ಬೆಳಗಾವಿ 09: ಸಮಾಜದ ಸಂಕಟಗಳಿಗೆ ಸಾಂತ್ವಾನ ನೀಡುವ ಶಕ್ತಿ ತಾಯಿಗಿದೆ. ತವರಿನ, ಗಟ್ಟಿತನ ಮನೆಯ ಆಚೆಗೆ ಚಾಚಿಕೊಂಡ ತಾಯಿಗೆ ಮಿಡಿಯುವ ಗುಣವಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 9 ರಂದು ಆಯೋಜಿಸಲಾಗಿದ್ದ ಸುನಂದಾ ಎಮ್ಮಿಯವರ ನಾಲ್ಕು ಕೃತಿಗಳಾದ ಗಾಂಧಾರಿಯ ಶಾಪ, ಇತರ ನಾಟಕಗಳು, ನೀರಿಕ್ಷೇ, ಪರಿಮಳದ ಹೊತೇರು, ನೀವೇನಂತೀರಿ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಿಮರ್ಿತಿಯ ನೆಲೆಗಳಿವೆ. ಬಾಲ್ಯ, ಯೌವ್ವನ, ವೃದ್ಧಾಪ್ಯಗಳ ನಡುವೆ ಅರಳಿದ ಮುಗ್ಧತೆ ಮಾತೃ ಮಡಿಲಿಗಿದೆ. ಇಂಥ ಸಾಂತ್ವಾನದ ತಾಯ್ತನವೇ ತುಂಬುವದೇ ಸಾಹಿತಿಯ ಶ್ರೇಷ್ಠ ಸಾಹಿತ್ಯ ಎಂದರು. ಸಾಹಿತಿಯು ಇಂದು ಅತೀ ತುತಾಗರ್ಿ ಪುರಾಣ, ಜಾನಪದ, ಚರಿತ್ರೆಯ ಲೋಕಕ್ಕೆ ಲಗ್ಗೆ ಹಾಕಿ ವಸ್ತುಗಳು ಸಂಪಾಧಿಸಬೇಕಿದೆ. ಅಲ್ಲಿರುವ ಗಾಂಧಾರಿ, ಸೀತೆ, ಸಾವಿತ್ರಿ, ಭಾಗೀರಥಿ, ಸಾವಿತ್ರಿಬಾಯಿ ಪುಲೆಯಂತಹ ಪಾತ್ರಗಳ ಮೂಲಕ ವಾಸ್ತವಕ್ಕೆ ಹೊಸ ದಿಕ್ಕನ್ನು ನೀಡಬೇಕಾಗಿದೆ. ಒಂದೇ ಕುಂಟುಂಬ ಆಚಾರ- ವಿಚಾರ ಸಂತೋಷದ ಮುಖವನ್ನು ಸುನಂದಾ ಎಮ್ಮಿ ಅವರ ನಾಲ್ಕು ಕೃತಿಗಳಲ್ಲಿ ಕಾಣಬಹುದು ಎಂದು ಡಾ.ರಂಗರಾಜ ವನದುರ್ಗ ಹೇಳಿದರು.
ಸಾಹಿತಿ ಡಾ.ಸರಜೂ ಕಾಟ್ಕರ್ ಮಾತನಾಡಿ, ಸುನಂದಾ ಎಮ್ಮಿ ಅವರ ಸಾಹಿತ್ಯದಲ್ಲಿ ಸಮೃದ್ದತೆಯಿದೇ ಕನ್ನಡ ಮಹಿಳಾ ಸಾಹಿತ್ಯಕ್ಕೆ ಹೊಸ ಸೇರ್ಪಡೆಯಾಗುವ ಎಲ್ಲಾ ಗುಣಗಳಿವೆ. ಮಹಿಳಾ ಸಾಹಿತ್ಯದ ಚರಿತ್ರೆ ಗಮನಿಸಿದ ಎಲ್ಲರಿಗೂ ಗೋತ್ತಿರುವಂತೆ ಸಮಾಜದ ಕುಂಟುಂಬದ ಎಲ್ಲಾ ಏರಿಳಿತಗಳನ್ನು ಕರಾರಕ್ಕಾಗಿ ಬರೆದ ಕೀತರ್ಿ ಮಹಿಳಾ ಸಾಹಿತ್ಯಕ್ಕೆ ಸಿಗುತ್ತಿದೆ ಎಂದರು.
ಡಾ.ಮೈತ್ರಾಯೀಣಿ ಗದಿಗೆಪ್ಪಗೌಡರ ಗಾಂಧಾರಿಯ ಶಾಪ, ನೀರಿಕ್ಷೆ ಎರಡು ಕೃತಿಗಳ ಬಗ್ಗೆ ಮಾತನಾಡುತ್ತಾ, ಸಾಹಿತ್ಯದ ಅಭಿವ್ಯಕ್ತಿಯಲ್ಲಿ ಕಾವ್ಯ ಹೇಳಿದ್ದು. ಭಾವಗೀತೆ ಹಾಡಿದ್ದು ನಾಟಕ ಆಡಿದ್ದು ಹೀಗಾಗಿ ನಾಟಕ ರಚನೆ ಮತ್ತು ಪ್ರವೇಶಗಗಳಿಗೆ ವಿಭಿನ್ನ ಮತ್ತು ವೈಶಿಷ್ಠತೆಯಿದೆ ಇದೆ. ಲೇಖಕಿ ಸುನಂದಾ ಎಮ್ಮಿಯವರ ರಚಿಸಿದ ಗಾಂಧಾರಿಯ ಶಾಪ ಮತ್ತು ನಾಟಕಗಳ ಕೃತಿ ಹೇಚ್ಚುಗಾರಿಕೆಯನ್ನು ಹೊಂದಿದೆ. ಐತಿಹಾಸಿಕ ಪೌರಾಣಿಕ ಚಾರಿತ್ರಿಕ ಹಾಗೂ ಸಾಮಾಜಿಕ ನಾಟಕಗಳನ್ನು ಕೃತಿ ಸಮಕಾಲೀನತೆ ಕೃತಿಯಾಗಿದೆ ಎಂದರು.
ಪ್ರೋ.ಶ್ರೀಕಾಂತ ಶ್ಯಾನವಾಡ ಪರಿಮಳದ ಹೂರೇತು, ನೀವೇನಂತಿರಿ ಎರಡು ಕೃತಿಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೇ ವಹಿಸಿ ಡಾ. ನೀಲಗಂಗಾ ಚರಂತಿಮಠ ಮಾತನಾಡಿ, ಬೆಳಗಾವಿ ಲೇಖಕಿಯರ ಸಾಹಿತ್ಯ ರಚನೆ ಇಂದು ಹಲಸಿದೆ. ನನ್ನ ಕುರಿತು ಬರೆದ ಪರಿಮಳದ ಹೂರೇತು ಎಲ್ಲ ಲೇಖಕಿಯರಿಗೆ ಸಮಪರ್ಿತವಾಗಿದೆ ಎಂದರು.
ನಾಗೇಶ ಬಿ.ಎಮ್ಮಿ ಪ್ರಸಾದ ಎಮ್ಮಿ, ಆಶಾ ಕಡಪ್ಪಟ್ಟಿ, ಎಮ್ ವಾಯ್ ಮೇಣಸಿನಕಾಯಿ, ಯು.ರು ಪಾಟೀಲ, ಉಪಸ್ಥಿತರಿದ್ದರು. ಡಾ. ವಿಜಯಲಕ್ಷ್ಮೀ ಪುಟ್ಟಿ ನಿರೂಪಿಸಿದರು. ಡಾ.ಹೇಮಾ ಸುನ್ನೋಳಿ ವಂದಿಸಿದರು.