ಬೆಳಗಾವಿ - 01: "ವಿದ್ಯಾಥರ್ಿಗಳಿಗೆ ಒಳ್ಳೆಯ ಪರಿಸರ, ಶಿಕ್ಷಣ, ಆಟ-ಪಾಠ ಎಲ್ಲವುಗಳಿಗೂ ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಗುರಿ ಮುಂದಿರಬೇಕು, ಗುರು ಹಿಂದಿರಬೇಕು. ಗುರಿ ಮುಟ್ಟಿ ಗರಿ ಮೂಡಿಸಿಕೊಳ್ಳಬೇಕು. ಆ ಮೂಲಕ ನಾಡಿಗೆ, ದೇಶಕ್ಕೆ ಕೀತರ್ಿ ತರಬೇಕು" ಎಂದು ದಕ್ಷಿಣ- ಪಶ್ಚಿಮ ರೇಲ್ವೆ ಬೆಳಗಾವಿ ವಿಭಾಗದ ಮುಖ್ಯ ರಿಜರ್ವರ್ೇಶನ್ ನಿಯಂತ್ರಣಾಧಿಕಾರಿ ಶ್ರೀ ರುದ್ರಪ್ಪ ಮಲಶೆಟ್ಟಿ ಅವರು ನುಡಿದರು.
ಆರ್.ಪಿ.ಡಿ. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗವು ಏರ್ಪಡಿಸಿದ ರಾ.ಚ.ವಿ.ವಿ.ಯ ಅಂತರ್ ಮಹಾವಿದ್ಯಾಲಯಗಳ ಏಕವಲಯ ಪುಟಬಾಲ್ ಪುರುಷ ಪಂದ್ಯಾವಳಿ ಸ್ಪಧರ್ೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾ.ಚ.ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿದರ್ೇಶಕರಾದ ಶ್ರೀ. ಜಗದೀಶ ಘಸ್ತಿ ಯವರು "ಗುರಿ ಸಾಧನೆಗೆ ಶ್ರಮ ಪಡಬೇಕು, ಗುರು-ಶಿಷ್ಯ ಸಂಬಂಧ ಹಳಸಬಾರದು, ಗುರಿ ಮುಟ್ಟಲು ಗುರು ಬೇಕೇ ಬೇಕು, ಹಸಿವಾದಾಗ ಊಟ ರುಚಿಸುತ್ತದೆ, ಹಸಿವಿಲ್ಲದಾಗ ಅಮೃತವೂ ಅರುಚಿಯಾಗುತ್ತದೆ. ಅದಕ್ಕಾಗಿ ಸಾಧನೆ ಮಾಡಲು ಮನಸ್ಸು ಬೇಕು" ಎಂದು ಹೇಳತ್ತ ಕಳೆದ 26 ವರ್ಷಗಳಿಂದ ದೇಹದಾಢ್ಯರ್ ಹಾಗೂ ಕೆಲವು ಸ್ಪಧರ್ೆಗಳಲ್ಲಿ ಆರ್.ಪಿ.ಡಿ. ಕಾಲೇಜು ಸತತವಾಗಿ ಚಾಂಪಿಯನ್ಶಿಪ್ ಗಳಿಸಿಕೊಳ್ಳುತ್ತಿರುವುದನ್ನು ಕೊಂಡಾಡಿದರು.
ಲಿಂಗರಾಜ ಕಾಲೇಜು, ಗೋಗಟೆ ಕಾಲೇಜು, ಜೈನ್ ಕಾಲೇಜು, ಜಿ.ಎಸ್.ಎಸ್. ಕಾಲೇಜು, ಆರ್.ಪಿ.ಡಿ. ಕಾಲೇಜು ಮೊದಲಾದವುಗಳು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಸ್ಪಧರ್ೆಗಳಲ್ಲಿ ಭಾಗವಹಿಸಿವೆ. ಕ್ರೀಡಾ ನಿಣರ್ಾಯಕರಾಗಿ ವಿನಯ್ ನಾಯಕ್ ಹಾಗೂ ತಂಡದವರು ಭಾಗಿಯಾಗಿದ್ದಾರೆ. ದೈಹಿಕ ಶಿಕ್ಷಣ ನಿದರ್ೇಶಕರಾದ ಶ್ರೀ ಆನಂದ್ ಮತ್ತು ಪ್ರಶಾಂತ ಮಂಕಾಳೆ ಅವರು ಉಪಸ್ಥಿತರಿದ್ದರು. ಆರ್.ಪಿ.ಡಿ. ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕರೂ, ಪಂದ್ಯಾವಳಿಯ ಸಂಘಟನಾ ಕಾರ್ಯದಶರ್ಿಗಳೂ ಆದ ಶ್ರೀ. ರಾಮಕೃಷ್ಣ ಎನ್. ಕಾರ್ಯಕ್ರಮ ರೂಪಿಸಿದ್ದರು. ಪ್ರೊ. ವಿಜಯಕುಮಾರ ಪಾಟೀಲರು ನರೂಪಿಸಿದರು. ವಿದ್ಯಾಥರ್ಿ ಸಂಘದ ಉಪಾಧ್ಯಕ್ಷ ಪ್ರೊ. ಸಿ. ಎಮ್. ಮುನ್ನೊಳ್ಳಿ ಸ್ವಾಗತಿಸಿದರು. ವಿದ್ಯಾಥರ್ಿನಿ ಪ್ರತಿನಿಧಿ ಕುಮಾರಿ. ಮಾನಸಿ ಪಾಟೀಲ ವಂದಿಸಿದರು. ವಿದ್ಯಾಥರ್ಿ ಪ್ರಧಾನ ಕಾರ್ಯದಶರ್ಿ ಕೃಷ್ಣಕುಮಾರ ಜೋಶಿ ಹಾಗೂ ಅಧ್ಯಾಪಕ, ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.