ಶರಣ, ಸಂತರ ಮತ್ತು ಮಹಾತ್ಮರ ಜಯಂತಿಗಳನ್ನು ಸರಕಾರ ಆಚರಣೆ ಮಾಡಬೇಕು
ಬೀಳಗಿ 20: ಶರಣ, ಸಂತರ ಮತ್ತು ಮಹಾತ್ಮರ ಜಯಂತಿಗಳನ್ನು ಸರಕಾರ ಆಚರಣೆ ಮಾಡಬೇಕೆಂದು ಆದೇಶಿಸಿದರೂ ಸರಕಾರದ ಆದೇಶವನ್ನು ಸರಕಾರಿ ಇಲಾಖೆಗಳೆ ಗಾಳಿಗೆ ತೂರುತ್ತಿವೆ. ಹೌದು, ಪಟ್ಟಣದ ಸರಕಾರಿ ಅಗ್ನಿ ಶಾಮಕ ದಳದ ಕಛೇರಿಯಲ್ಲಿ ದಿ. 20 ರಂದು ಶರಣ ವಚನಕಾರ ಸರ್ವಜ್ಞರವರ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ ವಹಿಸಿರುವುದು ಕಂಡು ಬಂದಿದೆ. ಮದ್ಯಾಹ್ನ 3.30 ಘಂಟೆಗೆ ಅಗ್ನಿ ಶಾಮಕ ದಳ ಕಛೇರಿಗೆ ಮಾಧ್ಯಮ ದವರು ಭೇಟಿ ನೀಡಿ ಸರ್ವಜ್ಞರವರ ಜಯಂತಿ ಆಚರಣೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದಾಗ ತಡಪಡಿಸುತ್ತಾ ಕೆಲವೇ ಸಮಯದಲ್ಲಿ ಸರ್ವಜ್ಞರವರ ಜಯಂತಿ ಆಚರಣೆ ಮಾಡಲಾಯಿತು. ಸಮಾಜದಲ್ಲಿದ್ದ ಸಾಮಾಜಿಕ ಪಿಡುಗು, ಅಸಮಾನತೆಗಳನ್ನು ತೊಲಗಿಸಿ ಸಮ ಸಮಾಜ ನಿರ್ಮಾಣ ಮಾಡುವ ಹಾಗೂ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಸರಕಾರ ಶರಣ, ಸಂತರ ಮತ್ತು ಮಹಾತ್ಮರ ಜಯಂತಿಗಳನ್ನು ಆಚರಿಸಲು ಉದ್ದೇಶಿಸಿದ್ದರು ಸರಕಾರಿ ಕೆಲವು ಕಛೇರಿಗಳಲ್ಲಿ ಆಚರಣೆ ಮಾಡಿದರೆ ಇನ್ನೂ ಕೆಲವು ಕಛೇರಿಗಳಲ್ಲಿ ಆಚರಣೆ ಮಾಡುವುದೇ ಇಲ್ಲ. ಇಂದು ಸಮಾಜದಲ್ಲಿ ಜಾತಿಯತೆ ಅಧಿಕವಾಗಿ ಈ ರೀತಿ ಶರಣರ ಮತ್ತು ಮಹಾತ್ಮರ ಜಯಂತಿಗಳ ನಿರ್ಲಕ್ಷವು ಎದ್ದು ಕಾಣುತ್ತಿದೆ. ಇಂದು ಅವರವರ ಶರಣರ ಜಯಂತಿ ಆಚರಣೆಯಲ್ಲಿ ಮಾತ್ರ ಆ ಸಮೂದಾಯ ಮಾತ್ರ ಭಾಗವಹಿಸುತ್ತಿವೆ. ಸರಕಾರಿ ಕಛೇರಿಗಳಲ್ಲಿ ಯಾವ ಶರಣನ ಜಯಂತಿ ಇರುತ್ತದೆಯೋ ಆ ಶರಣನ ಸಮುದಾಯದವ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಮಾತ್ರ ಆ ಶರಣನ ಜಯಂತಿ ಆಚರಣೆ ಆಗುತ್ತದೆ. ಆ ಕಛೇರಿಯಲ್ಲಿ ಆ ಶರಣ ಅಥವಾ ಮಹಾತ್ಮರ ಸಮುದಾಯದ ವ್ಯಕ್ತಿ ಇಲ್ಲದಿದ್ದರೆ ಆಚರಣೆ ಮಾಡದೆ ನಿರ್ಲಕ್ಷ ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.. ಅದಕ್ಕಾಗಿ ಸರಕಾರ ಶರಣರ, ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡದ ಸರಕಾರಿ ಇಲಾಖೆ ಹಾಗೂ ಶಾಲಾ ಕಾಲೇಜುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಿದೆ.
ಕೋಟ್-
ಪಟ್ಟಣದ ಅಗ್ನಿ ಶಾಮಕ ದಳ ಇಲಾಖೆ ಇಂದು ಶರಣ ವಚನಕಾರ ಸರ್ವಜ್ಞರವರ ಜಯಂತಿಯನ್ನು ಆಚರಣೆ ಮಾಡದೇ ಇರುವುದು ತಿಳಿದು ಬಂದಿದೆ. ಈ ಇಲಾಖೆಗೆ ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಲಾಗುದುದು. ಸರಕಾರದ ಆದೇಶದಂತೆ ಯಾವ ಇಲಾಖೆಗಳು ಮತ್ತು ಶಾಲಾ ಕಾಲೇಜುಗಳು ಶರಣ-ಸಂತರ ಮತ್ತು ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡದೇ ನಿರ್ಲಕ್ಷ ತೋರಿದರೆ ಅಂತಹ ಇಲಾಖೆಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.