲಿ ಅವಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಉಡತಡಿಯ ಅಕ್ಕಮಹಾದೇವಿ ಸಮಿತಿಯ ಉಪಾಧ್ಯಕ್ಷ ಶಕುಂತಲಮ್ಮ ಜಂಬಿಗಿ ಹೇಳಿದರು. ಅವರು ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಸಮುದಾಯ ಭವನದಲ್ಲಿ, ಧಾನೇಶ್ವರಿ ಜಾಗೃತಿ ಅಕ್ಕನ ಬಳಗ, ತಾಲೂಕು ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಯುವ ಸಮುದಾಯಕ್ಕೆ ಅಂದಿನ ವಚನಕಾರ್ತಿ ಸಾಧ್ವಿ ಅಕ್ಕಮಹಾದೇವಿ ಅವರ ವಚನಗಳು ಮತ್ತು ಶರಣರ ಜೀವನ ಶೈಲಿ ಮಾರ್ಗದರ್ಶಕಗಳಾಗಿವೆ ಎಂದು ವಿವರಿಸಿ ಮಾತನಾಡಿದ ಅವರು, ಇಂದು ಮಹಿಳೆ ಎಷ್ಟೇ ಆಧುನಿಕತೆಯಲ್ಲಿ ಸಾಗಿದ್ದರೂ ಸಹ, ಶರಣೆ ಅಕ್ಕಮಹಾದೇವಿ, ಇಂದಿ ದಿಗೂ ಸಹ ಜಗತ್ತಿನ ಮೊದಲ ಮಾದರಿ ಮಹಿಳೆ ಎನಿಸಿಕೊಳ್ಳಲು ಸಾಧ್ಯವಾಗುತ್ತಲ್ಲಿದೆ ಎಂದರು. ಆಧುನಿಕತೆ ಆತಂಕ ಬೇಡ, ಇತಿಹಾಸದ ವಾಸ್ತವಿಕ ಜೀವನದ ಅರಿವು ಇದ್ದಾಗ ಮಾತ್ರ ಭಾರತೀಯ ಮಹಿಳೆಯಾಗಲು ನಗರದ ಚೆನ್ನೇಶ್ವರ ಮಠ ಹಾಗೂ ತಾಲೂಕಾ ಕದಳಿ ಮಹಿಳಾ ವೇದಿಕೆ, ಧಾನೇಶ್ವರಿ ಜಾಗೃತಿ ಅಕ್ಕನ ಬಳಗ ಇವುಗಳ ಸಯುಕ್ತ ಆಶ್ರಯದಲ್ಲಿಜಗದ್ಗುರು ವಾಗೀಶ ಪಂಡಿತಾರಾದ್ಯಾ ಸಮುದಾಯ ಭವನ ಚನ್ನೇಶ್ವರ ಮಠದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟಿಸಿ ಮಾತನಾಡಿ ಅವರುಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳ ಸದ್ಬಳಕೆಯನ್ನು ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾಗಿದೆ. ಆರ್ಥಿಕವಾಗಿ ಸಬಲರಾದ ಸಬಲರಾದ ಮಹಿಳೆ ಆಧುನಿಕ ಸಂಸಾರದ ಬೆನ್ನೆಲುಬಿದ್ದಂತೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಕದಳಿ ವೇದಿಕೆ ಅಧ್ಯಕ್ಷರಾದ ಗಾಯತ್ರಮ್ಮಾ ಕುರವತ್ತಿ ಮಾತನಾಡಿ, ಬದುಕಿನ ಜಟಕಾಬಂಡಿಯನ್ನು ಎಳೆಯಲು ಮಹಿಳೆಯ ಸಾರಥ್ಯ ಎಂದಿಗೂ ಅನಿವಾರ್ಯ ದುಃಖಗಳಲ್ಲಿ ಸಮಪಾಲು ಎಂದು ಕೈಹಿಡಿದ ಮಹಿಳೆ ಪತಿಯೊಡನೆ ಮಕ್ಕಳೊಡನೆ ಸರ್ವಕಾಲಗಳಲ್ಲೂ ಸಮಭಾವದಿಂದ ಸಮ ಚಿತ್ತದಿಂದ ಇರಬೇಕು ಎಂದರು. ಮೆಡ್ಲೇರಿಯ ಎಂಸಿಎಸ್ ಶಾಲೆಯ ಗುರುಮಾತೆಯರಾದ ವಿದ್ಯಾವತಿ ಮಳೆಮಠ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸಾಧನೆಗಳು ನಮಗೆ ಮಾರ್ಗದರ್ಶಿಯಾಗಿವೆ ಎಂದು ಹೇಳುತ್ತಾ ಸಾಧಕರ ಪರಿಚಯವನ್ನು ಮಾಡಿದರು.
ಆರ್. ಟಿ. ಇ. ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ, ಸುಮಾ ಹೊಸಮನಿ ಅವರು ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ನಾಡಿನ ಯೋಗಾಪಟುಗಳಾದ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಡಾ. ಜ್ಯೋತಿ ಜಂಬಗಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಜನಿ ಕರಿಗಾರ ಹಾಗೂ ಶೋಭಾ ಅವರನ್ನು ದಾನೇಶ್ವರಿ ಅಕ್ಕನ ಬಳಗದ ಅಧ್ಯಕ್ಷ ಸುನಂದಮ್ಮ ತಿಳುವಳ್ಳಿ ಅವರು ಅಭಿನಂದಿಸಿ ಸನ್ಮಾನಿಸಿದರು. ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ನಾಗರತ್ನ ಬಣಕಾರ, ಗೀತಾ ಜಂಬಗಿ, ಸಾವಿತ್ರ ಕೆಂಚಪ್ಪನವರ, ಶಕುಂತಲಾ ಪಾಟೀಲ್, ಸರೋಜಮ್ಮ ಅಜ್ಜೋಡಿಮಠ, ಲಲಿತಾ ಅರಳಿ, ವಸಂತಾ ಹುಲ್ಲತ್ತಿ, ಪುಸ್ಪಾ ಬದಾಮಿ, ಶಕುಂತಲಾ ಹೊಸಂಗಡಿ, ರೇಖಾ, ಗಿರಿಜಾ ಸೇರಿದಂತೆ ಕದಳಿ ವೇದಿಕೆ, ದಾನೇಶ್ವರಿ ಅಕ್ಕನ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾವಿತ್ರಮ್ಮ ಸಂಗಡಿಗರು ಪ್ರಾರ್ಥಿಸಿದರು. ಕಸ್ತೂರಮ್ಮ ಪಾಟೀಲ್ ಸ್ವಾಗತಿಸಿ, ಭಾಗ್ಯಮ್ಮ ಗುಂಡಗಟ್ಟಿ ನಿರೂಪಿಸಿ,