ಲೋಕದರ್ಶನ ವರದಿ
ವಿಜಯಪುರ 22:ಪ್ರಪಂಚದಲ್ಲಿ ಧೀಘರ್ಾಯುಷಿಗಳಾಗಿ ಬದುಕಿದ 10ಜನರಲ್ಲಿ ಸಿದ್ಧಗಂಗಾ ಡಾ.ಶಿವಕುಮಾರ ಶ್ರೀಗಳು 6ನೇಯವರಾಗಿದ್ದಾರೆ. ನೂರಾ ಹನ್ನೊಂದು ವರ್ಷಗಳ ಕಾಲ ಬದುಕಿ ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ಮಯ ಮೂಡಿಸಿದ ಹಾಗೂ ಲೋಕಕಲ್ಯಾಣ ಕಾರ್ಯಮಾಡಿದ ಸಿದ್ಧಗಂಗಾ ಮಹಾಸ್ವಾಮಿಗಳು ಜನಮಾನಸದಲ್ಲಿ ಬೆಳಕು ಚೆಲ್ಲಿದವರು. ಎಂದು ಬಿ.ಎಲ್.ಡಿ.ಇ ಸ್ವಾಯತ್ತ ವಿವಿಯ ಕುಲಪತಿ ಡಾ.ಎಂ.ಎಸ್.ಬಿರಾದಾರ ಹೇಳಿದರು.
ಬಿ.ಎಲ್.ಡಿ.ಇ ಡಾ.ಫ.ಗುಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಇಷ್ಟು ಸುದೀರ್ಘಕಾಲ ಬದುಕಲು ಮುಖ್ಯ ಕಾರಣ ಅನುವಂಶಿಯತೆ, ಹಿತ-ಮಿತವಾದ ಆಹಾರ ಸೇವನೆ, ನಿರಂತರ ಕಾಯಕ ನಿಷ್ಠೆ ಹಾಗೂ ಬಸವಾದಿ ಶರಣರ ತತ್ವಾದರ್ಶಗಳ ಪಾಲನೆಗಳಾಗಿವೆ ಎಂದರು.
ಬಿ.ಎಲ್.ಡಿ.ಇ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ ಶ್ರೀಗಳು ಬಿ.ಎಲ್.ಡಿ.ಇ ಸಂಸ್ಥೆಗೆ ಜೊತೆಗೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡರು. ಕೆಪಿಸಿಸಿ ಕಾರ್ಯದಶರ್ಿ ಸಂಗಮೇಶ ಬಬಲೇಶ್ವರ, ಆಡಳಿತಾಧಿಕಾರಿ ಡಾ.ಅಜಾತಸ್ವಾಮಿ, ಡಾ.ಆರ್.ಕೆ.ಕುಲಕಣರ್ಿ ಮತ್ತಿತರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ, ಬಿ.ಎಲ್.ಡಿ.ಇ ನಿದರ್ೆಶಕ ಸುನೀಲಗೌಡ ಪಾಟೀಲ,ಡಾ.ವಿ.ಪಿ.ಹುಗ್ಗಿ, ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕಣರ್ಿ, ಬಿ.ಆರ್.ಪಾಟೀಲ್, ಬಿ.ಎಲ್.ಡಿ.ಇ ವಿವಿಯ ಅಧೀಕ್ಷಕ ಡಾ. ವಿಜಯ ವಾರದ, ಡಾ.ಎಂ.ಎಸ್.ಮದಭಾವಿ, ಡಾ.ವಿ.ಡಿ.ಐಹೊಳ್ಳಿ, ಪ್ರೊ.ಎ.ಬಿ.ಬೂದಿಹಾಳ, ಜಂಬುನಾಥ ಕಂಚ್ಯಾಣಿ, ಡಾ.ಎಂ.ಎಸ್.ಹಿರೇಮಠ, ಜೆ.ಎಸ್.ಗೌಡರ, ಡಾ.ಗುಗ್ಗರಿಗೌಡರ, ಗಣ್ಣೂರ ದಂಪತಿಗಳು, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಸುರೇಶ ಗೊಣಸಗಿ, ಡಾ. ಬಾಗಾಯತ, ದಶರಥ ತಾವಂಸೆ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.