ರಾಮದುರ್ಗ 06: ಕನ್ನಡ ನಾಡಿನ ಭಾಷೆ, ನೆಲ, ಜಲಗಳ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ಪರ ಸಂಘಟನೆಗಳ ಜೊತೆಗೆ ಸಾಹಿತ್ಯ ಸಂಘಟನೆಗಳು ಸಾಹಿತ್ಯಪರ ಕಾರ್ಯಕ್ರಮಗಳನ್ನು ಏರ್ಪಡಿಸಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ನರಸಿಂಹ ಶಿಂಧೆ ಹೇಳಿದರು.
ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಭಾರತೀಯ ಸೃಜನಶೀಲ ಸಾಹಿತ್ಯ ಬಳಗದ ದ್ವಿತೀಯ ವಾಷರ್ಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಪರ ಸಂಘಟನೆಗಳು ನಾಡಿನ ಏಳಿಗೆಗಾಗಿ ದುಡಿದವರನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅದಕ್ಕೆ ಸರ್ವರ ಸಹಕಾರ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಪಾರ್ವತಿ ಪಾಟೀಲರವರ "ಹೊಂಗನಸು" ಶಶಿಕಲಾ ಯಲಿಗಾರರವರ "ನಕ್ಕು ಖುಷಿಪಡಿ", ಅನುರಾಧಾ ಪಾಟೀಲರವರ "ಕಾವ್ಯನುರಾಧೆ" ಮತ್ತು ಪರಶುರಾಮ ಜರಳಿರವರ "ಕಾವ್ಯೋದಯ" ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಸಂಸ್ಥಾಪಕ ಶ್ರೀಧರ ಆಸಂಗಿಹಾಳ ಮಾತನಾಡಿದರು.
ಗೋಕಾಕದ ಸಾಹಿತಿ ಭಾರತಿ ಮದಭಾಂವಿ ಸಾಹಿತ್ಯ ಬಳಗದ ದಿನದಶರ್ಿಕೆ ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕಿ ಜ್ಯೋತಿ ಮಾಸ್ತಿಹೊಳಿ ಕನ್ನಡ ಶಾಲು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷ ಚಂದ್ರಶೇಖರ ಗಂಗಣ್ಣನವರ ಮಾತನಾಡಿದರು.
ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಮಾರಂಭದಲ್ಲಿ ವೆಂಕಟೇಶ ಹಿರೇರಡ್ಡಿ, ದಾದಾಪೀರ ಹಾಜಿ, ವೆಂಕಟೇಶ ಕೋಂಡಾ, ಸಿಕಂದರ ಮಹಾತ, ಶಶಿಕಲಾ ಯಲಿಗಾರ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ರೀ ಆರ್. ಸಿ ರಾಠೋಡ ಸ್ವಾಗತಿಸಿದರು. ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಪ್ರಾಚಾರ್ಯ ವ್ಹಿ. ಎಚ್. ಪೂಜೇರ ವಂದಿಸಿದರು.
ಕವಿಗೋಷ್ಠಿಃ
ಕಾರ್ಯಕ್ರಮದ ನಂತರ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಆರ್. ಎಸ್. ಪಾಟೀಲ ಮಾತನಾಡಿದರು. ಹಿರಿಯ ಕವಿಗಳಾದ ನೀ. ರಾ. ಗೋಣಿ, ಮಲ್ಲಿಕಾಜರ್ುನ ಶಿಕರ್ೆ, ಗಂಗಾಧರ ಗಾಡದ, ಸಿಕಂದರ ಮಹಾತ, ವ್ಹಿ. ಎ. ಚಿಂಚಗಂಡಿ ಅಲ್ಲದೆ ಉಮೇಶ ಪಾಟೀಲ, ಕಿರಣ ದೇಸಾಯಿ, ಎನ್. ಆಯ್. ಮುದ್ದಾಪೂರ, ಸಮೀರ ಬಾಗಲದ, ಪುಂಡಲೀಕ ಕುರಿ, ವಾಯ್. ಎಫ್. ಶಾನಭೋಗ, ಕೆ. ಎಚ್. ಮುದ್ದಾಪೂರ ಸೇರಿದಂತೆ ಹಲವು ಕವಿಗಳು ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಾನಪದ ಗಾಯಕರಾದ ಭಾರತಿ ಸದಾಶಿವನವರ, ಸೈದುಸಾಬ ನದಾಫ, ನಾಥುರಾಮ ಲಮಾಣಿ, ರಾಮಕೃಷ್ಣ ಬಡಿಗೇರ ಮತ್ತು ಮಲ್ಲಮ್ಮ ಸಾವಳಗಿ ಸೋಬಾನ ಪದ, ಹಂತಿ ಪದ, ಸಂಪ್ರದಾಯ ಪದ, ಲಂಬಾಣಿ ಪದ, ಲಾವಣಿ ಪದಗಳನ್ನು ಹಾಡಿ ಕಾರ್ಯಕ್ರಮದಲ್ಲಿ ಸೇರಿದ ಪ್ರೇಕ್ಷಕರನ್ನು ರಂಜಿಸಿದರು.
ಗುಳೆದಗುಡ್ಡದ ಶಿವಕುಮಾರ ಕರನಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂಶುಪಾಲರಾದ ವ್ಹಿ. ಎಚ್. ಪೂಜೇರ, ಪಾರ್ವತಿ ಪಾಟೀಲ, ಶಶಿಕಲಾ ಯಲಿಗಾರ, ಶಿವಾನಂದ ಚೂರಿ ಹಾಗೂ ಇತರರಿದ್ದರು. ಶಿಕ್ಷಕಿ ಅನಸೂಯಾ ಸಾವಳಗಿ ನಿರೂಪಿಸಿದರು.