ಕೊಪ್ಪಳ 08: ಕನರ್ಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ ಬೆಂಗಳೂರು ಹಾಗೂ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
"ಹಣ್ಣುಗಳ ರಾಜ" ಎಂದೇ ಕರೆಯಲ್ಪಡುವ ಮಾವಿನ ಹಣ್ಣಿಗಳ ಸೀಜನ್ ಈಗಾಗಲೇ ಶುರುವಾಗಿದ್ದು, ಜಿಲ್ಲೆಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ನೈಸಗರ್ಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷದತೆ ಈ ವರ್ಷವೂ ಸಹ ಮಾವು ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಎಲ್ಲರ ಮನಸ್ಸನ್ನು ಆಕಷರ್ಿಸುವಂತಿವೆ ಹಾಗೂ ರಸಬರಿತ, ಸಿಹಿ-ಸಿಹಿಯಾದ ಮಾವಿನ ಹಣ್ಣುಗಳು ಮಾವು ಪ್ರೀಯರಿಗೆ ಲಭ್ಯ ಇವೆ.
ವಿವಿಧ ತಳಿಗಳ ಹಣ್ಣುಗಳು: ಪಕ್ಕದ ಜಿಲ್ಲೆಗಳಲ್ಲಿ ಹಾಗೂ ವಿಶೇಷವಾಗಿ ಕೊಪ್ಪಳ ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತಿರುವ ಪ್ರಮುಖ ಮಾವಿನ ತಳಿಗಳಾದ ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್ ಇದಲ್ಲದೇ ಮುಂತಾದ ತಳಿಗಳ ಹಣ್ಣುಗಳು ಮಾವು ಮೇಳದಲ್ಲಿ ಲಭ್ಯ ಇವೆ. ಈ ಎಲ್ಲಾ ಹಣ್ಣುಗಳು ನೈಸಗರ್ಿಕವಾಗಿ ಮಾಗಿಸಿದ್ದಾಗಿದ್ದು ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಗೆ ಹಣ್ಣುಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಕೆಜಿ ರೂ. 50 ರಿಂದ 70 ರೂ.ವರೆಗೆ ಮಾವಿನ ಹಣ್ಣಿನ ಬೆಲೆ ನಿಗದಿಪಡಿಸಲಾಗಿದ್ದು, ಇದರಿಂದಾಗಿ ರೈತರಿಗೆ ಯೋಗ್ಯ ಬೆಲೆಯಲ್ಲಿ ದೊರೆಯುವುದಲ್ಲದೇ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಸಿಹಿ-ಸಿಹಿಯಾದ, ರಸಬರಿತವಾದ ಮಾವು ದೊರೆಯಲಿದೆ.
ಮಾವಿನ ಹಣ್ಣುಗಳ ಜೊತೆ ಮಾವಿನ ಸಂಸ್ಕರಿಸಿದ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ, ಜಾಮ್ ಹಾಗೂ ಇತರೆ ಉತ್ಪನ್ನಗಳು ಈ ಮಾವು ಮೇಳದಲ್ಲಿ ಗ್ರಾಹಕರಿಗೆ ಸಿಗಲಿವೆ. ಈ ಬಾರಿ ಮಾವು ಮೇಳದಲ್ಲಿ ಮಾವು ಬೆಳೆದ ರೈತ ಮಹಿಳೆಯರು ಸಹ ಭಾಗಿಯಾಗಿದ್ದು ವಿಶೇಷ.
ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣಾ ಉಕ್ಕುಂದ ಅವರು ಮಾತನಾಡಿ, ಮಾವು ಮೇಳವನ್ನು ಕನರ್ಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಮೇಳದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತ-ಮುತ್ತಲಿನ ಸೇರಿ ಸುಮಾರು ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಸದ್ಯ 20 ಸ್ಟಾಲ್ಗಳನ್ನು ಪ್ರಾರಂಭಿಸಲಾಗಿದೆ. 30 ರೈತರು ಮಾವು ಮಾರಟಕ್ಕೆ ಬಂದಿರುವುದರಿಂದ ಇನ್ನೂ 10 ಸ್ಟಾಲ್ಗಳನ್ನು ಪ್ರಾರಂಭಿಸಬೇಕಾಗಿದೆ. ಈ ಬಾರಿ ಸುಮಾರು 08 ಜನ ರೈತ ಮಹಿಳೆಯರು ಈ ಮೇಳದಲ್ಲಿ ಪಾಲ್ಗೊಂಡಿದ್ದು ತಾವು ಬೆಳೆದ ಮಾವಿನ ಹಣ್ಣುಗಳನ್ನು ಯಾವುದೇ ಮಧ್ಯವತರ್ಿಗಳ ಹಾವಳಿ ಇಲ್ಲದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಬೇನೆಷಾನ್, ಕೇಸರ್, ದಶಹರಿ, ಆಪೂಸ್, ಮಲ್ಲಿಕಾ, ರಸಪೂರಿ, ಸುವರ್ಣರೇಖ, ಇಮಾಮ್ ಪಸಂದ್ ಮುಂತಾದ ತಳಿಗಳು ಲಭ್ಯವಿದ್ದು, ನೈಸಗರ್ಿಕವಾಗಿ ಮಾಗಿಸಿದ ಹಣ್ಣುಗಳು ಜಿಲ್ಲೆಯ ಸಾರ್ವಜನಿಕರಿಗೆ ಸವಿಯಲು ಸಿದ್ಧವಾಗಿವೆ. ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಹಲವು ತಳಿಯ ಮಾವು ಹಣ್ಣುಗಳು ಸಿಗಲಿದ್ದು, ರೈತರಿಗೆ ಯಾವುದೇ ನಷ್ಟ ಇಲ್ಲದೇ ನೇರ ಲಾಭ ದೊರೆಯಲಿದೆ. ಕೊಪ್ಪಳ ಜಿಲ್ಲೆಯ ಗ್ರಾಹಕರು ಈ ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಿ ಎಲ್ಲಾ ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡಿ, ಹಾಗೂ ಮಾವು ಮೇಳವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ.ಸುಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯರವರು ಮೇಳದಲ್ಲಿರುವ ಮಾವಿನ ವಿವಿಧ ಬಗೆಯ ಹಣ್ಣುಗಳು ಹಾಗೂ ಅವುಗಳ ಗುಣಮಟ್ಟವನ್ನು ವೀಕ್ಷಿಸಿದರು. ಅಲ್ಲದೇ ಸಿಹಿಯಾದ ಮಾವಿನ ಹಣ್ಣುಗಳ ರುಚಿಯನ್ನು ಇದೇ ಸಂದರ್ಭದಲ್ಲಿ ಸವಿದರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.