ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ

ಲೋಕದರ್ಶನ ವರದಿ

ಬ್ಯಾಡಗಿ26: ಇಂದಿನ ಲಿಖಿತ ಸಂವಿಧಾನದ ಆಶಯಗಳನ್ನು ಭಕ್ತ ಶ್ರೇಷ್ಠ ಕನಕದಾಸರ ತಮ್ಮ ಕೀರ್ತನೆಗಳ ಮೂಲಕ, ಇಡೀ ವಿಶ್ವಕ್ಕೆ ಸಾರಿದ ಹೋದ ಮಹಾನ್ ದಾರ್ಶನಿಕರಾಗಿದ್ದಾರೆ, ಅವರಲ್ಲಿದ್ದ ಸಾಮಾಜಿಕ ನ್ಯಾಯವನ್ನು ವಿಶ್ವದ ಎಲ್ಲ ರಾಷ್ಟ್ರಗಳು ಅನುಕರಣೀಯ ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯ ವ್ಯಕ್ತಪಡಿಸಿದರು. 

 ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಕನಕದಾಸ ಜಯಂತೋತ್ಸವದಂಗವಾಗಿ ಹಮ್ಮಿಕೊಂಡಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾವಿರಾರು ವರ್ಷಗಳ ಹಿಂದೆಯೇ ಬಾಳಿ ಬದುಕಿದ್ದ ಶರಣರು, ದಾರ್ಶನಿಕರು, ಕೀರ್ತನಕಾರರು ಪ್ರಜಾಪ್ರಭುತ್ವದ ಕಲ್ಪನೆಯನ್ನು ಹೊಂದಿದ್ದರು ಎಂಬುದು ಕಟುವಾಸ್ತವ, ಆದರೆ ಅಂದೂ ರಾಜಪ್ರಭುತ್ವದ ಪ್ರಾಬಲ್ಯದಿಂದಾಗಿ ಅವುಗಳನ್ನು ತಮ್ಮ ವಿಚಾರಗಳ್ನು ಕ್ರೂಢೀಕರಿಸಲು ಸಾಧ್ಯವಾಗಲಿಲ್ಲ ಅದಾಗ್ಯೂ ಸಹ ಅವರ ವಿಚಾರಧಾರೆಗಳನ್ನು ಲಿಖಿತರೂಪದಲ್ಲಿ ತರುವಷ್ಟರಲ್ಲಿ ನೂರಾರು ಶತಮಾನಗಳನ್ನೇ ಕಳೆಯಬೇಕಾಯಿತು ಎಂದರು.

    ಹಾಲು ಮತದ ಶ್ರೇಷ್ಠತೆ ಎತ್ತಿ ಹಿಡಿಯಬೇಕಾಗಿದೆ: ಹಾಲುಮತ ಸಮಾಜ ವಿಶ್ವದೆಲ್ಲೆಡೆ ಪಸರಿಸಿದೆ, ಮುಗ್ಧ ಸಮುದಾಯದ ಜನರ ಮೂಲ ಉದ್ದೇಶಕ್ಕೆ ಧಕ್ಕೆ ಬರದಂತೆ ಅವರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುವ ಕೆಲಸ ಸಕರ್ಾರಗಳಿಂದಾಗಬೇಕಾಗಿದೆ, ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ, ಅಲ್ಲಿಯವರೆಗೂ ಕನಕದಾಸರ ಸಾಮಾಜಿಕ ನ್ಯಾಯದ ಕಲ್ಪನೆ ಬಹುಶಃ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

       ಶ್ರೀಗಳ ಮಾರ್ಗದರ್ಶನ ಪಡೆದುಕೊಳ್ಳಿ: ಹಾಲುಮತ ಸಮಾಜದ ಜನರು ಕನಕಗುರುಪೀಠದ ನಿರಂಜನಾನಂದಶ್ರೀಗಳ ಮಾರ್ಗದರ್ಶನದಲ್ಲಿ ತಮ್ಮ ಬದುಕನ್ನು ರೂಪಿಸು ಕಾರ್ಯವಾಗಬೇಕಾಗಿದೆ, ಶ್ರೀಮಠದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಶ್ರೀಗಳ ಶಕ್ತಿ ಒಂದು ಸಕರ್ಾರವನ್ನೇ ಬದಲಾವಣೆ ಮಾಡುವಷ್ಟಾಗಿದೆ ಎಂದರೇ ಅತಿಶಯೋಕ್ತಿಯಲ್ಲ ಎಂದರು. 

  ಈ ಸಂದರ್ಭದಲ್ಲಿ ಕನಕಗುರುಪೀಠದ ನಿರಂಜನಾನಂದಶ್ರೀ ಸೇರಿದಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಆಡಳಿತಾಧಿಕಾರಿ ಎಸ್.ಎಫ್.ಎನ್.ಗಾಜೀಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.