ಲೋಕದರ್ಶನ ವರದಿ
ಕೊಪ್ಪಳ 20: ಇಂದಿನ ಮಕ್ಕಳೆ ಈ ನಾಡೀನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರಿಗೆ ಅವರ ಮಾತೃ ಭಾಷೆಯಲ್ಲಿ ಪ್ರಾಥಾಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗುಣಮಟ್ಟದ ಶಿಕ್ಷಣವೇ ಇಂದಿನ ಅಗತ್ಯವಾಗಿದ್ದು, ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ, ಉತ್ತಮ ಸಂಸ್ಕಾರ ಕಲಿಸಿದಂತಾಗುತ್ತದೆ ಎಂದು ನಿವೃತ್ತ ಉಪ ತಹಶಿಲ್ದಾರ್ ಹಾಗೂ ರಾಬಿತೇ ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ಎಂ. ಲಾಯಕ್ ಅಲಿ ಹೇಳಿದರು.
ಅವರು ಶುಕ್ರವಾರ ನಗರದ ವಾಲ್ಮೀಕಿಭವನ ರಸ್ತೆಯಲ್ಲಿರುವ ಆಶಾ ಬಿಲ್ಡಿಂಗ್ಸ್ನಲ್ಲಿರುವ ಎಆರ್ ವಿಸ್ಡಮ್ ಇಂಟರ್ ನ್ಯಾಷ್ನಲ್ ಸ್ಕೂಲ್ನಲ್ಲಿ ಎರ್ಪಡಿಸಿದ ಪ್ರಥಮ ವಾಷರ್ಿಕೊತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಕೊಪ್ಪಳ ನಗರದಲ್ಲಿ ಎಆರ್ ವಿಸ್ಡಮ್ ಶಾಲೆ ಆರಂಭಗೊಂಡು ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಮಕ್ಕಳಿಗೆ ಮಾತೃ ಭಾಷೆ ಉದರ್ು ಸೇರಿದಂತೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವುದರ ಜೊತೆಗೆ ಅರೇಬಿಕ ಇಸ್ಲಾಮಿಕ ಭಾಷೆಯ ಶಿಕ್ಷಣ ಇಲ್ಲಿ ನೀಡುತ್ತಿರುವುದು ಸಂತೊಶದಾಯಕ ವಾಗಿದೆ ಶೈಕ್ಷಣಿಕ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಎಲ್ಲಾ ಶಾಲಾ ಶಿಕ್ಷಕರು, ಪಾಲಕರು ಮತ್ತು ವಿದ್ಯಾಥರ್ಿಗಳಿಗೆ ಉತ್ತಮ ಶಾಲೆ ಇದಾಗಿದೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿದ್ಯಭ್ಯಾಸದ ಕಾರ್ಯ ಅತ್ಯಂತ ಶ್ಲ್ಯಾಘನಿಯವಾಗಿದೆ ಎಂದ ಅವರು ಮಾತೃ ಭಾಷೆಯಲ್ಲಿ ವಿದ್ಯಾಭ್ಯಾಸ ಕಲಿಸ ಬೇಕು ಈ ಶಾಲೆಯ ವಿದ್ಯಾಥರ್ಿ ಉದರ್ು, ಕನ್ನಡ, ಇಂಗ್ಲಿಷ ಮತ್ತು ಅರೇಬಿಕ್ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಅತ್ಯಂತ ಮಹತ್ವದಾಗಿದೆ ಶಾಲೆಯ ಅಧ್ಯಕ್ಷರಾಗಿರುವ ಮೌಲಾನ ಮೊಹಮ್ಮದ್ ಫಾರೂಖ್ರವರ ಕಾರ್ಯ ಶ್ಲ್ಯಾಘನಿಯವಾಗಿದೆ ಎಂದು ನಿವೃತ್ತ ಉಪ ತಹಶಿಲ್ದಾರ್ ಹಾಗೂ ರಾಬಿತೇ ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ಎಂ. ಲಾಯಕ್ ಅಲಿ ಹೇಳಿದರು
ಸಮಾರಂಭದಲ್ಲಿ ನಗರದ ಪ್ರಮುಖ ಯುಸುಫಿಯ ಮಸೀದಿಯ ಖತೀಬ್-ವ-ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿ ಎಆರ್ ವಿಸ್ಡಮ್ ಶಾಲೆ ಮುಸ್ಲಿಂ ಸಮುದಾಯದ ಮಕ್ಕಳ ಪಾಲಿಗೆ ಸಂಜಿವಿನಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಈ ಶಾಲೆ ಮುಸ್ಲಿಂ ಸಮಾಜಕ್ಕೆ ಮಾದರಿ ಶಾಲೆಯಾಗಿದೆ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಈ ಶಾಲೆಗೆ ಸೇರಿಸಬೇಕು ಎಂದು ಸಲಹೇ ನೀಡಿದರು. ವೇದಿಕೆ ಮೇಲೆ ಹಿರಿಯ ಪತ್ರಕರ್ತ ಎಂ. ಸಾಧಿಕ ಅಲಿ, ಪೈಜ್ ಮಸೀದಿಯ ಪೇಶ್ಇಮಾಮ್ ಸೇರಿದಂತೆ ಎಆರ್ ವಿಸ್ಡಮ್ ಶಾಲೆಯ ಅಧ್ಯಕ್ಷರಾದ ಮೌಲಾನ ಮೊಹಮ್ಮದ ಫಾರೂಖ್ ಮತ್ತಿತರರು ಪಾಲ್ಗೊಂಡಿದ್ದರು, ಕಾರ್ಯಕ್ರಮದ ನಂತರ ಶಾಲ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನಮನ ರಂಜಿಸಿತು.