ಧಾರವಾಡ 29: ಶಾಸ್ತ್ರೀಯ ವಾದ್ಯ ಸಂಗೀತ ಬಹಳ ದೊಡ್ಡ ಕಲೆಯಾಗಿದ್ದು, ಪ್ರಖ್ಯಾತ ತಬಲಾ ಕಲಾವಿದರಾದ ಪಂ.ರಾಮದಾಸ್ ಪಲ್ಸುಳೆ ಅವರು ಧಾರವಾಡಕ್ಕೆ ಆಗಮಿಸಿ ಕಾಯರ್ಾಗಾರದಲ್ಲಿ ವಿಸ್ತಾರವಾಗಿ ತಬಲಾ ಕೌಶಲ್ಯದ ಪ್ರಾಮುಖ್ಯತೆಯನ್ನು ಆಸಕ್ತ ವಿದ್ಯಾಥರ್ಿಗಳಿಗೆ ತರಬೇತಿಗೊಳಿಸಲು ಆಗಮಸಿರುವುದು ಅಭಿನಂದನೀಯ ಎಂದು ಡಾ.ಎಂ.ಎಂ.ಜೋಶಿ ನೇತ್ರಾಲಯದ ತಜ್ಞ ವೈದ್ಯ ಡಾ. ಕೆ.ವಿ.ಸತ್ಯಮೂತರ್ಿ ಹೇಳಿದರು.
ದಿ.28ರಂದು ಧಾರವಾಡದ ಬೇಂದ್ರೆ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಆಯೋಜಿಸಿದ್ದ ಎರಡು ದಿನಗಳ ತಬಲಾ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೊದಲು ನಮಗೆ ಸಂಗೀತ ಕ್ಷೇತ್ರದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಲಿಸದೇ ಇದ್ದರೆ ನಮಗೆ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ, ಇಂಥಹ ಕಾರ್ಯಕ್ರಮ ಉದ್ಘಾಟಿಸಲು ನನಗೆ ಅವಕಾಶ ನೀಡಿದ್ದಕ್ಕೆ ಸಂಯೋಜಕ ವೇಣುಗೋಪಾಲ ಜೋಶಿ ಮತ್ತು ಕುಮಾರೇಶ್ವರ ಕಲ್ಚರಲ್ ಸೊಸೈಟಿಗೆ ಅಭಿನಂದಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಪುಣೆಯ ಪ್ರಭಾಕರ ಪಾಂಡುರಂಗ ಬೇಂದ್ರೆಯವರು ಕಾಯರ್ಾಗಾರ ನಡೆಸಲು ಆಗಮಿಸಿರುವ ಪಂ.ರಾಮದಾಸ್ ಪಲ್ಸುಳೆ ಅವರು ನಾನೂ ಒಂದೇ ಕಾಲೇಜಿನಲ್ಲಿ ಇಂಜನಿಯರಿಂಗ್ ವಿದ್ಯಾಥರ್ಿಗಳಾಗಿದ್ದು, ಮುಂದೆ ಅವರು ತಬಲಾ ಕಲೆಯಲ್ಲಿ ಪ್ರಖ್ಯಾತಿಗಳಿಸಿ ದೇಶ ಕಂಡ ಅಪ್ರತಿಮ ತಬಲಾ ವಾದಕರಾದರು, ಅವರು ಇಂದು ದ.ರಾ.ಬೇಂದ್ರೆ ಪರಿಸರದಲ್ಲಿ ಕಾಯರ್ಾಗಾರ ಆಯೋಜಿಸಿರುವುದು ಅಭಿನಂದನಾರ್ಹವಾದುದು ಎಂದು ಹೇಳಿದರು.
ತಬಲಾ ಕಾಯರ್ಾಗಾರದ ಕೇಂದ್ರ ಬಿಂದು ಪಂ.ರಾಮದಾಸ್ ಪಲ್ಸುಳೆ ಅವರು ಮಾತನಾಡುತ್ತ ಧಾರವಾಡ, ಹುಬ್ಬಳ್ಳಿ, ಹಾವೇರಿ, ಕಾರವಾರ, ವಿಜಯಪುರ, ಬಾಗಲಕೋಟೆ, ಬೆಂಗಳೂರು ಇನ್ನೂ ಮುಂತಾದ ಪ್ರದೇಶಗಳಿಂದ ಬಹಳ ಆಸಕ್ತಿಯಿಂದ ಆಗಮಿಸಿದ ಹಿರಿಯ ಮತ್ತು ಕಿರಿಯ ತಬಲಾ ವಿದ್ಯಾಥರ್ಿಗಳನ್ನು ಉದ್ದೇಶಿಸಿ ತಬಲಾ ಕಲಿಕೆ ಮತ್ತು ಸಾಧನೆಯ ಬಗ್ಗೆ ಕಿವಿಮಾತುಗಳನ್ನು ಹೇಳುತ್ತ ತಬಲಾ ವಾದನ ಕಲೆಯ ಶೃಂಗಾರತೆ, ಬೋಲ್ಗಳು, ತುಕಡಾ, ಮುಕಡಾ, ಕಾಯದಾ ಮುಂತಾದ ವಿಶೇಷತೆಗಳನ್ನು ಎರಡು ದಿನಗಳ ಕಾಯರ್ಾಗಾರದಲ್ಲಿ ವಿಶ್ಲೇಷಿಸುವುದಾಗಿ ತಿಳಿಸಿದರು.
ಪ್ರಖ್ಯಾತ ತಬಲಾ ವಾದಕರಾದ ಉಸ್ತಾದ ನಿಸ್ಸಾರ್ಅಹಮ್ಮದ, ಪಂ.ಉದಯರಾಜ್ ಕಪರ್ೂರ, ಗಜಾನನ ಹೆಗಡೆ, ಶ್ರೀಹರಿ ದಿಗ್ಗಾವಿ, ಬಾನ್ಸುರಿ ವಾದಕ ಕೃಷ್ಣ ಜೋಶಿ, ಪಂ.ವಾದಿರಾಜ ನಿಂಬರಗಿ, ವೇಣಿಮಾಧವ ಚಳಗೇರಿ ಮುಂತಾದವರು ಉಪಸ್ಥಿತರಿದ್ದರು.
ವೇಣುಗೋಪಾಲ ಜೋಶಿ ಸ್ವಾಗತಿಸಿದರು, ಪ್ರಕಾಶ ಬಾಳಿಕಾಯಿ ನಿರೂಪಿಸಿದರು, ಪಂಚಮ ಉಪಾಧ್ಯೆ ವಂದಿಸಿದರು