ಸಮ್ಮೇಳನದ ಆಶಯ ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚಲ್ಲುವಂತಿರಲಿ: ಡಾ ಶೇಖರ ಹಲಸಗಿ ಎಂ. ಕೆ

ಸಮ್ಮೇಳನದ ಆಶಯ  ಸ್ಥಳೀಯ ಇತಿಹಾಸದ ಮೇಲೆ ಬೆಳಕು ಚಲ್ಲುವಂತಿರಲಿ: ಡಾ ಶೇಖರ ಹಲಸಗಿ ಎಂ. ಕೆ  The hope of the conference is to shed light on local history: Dr. Shekhar Halasagi M. K.

                    ಹುಬ್ಬಳ್ಳಿ 31 : ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ  3ನೆಯ ಸಾಹಿತ್ಯ ಸಮ್ಮೇಳನ ದಲ್ಲಿ ಪಾಲ್ಗೊಂಡು ಸಮಾರೋಪ ನುಡಿಗಳನ್ನು ಆಡಿದ  ಕನ್ನಡ ಸಾಹಿತ್ಯ ಪರಿಷತ್ತ ನಿಪೂ ಅಧ್ಯಕ್ಷರ ಡಾ ಶೇಖರ. ಹಲಸಗಿ ಯವರು ಮಾತನಾಡುತ್ತ  ಕಿತ್ತೂರು ತಾಲ್ಲೂಕಿನಲ್ಲಿ ಮೊದಲು ಸಮ್ಮೇಳನ  ಅಂಬಡಗಟ್ಟಿ ಗ್ರಾಮದಲ್ಲಿ ಹಿರಿಯ ಸಾಹಿತಿ,ಖ್ಯಾತ ಲೇಖಕರು   ಡಾ ಜ ಚ. ನಿ ಯವರ ಜನ್ಮ ಸ್ಥಳದಲ್ಲಿ ಜರುಗಿ ಡಾ ಜ ಚ ನಿ ಯವರ ಸಾಹಿತ್ಯದ ಮೇಲೆ ಬೆಳಕು ಚಲ್ಲುವ ಕಾರ್ಯ ಜರುಗಿತು, ಎರಡನೇ ಸಮ್ಮೇಳನ ಕಿತ್ತೂರುಲ್ಲಿ ಜರುಗಿತ್ತು  ಈಗ.. ಎಂ ಕೆ. ಹುಬ್ಬಳ್ಳಿಯಲ್ಲಿ ಮೂರನೇ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದೂ  ಸಂತಸ. ಮೂಡಿಸಿದೆ. ಜೊತೆಗೆ ಸಮ್ಮೇಳನದ  ಆಶಯದಂತೆ ಈ ಗ್ರಾಮದ ಐತಿಹಾಸಿಕ, ಸಾಮಾಜಿಕ ಮತ್ತು ಸಾಹಿತ್ತಿಕವಾಗಿ  ಇಲ್ಲಿ ಹುದುಗಿರುವ ಕಲೆ, ಸಂಸ್ಕೃತಿ, ಇತಿಹಾಸದ ಕುರಿತು ಬೆಳಕು ಚಲ್ಲುವ ಮಹತ್ತರ ಕಾರ್ಯ ಜರುಗಿದಾಗ ಮಾತ್ರ. 

                     ಸಮ್ಮೇಳನಕ್ಕೆ ವಹಿಸಿದ ಶ್ರಮ ಸಾರ್ಥಕ ವಾಗುತ್ತೆ. ಎಂಬುದಾಗಿ ಸಮಾರೂಪ ನುಡಿಗಳಲ್ಲಿ ತಮ್ಮ ಕಳಕಳಿಯ ಮಾತುಗಳನ್ನು ಆಡಿದರು. 3 ನೆ ಸಮ್ಮೇಳನ ನದ  ಸರ್ವೋವಾಧ್ಯಕ್ಷರಾಗಿ ಡಾ ಪಾಲಕ್ಷ ಶಿವಯೋಶ್ವರರು  ಸೀಮಿಮಠ ಕಾದರವಳ್ಳಿಯ ಪೂಜ್ಯರು ಹಾಗೂ ಉಳವಿ ಕ್ಷೇತ್ರದ ಪೂಜ್ಯರಾದ ಶಂಕರಯ್ಯ ಶಾಸ್ತ್ರೀಗಳು ಮಾತನಾಡಿ   ನಾಡು ನುಡಿ ಸೇವೆ  ಎಲ್ಲ ಕಾಯಕ ಕ್ಕಿಂತಲೂ ಶ್ರೇಷ್ಠವಾದದ್ದು,  ಕನ್ನಡ ನಮ್ಮ ಹೆಮ್ಮೆ  ಹಿರಿಮೆ, ಇಂಗ್ಲಿಷ್ ಭಾಷೆ ವ್ಯವಹಾರಿಕಾವಾಗಿ ಮಾತ್ರ ಇರಲಿ ಇಂತ ಜಾಗೃತಿ ಮೂಲಕ ಅನುಷ್ಠಾನಕ್ಕೆ ತರುವ ಕಾರ್ಯ ಜರುಗಲು ಕರೆ. ನೀಡಿದರು   3 ನೆ ಸಮ್ಮೇಳನದ ಆಶಯದಂತೆ  ಎಂ ಕೆ ಹುಬ್ಬಳ್ಳಿ  ಮೂಲ ಇತಿಹಾಸದ ಕುರಿತು ಪ್ರಚ್ಯಾವಸ್ತು ಇಲಾಖೆ  ಕಿತ್ತೂರು ಪಟ್ಟಣಕ್ಕೆ ಸೀಮಿತವಾಗಿರದೆ  ನಾಡಿನ ಇತರೆ ಸ್ಥಳಗಳಲ್ಲಿ ಇರುವ ಐತಿಹಾಸಿಕ ಕುರುಹುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಅನುಷ್ಠಾನ ಗೊಳಿಸಲು ಮುಂದಾಗಬೇಕಿದೆ. ವೇದಿಕೆಯಲ್ಲಿ ಷಣ್ಮುಖ ಗಣಚಾರಿ, ಮುಲ್ತಾನಿ, ಡಾ ಎಸ್ ಬಿ ದಳವಾಯಿ ಬಸವರಾಜ್ ಕುಪ್ಪಸಗೌಡರ, ದಾನೇಶ್ವರ ಸಾಣಿಕೊಪ್ಪ ಉಪಸ್ಥಿತರಿದ್ದರು, ಕವಿಗೋಷ್ಠಿ ಜರುಗಿತು 20 ಹೆಚ್ಚು ಕವನ ವಾಚಿಸಿದರು, ಯಶಸ್ವಿಸಮ್ಮೇಳನ ಜರುಗಿತು ವಿವೇಕ್ ಕುರಗುಂದ ನಿರೂಪಿಸಿದರು ವಂದೇ ಮಾತರಂ ಗೀತೆಯೊಂದಿಗೆ ಸಮ್ಮೇಳನ ಸಮಾರೋಪ ಗೊಂಡಿತು