ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ: ವಾಲಿಕಾರ್

ಲೋಕದರ್ಶನ ವರದಿ

ಕೊಪ್ಪಳ 18: ಮಕ್ಕಳೆ ದೇಶದ ಆಸ್ತಿ, ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಟೇಕ್ಟರ್ ಶಿವಾನಂದ ವಾಲಿಕಾರ್ ಹೇಳಿದರು.

ನಗರದ ಗವಿಮಠ ಹತ್ತಿರವಿರುವ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಶಾಲೆಯಲ್ಲಿ  ಶನಿವಾರ ಆಯೋಜಿಸಲಾಗಿದ್ದ  ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಉತ್ತಮವಾದ ಸಂಸ್ಕಾರ ಪಡೆದು  ಸಮಾಜಕ್ಕೆ  ಮಾದರಿಯಾಗುವಂತ ನಾಗರೀಕನಾಗಿ ಬದುಕು ಸಾಗಿಸಬೇಕು.  ಅಲ್ಲದೇ ಉನ್ನತ ಶಿಕ್ಷಣ ಪಡೆದು ದೇಶವನ್ನು ಅಭಿವೃದ್ಧಿ  ಪಥದಲ್ಲಿ  ಮುನ್ನಡೆಸಬೇಕು. ಹಿರಿಯರಿಗೆ ಗೌರವಿಸುವುದನ್ನು ಕಲಿತುಕೊಳ್ಳಬೇಕು. ನಿಮ್ಮ ಸಾಧನೆಯ ಹಿಂದೆ ನಿಮ್ಮ  ತಂದೆ-ತಾಯಿಯ ಅಗಾ ಪರಿಶ್ರಮವಿರುತ್ತದೆ.  ಹೀಗಾಗಿ ಅವರನ್ನು ಕೊನೆಯವರೆಗೆ ಜೋಪಾನವಾಗಿ ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

ಹಿರಿಯ ಪತ್ರಕರ್ತ ಚಾಮರಾಜ ಸವಡಿ ಅವರು ಮಕ್ಕಳು ಪ್ರತಿಯೊಂದು ಕ್ಷಣಗಳ್ನನು ಸಂತಸದಿಂದ ಕಳೆಯಬೇಕು. ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ  ಸಾಧನೆಯ ಕೊಡುಗೆ ನೀಡಬೇಕೆಂದರು. ಸಮಾಜ ಸೇವಕ ಚಂದ್ರಶೇಖರ ಪಾಟೀಲ್ ಹಲಗೇರಿ ಅವರು ಮಕ್ಕಳಲ್ಲಿ  ದೇಶಭಕ್ತಿ ಮತ್ತು ದೇಶಾಭಿಮಾನ ಬೆಳೆಸುವಂತೆ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ  ಹುಲಗಪ್ಪ  ಕಟ್ಟಿಮನಿ ಮಾತನಾಡಿ, ಮಕ್ಕಳು ಒಂದು ಅದ್ಭುತ. ಮಕ್ಕಳಲ್ಲಿ  ಎಲ್ಲ ರೀತಿಯ ಶಕ್ತಿ  ಅಡಗಿದೆ.

ಮಗುವಿಗೆ ಶಾಲೆ ಮತ್ತು ಮನೆ ಎರಡು ಕಣ್ಣುಗಳಿದ್ದಂತೆ, ಶಾಲೆ ಮತ್ತು ಮನೆಯಿಂದ ಮಗುವಿನ ಭವಿಷ್ಯ ರೂಪಗೊಳ್ಳುತ್ತದೆ. ನಾವು ಬೆಳೆಯುವಾಗ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ  ಏನಾದರೂ ಸಾಧನೆಯನ್ನು ಮಾಡಿ ಸಾಧಕರ ಪಟ್ಟಿಯಲ್ಲಿ  ನಮ್ಮ  ಹೆಸರನ್ನು  ಸೇರಿಸಿಕೊಳ್ಳೋಣ.

ಶಾಲಾ ವಿದ್ಯಾಥರ್ಿಗಳಾದ ಸಂಜನಾ, ರಂಜೀತಾ, ಅನಿಕೇತ ಕುಂಬಾರ, ಕೃಷ್ಣವೇಣಿ ರೆಡ್ಡಿ, ಆಯುಷಾ ಕೋಲ್ಕಾರ, ಅಕ್ಷತಾ ಕಟ್ಟಿಮನಿ ಅವರು ಮಕ್ಕಳ ದಿನಾಚರಣೆಯ ಕುರಿತು ಪ್ರಾಸ್ಥವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಉದ್ಯಮಿಗಳಾದ ವೆಂಕಟೇಶ ಸುಂದರಂ, ಸಂಸ್ಥೆಯ ಸದಸ್ಯರಾದ ಮಾಸ್ತಿ ಕಟ್ಟಿಮನಿ, ಶಾಲಾ ಮುಖೋಪಾಧ್ಯಾಯರಾದ ಪರಶುರಾಮ ಮ್ಯಾಳಿ ಸೇರಿ ಇತರರು ಇದ್ದರು.

ಶಾಲಾ ಮಕ್ಕಳಾದ ಭಾಗ್ಯಶ್ರೀ ಡಿ. ನಿರೂಪಿಸಿದರು. ಅಸ್ಮಿತಾ ಮತ್ತು ತಂಡದವರು ಪ್ರಾಥರ್ಿಸಿದರು. ಪುಷ್ಪಾಂಜಲಿ ಮ್ಯಾಗೇರಿ ಸ್ವಾಗತಿಸಿದರು. ಸಯ್ಯದಾ ರೋಷನ್ ಮತ್ತು ಸೋಮಶೇಖರ ನಾಯಕ ಛದ್ಮವೇಷ ಕಾರ್ಯಕ್ರಮ ನೆರವೇರಿಸಿದರು. ಸಂಜನಾ ಮ್ಯಾಗೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಶ್ರೀಹರಿ ಕಲ್ಲಣ್ಣನವರ ವಂದಿಸಿದರು.