ಧಾರವಾಡ ಜಿಲ್ಲಾ ವಿಕಲಚೇತನರ ಒಕ್ಕೂಟದ ಉದ್ಘಾಟನೆಯ ಪೂರ್ವಭಾವಿ ಸಭೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಿತು.
ಬರುವ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾಯಕರನ್ನು ಕರೆಯಿಸಿ, ಒಕ್ಕೂಟದ ಉದ್ಘಾಟನೆ ನೆರವೇರಿಸಲು ತೀರ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದಂತಹ ಜಿಲ್ಲೆಯ ವಿಕಲಚೇತನರನ್ನು ಗುರುತಿಸಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಒಕ್ಕೂಟದ ತಾಲೂಕಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನವಲಗುಂದ-ಬಸವರಾಜ ಮುಂದಿನಮನಿ, ಧಾರವಾಡ-ಯಮನಪ್ಪ ಅರಬಳ್ಳಿ, ಹುಬ್ಬಳ್ಳಿ-ಮಂಜುನಾಥ ಸಿಕ್ಕೇರಿ, ಕುಂದಗೋಳ-ಸಿದ್ದಪ್ಪ ಗಾವಡೆ, ಕಲಘಟಗಿ-ಶರಣು ದೊಡ್ಡಕಲ್ಲಣಗೌಡ್ರ, ಅಣ್ಣಿಗೇರಿ-ಉಮೇಶ ಚೌಡನ್ನವರ ಅವಿರೋಧವಾಗಿ ಆಯ್ಕೆಯಾದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಕೇಶವ ಪಿ. ತೆಲಗು ಮಾತನಾಡಿ, ನೂತನವಾಗಿ ಜಿಲ್ಲೆಯಲ್ಲಿ ಒಕ್ಕೂಟ ಪ್ರಾರಂಭವಾಗುತ್ತಿದ್ದು, ಜಿಲ್ಲೆಯ ಎಲ್ಲಾ ವಿಕಲಚೇತನರು ಒಕ್ಕೂಟದ ಸದಸ್ಯತ್ವ ಪಡೆದುಕೊಂಡು, ಯಶಸ್ವಿಯಾಗಿ ಒಕ್ಕೂಟ ನಡೆಯುವಂತೆ ಸಹಕಾರ ನೀಡಬೇಕು. ಸಾಕಷ್ಟು ಸಮಸ್ಯೆಗಳು ನಮ್ಮ ಮಧ್ಯ ಇದ್ದು, ಆ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಒಕ್ಕೂಟದಿಂದ ಹೋರಾಟಗಳನ್ನು ನಡೆಸುವ ಯೋಜನೆಗಳು ಇವೆ ಎಂದರು.
ರಾಜ್ಯ ಮಟ್ಟದಲ್ಲಿ ಒಕ್ಕೂಟವು ಯಶಸ್ವಿಯಾಗಿ ನಡೆಯುತ್ತಿದೆ. ಈಗ ಈ ಒಕ್ಕೂಟವನ್ನು ಪ್ರತಿ ಜಿಲ್ಲಾ ಕೇಂದ್ರಗಳಿಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ವಿಕಲಚೇತನರು ಈ ಒಕ್ಕೂಟದ ಲಾಭ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೇ ಏನೇ ನಿಮ್ಮ ಸಮಸ್ಯೆಗಳು ಮುಂದೆ ಎದುರಾದರೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಕ್ಕೂಟದ ಸದಸ್ಯರು ಮುಂದೆ ಬರಲಿದ್ದಾರೆ. ಹೀಗಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಳಾರದ ಮಾತನಾಡಿ, ಅನೇಕ ಅರ್ಹ ವಿಕಲಚೇತನರು ಮಾಶಾಸನಕ್ಕೆ ಅರ್ಹರು ಇದ್ದರೂ ಕೂಡಾ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಅಲೆದಾಡುವಂತಹ ಸ್ಥಿತಿ ಇದೆ. ಕೇವಲ ಮಾಶಾಸನ ಅಷ್ಟೇ ಅಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಅದಕ್ಕಾಗಿ ನಮ್ಮಗೆ ಈಗ ಒಕ್ಕೂಟದಿಂದ ಬಲ ಬಂದಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟ ಬೆಳೆಸಿ ಅದರಿಂದ ಸರ್ಕಾ ರದ ಯೋಜನೆಗಳನ್ನು ಪಡೆದುಕೊಳ್ಳಲು ಸಹಾಯವಾಗಲಿದೆ ಎಂದರು.
ಕಾರ್ಯದರ್ಶಿ ಮೆಹಬೂಬ ಮುಲ್ಲನ್ನವರ, ಮಹಿಳಾ ಉಪಾಧ್ಯಕ್ಷೆ ಯಲ್ಲಮ್ಮ ಉಳ್ಳಾಗಡ್ಡಿ, ಜಂಟಿ ಕಾರ್ಯದಶರ್ಿ ಅಬ್ದುಲ ಹಮೀದ್, ಮಂಜುಳಾ ಇಂಚಲ ಸೇರಿದಂತೆ ಜಿಲ್ಲೆಯಿಂದ ನೂರಾರೂ ಸಂಖ್ಯೆಯಲ್ಲಿ ವಿಕಲಚೇತನರು ಪಾಲ್ಗೊಂಡಿದ್ದರು.