ಹುತಾತ್ಮರಾದ ವೀರಕಲ್ಲಿಗೆ ಬಣ್ಣ ಹಚ್ಚಿ ಹೆಸರು ಕಾಣುವಂತೆ ಮಾಡಬೇಕೆಂದು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೈಲಹೊಂಗಲ 18:  ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಹುತಾತ್ಮರಾದ ವೀರಕಲ್ಲಿಗೆ ಬಣ್ಣ ಹಚ್ಚಿ ಹುತಾತ್ಮರ ಹೆಸರುಗಳು ಕಾಣುವಂತೆ ಮಾಡಬೇಕೆಂದು ಆಗ್ರಹಿಸಿ ದಿ.17 ರಂದು ನಾಗರಿಕರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     1942 ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಮಹಾತ್ಮರು ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ವೃತ್ತದ ಇದೇ ಸ್ಥಳದಲ್ಲಿ ಬ್ರಿಟಿಷರ ಗುಂಡಿಗೆ 7 ಜನ ಯೋಧರು ಬಲಿಯಾಗಿದ್ದಾರೆ. ಆ ಯೋಧರ ಸವಿ ನೆನಪಿಗಾಗಿ ಅಲ್ಲಿಯೋ ಹುತಾತ್ಮರಾದ 7 ಜನರ ಹೆಸರನ್ನು ಕಲ್ಲಿನಲ್ಲಿ ಕೆತ್ತಸಿ ಸ್ಮಾರಕ ವೀರಕಲ್ಲುನ್ನು ಸ್ಥಾಪನೆ ಮಾಡಲಾಗಿದೆ. ಅದಕ್ಕೆ ಸಂಪೂರ್ಣ ಹಳದಿ ಬಣ್ಣ ಹಚ್ಚಲಾಗಿದ್ದು, ಅದರಿಂದ ಹುತಾತ್ಮರ ಹೆಸರುಗಳು ಕಾಣದಂತಾಗಿವೆ. ಅವರ ಹೆಸರಿನ ಮೇಲೆ ಬಿಳಿ ಬಣ್ಣ ಹಚ್ಚಿ ಯೋಧರ ಹೆಸರು ಕಾಣುವಂತೆ ಬರೆಯಸಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ವಿ ಎಲ್ ಮಾತಾಡೆ, ಮತ್ತಿತರರು ಇದ್ದರು.