ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಆಮರಣ ಸತ್ಯಾಗ್ರಹ

ಲೋಕದರ್ಶನ ವರದಿ

ಕೊಪ್ಪಳ 11: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಶಿಕ್ಷಕ ಬೀರಪ್ಪ ಅಂಡಗಿ ಅವರ ಹೋರಾಟಕ್ಕೆ ಎಐಡಿವೈಒ ಸಂಘಟನೆ ಜಿಲ್ಲಾ ಕಾರ್ಯದಶರ್ಿ ಶರಣು ಗಡ್ಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನೂತನ ಪಿಂಚಣಿ ಯೋಜನೆ  ಕೇಂದ್ರ ಸಕರ್ಾರ 2004ರಲ್ಲಿ ಜಾರಿಗೆ ತಂದಮೇಲೆ 2006ರಲ್ಲಿ ರಾಜ್ಯ ಸಕರ್ಾರಲಿಜಾರಿಗೊಳಿಸಿತು. ಪ್ರಜಾಪ್ರಭುತ್ವ ದಲ್ಲಿ ಒಂದು ಕಾಯಿದೆಯೆನ್ನು ಜಾರಿಗೊಳಿಸಬೇಕಾದರೆ ಅದರ ಬಗ್ಗೆ ಚಚರ್ಿಸಬೇಕು ಆದರೆ ಇದ್ಯಾವುದನ್ನು ಮಾಡದೇ ಹೊಸ ಪಿಂಚಣಿ ತಂದಿ ರುವ ಹುನ್ನಾರ ಬೇರೆ ಇದೆ.   ದೇಶದ ಕಾಪರ್ೊರೇಟ್ ಬಂಡವಾಳಿಗರಿಗೆ ಲಾಭ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ. ಪಿಂಚಣಿ ಯೋಜನೆ ಬೇರೆ ಬೇರೆ ದೇಶದಲ್ಲಿ ನೌಕರರನ್ನು ಬೀದಿಗೆ ತಳ್ಳಿದ್ದು ನಮ್ಮ ದೇಶದ ಕೆಲವರನ್ನು ಉಳಿಸಲು ಲಕ್ಷಾಂತರ ದುಡಿಯುವ ಜನರ ಹಣವನ್ನು ನುಂಗಲು ಹೊಸ ಪಿಂಚಣಿ ಯೋಜನೆ ಹುನ್ನಾರವಾಗಿದೆ ಹಾಗಾಗಿ  ಎಐಡಿವೈಒ ಸಂಘಟನೆ ಸಂಪೂರ್ಣ ಹೋರಾಟಕ್ಕೆ ಬೆಂಬಲಿಸುತ್ತದೆ ಎಂದರು