ಲೋಕದರ್ಶನ ವರದಿ
ಯಲಬುಗರ್ಾ: ಪ್ರತಿಯೊಬ್ಬರೂ ಇಂದಿನ ಕಾಲದಲ್ಲಿ ಘನತಾಜ್ಯ ವಸ್ತುಗಳ ಬಗ್ಗೆ ಹಾಗೂ ಅದರ ನವೀಕರಣದ ಬಗ್ಗೆ ತಿಳಿದುಕೊಂಡು ಅದರ ಸದುಪಯೋಗವಾದರೆ ಮುಂದಿನ ಕಾಲಕ್ಕೆ ಇಂಧನದ ಸೌಲಭ್ಯ ದೊರೆಯುತ್ತದೆ ಎಂದು ಜ್ಞಾನಪೀಠ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದಶರ್ಿ ಉಮಾಶಂಕರ್ ಹಿರೇಮಠ ಹೇಳಿದರು.
ನಗರದ ತಾಪಂ ಸಭಾ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಸುಧಾರಣಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ, ಜ್ಞಾನಪೀಠ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯಲಬುಗರ್ಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ "ನವೀಕರಿಸಬಹುದಾದ ಇಂದನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ಕುರಿತು ಗ್ರಾಮ ಪಂಚಾಯತ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಯುವ ಪಿಳಿಗೆಗೆ ಅವಶ್ಯಕವಾಗಿ ಬೇಕಾದಂತಹ ಅನೇಕ ಇಂದನಗಳನ್ನು ಉಳಿಸುವ ಪ್ರಮುಖವಾದ ಜವಾಬ್ದಾರಿ ನಮ್ಮ ಮೇಲಿದೆ, ಮುಗಿದು ಹೋಗುವ ಇಂದನಗಳು ಸಾಕಷ್ಟಿವೆ ಅವುಗಳನ್ನ ಬೇಕಾದಷ್ಟನ್ನು ಮಾತ್ರ ಉಪಯೋಗಿಸಬೇಕು ಯಾಕೆಂದರೆ ಅವುಗಳು ಯಾವಾಗಲಾದರು ಮುಗಿಯಬಹುದು, ಅದೇ ರೀತಿ ನೀರು ಸಹಿತ ಮುಗಿದು ಹೊಗುವಂತದ್ದಾಗಿದೆ ಅತೀ ಹೆಚ್ಚು ನೀರನ್ನು ಪೋಲಾಗದಂತೆ ನೊಡಿಕೊಳ್ಳಬೇಕು ಪರಸ್ಥಿತಿ ಇಗೇ ಮುಂದುವರೆದರೆ ಕೇಲವು ಜಲ ತಜ್ಞರು ಹೇಳುವ ಪ್ರಕಾರ 2022 ರ ವೆಳೇಗೆ ಕುಡಿಯುವ ನೀರನ್ನು ಸಹಿತ ಬೇರೆ ದೇಶದಿಂದ ತಂದು ಮಾರಾಟ ಮಾಡುವಂತಹ ಪರಸ್ಥಿತಿ ಬಂದರು ಆಶ್ಚರ್ಯವಿಲ್ಲಾ ಆದ್ದರಿಂದ ಎಲ್ಲರೂ ನೀರು ಹಾಗೂ ಇಂಧನಗಳ ಬಗ್ಗೆ ಅತೀ ಹೆಚ್ಚು ಜಾಗೃತಿ ವಹಿಸುವ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ ಹವಳಿ,ಮಂಜುನಾಥ ತರಬೇತಿ ನೀಡಿದರು.
ತಾಪಂ ಅದ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ತಾಪಂ ಲೆಕ್ಕಾಧಿಕಾರಿ ಅಶ್ವತ್ ನಾರಾಯಣ್, ಉದ್ಯೋಗ ಖಾತ್ರಿಯ ಮಹಾಂತಯ್ಯ ಸ್ವಾಮೀ, ಸಂಸ್ಥೆಯ ಪ್ರತಿನೀಧಿಗಳಾದ ಉಮಾಶಂಕರ್, ಗೆದಗೇರಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಬಂಡ್ಲಿ, ಸೇರಿದಂತೆ ಪಿಡಿಓ ಹಾಗೂ ಗ್ರಾಪಂ ಅದ್ಯಕ್ಷರು ಹಾಜರಿದ್ದರು.