ಗಾಂಧಿಜಿಯವರ ಸ್ತಬ್ದಚಿತ್ರಕ್ಕೆ ಅದ್ದೂರಿ ಸ್ವಾಗತ

ಕಾರವಾರ 20: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಗಾಂಧಿಯವರಜೀವನ ಸಾಧನೆಯ ವಿವಿಧ ಘಟ್ಟಗಳನ್ನು ಗುರುತಿಸುವ ವಿನೂತನ ಗಾಂಧಿ ಸ್ಥಬ್ದಚಿತ್ರ ವಾಹನವು ಇಂದು ಸಂಜೆ 4 ಗಂಟೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಖಾಂತರ ಹೊನ್ನಾವರ ಆಗಮಿಸಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು, ಗಾಂಧಿ ಅನುಯಾಯಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

                ಹೊನ್ನಾವರ ಪಟ್ಟಣ ಪಂಚಾಯತ್ಅಧ್ಯಕ್ಷೆ ರಾಜಶ್ರೀ ಬಾಲಚಂದ್ರ ನಾಯ್ಕ ಮತ್ತು ತಹಶೀಲ್ದಾರ ವಿ.ಆರ್.ಗೌಡ ಅವರುಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಾಂಧಿಜಿಯವರ ವಿಚಾರೆದಾರೆಗಳ ಕುರಿತು ಮಾತನಾಡಿದರು.

                ನಂತರ ನಗರದ ಪ್ರಮುಖ  ಬೀದಿಗಳಲ್ಲಿ ಸ್ತಬ್ದಚಿತ್ರವು ಸಂಚರಿಸಿ ಸಾರ್ವನಿಕರಿಗೆ ಮಹಾತ್ಮ ಗಾಂಧಿಜಿಯವರ ಹೊರಾಟದ ಬದುಕಿನ ಚಿತ್ರಣವನ್ನು ಕಣ್ಣಿಗೆಕಟ್ಟುವಂತೆ ಪ್ರದರ್ಶನ ನೀಡಿತು.

ಸಂದರ್ಭದಲ್ಲಿ ಯುವಜನ ಕ್ರೀಡಾ ಇಲಾಖೆ ಅಧಿಕಾರಿ ಸುದೀರ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಮತ್ತಿತರರು ಹಾಜರಿದ್ದರು.