ಹೆಣ್ಣು ಈ ಸಮಾಜದ ಕಣ್ಣು: ವೆಂಕಮ್ಮ

ಲೋಕದರ್ಶನ ವರದಿ

ಹೂವಿನಹಡಗಲಿ12: ಹೆಣ್ಣು ಈ ಸಮಾಜದ ಕಣ್ಣು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನನ್ನು ತಾನು ತೋಡಗಿಸಿಕೊಂಡು ನಿಸ್ವಾರ್ಥದಿಂದ ಕೆಲಸದಲ್ಲಿ ತೋಡಗುವಳು. ಆದರೆ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕಿದೆ ಅಷ್ಠೇ ಎಷ್ಠೇ ಶಿಕ್ಷಣ ತಂತ್ರಜ್ಞಾನ ಮುಂದುವರೆದರು ಹೆಣ್ಣು ಮಕ್ಕಳ ಶೋಷಣೆ ನಿಂತಿಲ್ಲಾ ನಾವು ಎಲ್ಲರೂ ಒಂದಾಗಿ ನಮ್ಮ ಹಕ್ಕು ರಕ್ಷಣೆಗೆ ಹೋರಾಡ ಬೇಕಾಗಿದೆ ಎಂದು ಜಿಲ್ಲಾ ಲೇಖಕಿಯರ ಸಂಘದ ಸದಸ್ಯೆ ಬಳ್ಳಾರಿಯ ಸಾಹಿತಿ ಎನ್ ಡಿ ವೆಂಕಮ್ಮ ಹೇಳಿದರು.

        ದೇವಗೊಂಡನಹಳ್ಳಿ ಪಾಟೀಲ್ ಪ್ರಕಾಶನ ಸೋಗಿ ಹಾಗೂ ಬಳ್ಳಾರಿ ಜಿಲ್ಲಾ ಕನರ್ಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ದಿವ್ಯ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹಾಲಪ್ಪ ಚಿಗಟೇರಿ ಇಟ್ಟಗಿ ಇವರು ರಚಿಸಿದ 'ಹಾಚಿ ವಚನಗಳು' ಡಾ. ಅಂಜನಾ ಕೃಷ್ಣಪ್ಪ ಸಂಪಾದಕತ್ವದ 'ಬಿಸಿಲು ಮಲ್ಲಿಗೆ' ಕವನ ಸಂಕಲನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಕೊಡುಗೆಯಾಗಿ ನೀಡಿದ್ದಾರೆ . ಸಮಾಜದಲ್ಲಿ ಸರಿಯಾದ ಸ್ಥಾನಮಾನಗಳು ಮಹಿಳೆಯರಿಗೆ ಸಿಗುತ್ತಿಲ್ಲಾ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಹೇಳಿದರು. 

     ನಯನ ಮಲ್ಲಿನಾಥ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಕಾವ್ಯವನ್ನು ರಚಿಸಬೇಕಾದರೆ ಯಾವುದೆ ವಿಷಯ ವಸ್ತುವನ್ನು ಆನಂದಿಸಿದಾಗ ಮಾತ್ರ ಅದನ್ನು ಬರೆಯಲಿಕ್ಕೆ ಮಾತ್ರ ಸಾಧ್ಯ ಭಾವನೆಗಳನ್ನು ನೊವುಗಳನ್ನು ನಾವು ಹೇಳಲಾಗದೆ ಅದನ್ನು ನಮ್ಮಲ್ಲಿಯೇ ಅದನ್ನು ನುಂಗಿಕೊಳ್ಳುತ್ತೆವೆ ಆದರೆ ಅದನ್ನು ಬರಹದ ಮೂಲಕವಾದರೂ ಹೊರಹಾಕಬೇಕು ಅದು ಕಾವ್ಯವಾಗಿ ಮಾರ್ಪಡುತ್ತದೆ ಎಂದು ಹೇಳಿದರು. ಬಿಸಿಲ ಮಲ್ಲಿಗೆ ಕವನ ಸಂಕಲನವು ಬಿಸಿನಲ್ಲಿ ಮಲ್ಲಿಗೆ ವಾಸನೆಯು ಹರಡುವ ಹಾಗೆ ಇದರಲ್ಲಿಯ ಕವನಗಳು ಭೌಗೋಳಿಕ,ಪ್ರಾಕೃತಿಕ,ರಾಜಕೀಯ, ಅಂಬೇಡ್ಕರ್, ಎಂ ಪಿ ಪ್ರಕಾಶರ ಕುರುತಾದ ವಿಷಯಗಳಿಗೆ ಸಂಬಂಧಿಸಿವೆ ಎಲ್ಲಾ ಬಗೆಯ ಓದುಗರನ್ನು ತನ್ನತ್ತಾ ಸೆಳೆಯುವ ವಿಷಯ ವಸ್ತುವನ್ನು ಇದು ಹೊಂದಿದೆ ಎಂದು ಹೇಳಿದರು.

          ಕಾರವಾರದ ವಿದ್ಯುತ್ತ ಉತ್ಪಾದನಾ ಘಟಕ ಕೈಗಾದ ಜಿ ಶಿವಕುಮಾರ ಮಾತನಾಡಿ ಸಾಹಿತಿಯು ತನ್ನ  ಅಂತರಾಳದ ರೂಪಕ್ಕೆ ಬರಹದ ಮೇರಗನ್ನು ನೀಡಿದಾಗ ಅದು ಕವನ ಕಾವ್ಯವಾಗುತ್ತದೆ ಪುಸ್ತಕದ ಶೀಷರ್ಿಕೆ ಅದರ ವಿಷಯ ವಸ್ತುವನ್ನು ಹೇಳುವಂತಿರಬೇಕು. ಅದು ಆಕರ್ಷಣೆಯಾಗಿ ಇದ್ದರೆ ಮಾತ್ರ ಪುಸ್ತಕವನ್ನು ಓದುವ ಕೊಂಡುಕೊಳ್ಳುವ ಮನೋಭಾವ ಉಂಟಾಗುತ್ತದೆ. ವಚನಗಳು ಜೀವಾಮೃತ ವಿಚಾರಧಾರೆಗಳನ್ನು ಕಡಿಮೆ ಪದದಲ್ಲಿ ವಿಸ್ತಾರವಾದ ವಿಚಾರಧಾರೆಗಳನ್ನು ಹೇಳುತ್ತವೆ." ಹಾಚಿಯವರು ತಮ್ಮ ವಚನಗಳಲ್ಲಿ ಪ್ರತಿ ಸಂದರ್ಭದಲ್ಲಿ ದೇವರನ್ನು ನೆನೆಯುತ್ತಾರೆ ನಾವೆಲ್ಲರೂ ದುಖ: ಬಂದಾಗ ಮಾತ್ರ ನೆನೆಯುತ್ತೆವೆ ಎಂದು ಹೇಳಿದರು.

     ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ ವೀಣಾ ಪರಮೇಶ್ವರಪ್ಪ ಉದ್ಘಾಟಿಸಿದರು.  ಶಿವಲೀಲಾ ಅರವಿಂದ ಕೃತಿಗಳ ಬಗ್ಗೆ ಮಾತನಾಡಿದರ. .ಅತಿಥಿಗಳಾಗಿ ಸರೋಜ ಬ್ಯಾಟನ್ಹಾಳ್, ಎಂ ಎಸ್ ಹಿಮರಾಜ್, ಬಿ ಮಾಹಾಂತೇಶ ಶಿಕ್ಷರಾದ ಸದ್ಗುಣಾ, ಮಂಜುನಾಥ ಪಟ್ಟೇದ್ ಸಾಹಿತಿ ಕೌಸಲ್ಯ ದೇವೆಂದ್ರನಾಯ್ಕ ಭಾಗವಹಿಸಿದ್ದರು. ಅದ್ಯಕ್ಷತೆಯನ್ನು ಡಾ. ಅಂಜನಾಕೃಷ್ಣಪ್ಪ ವಹಿಸಿ ಪ್ರಾಸ್ತಾವಿಕವಾಗಿ ಚನ್ನವೀರನಗೌಡ ಪಾಟೀಲ್ ಮಾತನಾಡಿದರು. ಶಿಕ್ಷಕಿಯಾದ ಯಶೋಧ ಸ್ವಾಗತಿಸಿದರು. ಮುಖ್ಯಗುರು ಹಾಲೇಶ ಹಕ್ಕಂಡಿ, ಸಾಹಿತಿ ಹಾಲಪ್ಪ ಚಿಗಟೇರಿ ನಿರ್ವಹಿಸಿದರು. ಸಂಗೀತ ಶಿಕ್ಷಕ ಯುವರಾಜಗೌಡ ಮತ್ತು ತಂಡ ಪ್ರಾಥರ್ಿಸಿದರು.