ಪುಣ್ಯಾರಾಧನೆ ಮಹೋತ್ಸವ ನಿಮಿತ್ಯ ಸಾಮೂಹಿಕ ವಿವಾಹ ಸಕರ್ಾರಕ್ಕೆ ಮಾಡಲಾಗದ ಸಮಾಜಿಮುಖಿ ಕಾರ್ಯಗಳನ್ನು ಮಠ,ಮಾನ್ಯಗಳು ಮಾಡುತ್ತಿವೆ

ಲೋಕದರ್ಶನ ವರದಿ

ಇಂಡಿ 25:ಭೀಕರ ಬರಗಾಲದಲ್ಲಿ ಜನ,ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಇಂದು,ಗೊಳಸಾರ ಮಠದಲ್ಲಿ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು ಒದಗಿಸಿ ರಕ್ಷಣೆ ಮಾಡುವ ಕೆಲಸಕ್ಕೆ ಕೈಹಾಕಿರುವುದು ಶ್ಲಾಘನೀಯ ಸಂಗತಿ.10 ಸಾವಿರ ಮಕ್ಕಳಿಗೆ ತ್ರೀವಿಧ ದಾಸೋಹ ನೀಡುವ ತುಮಕೂರಿನ ಸಿದ್ದಗಂಗಾ ಮಠ, ಚಿತ್ರದುರ್ಗದ ಮುರುಘಾ ಮಠ ಹಾಗೂ ಸುತ್ತೂರ ಮಠದ ಮಾದರಿಯಲ್ಲಿ ಗೋಳಸಾರ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠ ನಾಡಿನಲ್ಲಿ ಬೆಳಗುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯ ನಗರ ನೀರು,ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಶುಕ್ರವಾರ ತಾಲೂಕಿನ ಗೊಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ 25 ನೇ ಪುಣ್ಯಾರಾಧನೆ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಸಾಮೂಹಿಕ ವಿವಾಹ,ಧರ್ಮಸಭೆ,ಮಂಗಲ ಕಾಯರ್ಾಲಯದ ಅಡಿಗಲ್ಲು ಸಮಾರಂಭ,ಗೋಶಾಲೆ ಉದ್ಘಾಟನೆ,ಧ್ವನಿ ಸುರುಳಿ ಬಿಡುಗಡೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಕರ್ಾರಕ್ಕೆ ಮಾಡಲಾಗದ ಸಮಾಜಿಮುಖಿ ಕಾರ್ಯಗಳನ್ನು ನಾಡಿನ ಮಠ,ಮಾನ್ಯಗಳು ಮಾಡುತ್ತಿವೆ.ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳು ಲಿಂಗೈಕ್ಯರಾಗಿ 25 ವರ್ಷ ಕಳೆದರೂ ಅವರು ಇಂದು ಎಲ್ಲ ಭಕ್ತರ ಮನೆ,ಮನದಲ್ಲಿ ಬೆಳಕಾಗಿದ್ದಾರೆ. ಎಲ್ಲರನ್ನು ಪ್ರೀತಿಸಿ, ಜೊತೆಯಾಗಿ ಕರೆದುಕೊಂಡು ಹೋಗುವ ಮಠ ಗೋಳಸಾರ ಮಠವಾಗಿದೆ.ಮೌನ ಕ್ರಾಂತಿಯ ಮೂಲಕ ಧಾಮರ್ಿಕ ಇತಿಹಾಸ ಮೂಡಿಸುತ್ತಿರುವ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.ಬರದಿಂದ ತತ್ತರಿಸಿರುವ ತಾಲೂಕಿನ ಜನ, ಜಾನುವಾರುಗಳಿಗೆ, ಯಾರ ಬಳಿ ನೀರು, ಮೇವು ಇದೆಯೋ ಅದನ್ನು ಇಲ್ಲದವರಿಗೆ ನೀಡಬೇಕು. ಕಷ್ಟದಲ್ಲಿ ಸಹಾಯ ಮಾಡಿದರೆ ಭಗವಂತನ ಕೃಪೆಯಾಗುತ್ತದೆ ಎಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಇಂದಿನ ಸಮಾಜದಲ್ಲಿ ಬಡವರಿಗೆ ಆಶ್ರಯ ನೀಡಿ,ಬಡಮಕ್ಕಳಿಗೆ ಶಿಕ್ಷಣ ನೀಡುತ್ತ,ಅನ್ನ ದಾಸೋಹ,ಜ್ಞಾನ ದಾಸೋಹ ನೀಡುತ್ತಿರುವ ಗೋಳಸಾರ ಮಠ ಅಭಿನವ ಶ್ರೀಶೈಲವಾಗಿದೆ ಎಂದು ಹೇಳಿದರು.ಇದೊಂದು ಜಾತಿರಹಿತ ಮಠವಾಗಿದೆ ಎಂದರು.

ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ರೇವಣಸಿದ್ದ ಶ್ರೀ,ಸಿದ್ದಮಲ್ಲ ಶ್ರೀ,ಅಮೃತಾನಂದ ಶ್ರೀ,ಸಿದ್ದರತ್ನ ಅವುದಸಿದ್ದ ಶ್ರೀ,ಅಮೃತಾನಂದ ಶ್ರೀ,ಅಭಿನವ ಶಿವಲಿಂಗೇಶ್ವರ ಶ್ರೀ,ರುದ್ರಮುನಿ ಶ್ರೀ,ವಿರೇಶ್ವರ ಶ್ರೀ,ಶರಣಬಸವ ಶ್ರೀ,ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ಮಹಾರಾಷ್ಟ್ರದ ಮಾಜಿ ಗ್ರಹಸಚಿವ ಸಿದ್ಧರಾಮ ಮೇತ್ರಿ ಚಿನ್ಮಯಮೂತರ್ಿ ತ್ರೀಧರೇಶ್ವರ ಮಂಗಲ ಕಾಯರ್ಾಲಯದ ಉದ್ಘಾಟನೆ ನೆರವೇರಿಸಿದರು. ಧಾರವಾಡ ಮುಖ್ಯ ಆಡಳಿತಾಕಾರಿ ಮನೋಹರ ಮಂದೋಲಿ,,ಸಾ.ಸಿ.ಬೆನಕನಹಳ್ಳಿ,ಡಾ.ಸಂದೀಪ ಪಾಟೀಲ,ಜಿಪಂ ಸದಸ್ಯ ಆಲಿಂಗರಾಯ ಮಹಾರಾಜಮಠ, ಬಿ.ಡಿ.ಪಾಟೀಲ, ಎಸ್.ಬಿ.ಬರಗುಂಡಿ, ಉಮೇಶ ಕೊಳಕೂರ, ಚನ್ನುಗೌಡ ಪಾಟೀಲ, ಬಾಬುಗೌಡ ಪಾಟೀಲ, ಜಟ್ಟೆಪ್ಪ ರವಳಿ, ಗುರು ನಾಯ್ಕೋಡಿ, ವೈ.ಬಿ.ಕೊಳ್ಳೂರಶಾಸ್ತ್ರಿ, ಶಿವಲಿಂಗಪ್ಪ ನಾಗಠಾಣ, ರವೀಂದ್ರ ಆಳೂರ, ಸಿದ್ದು ಬೇಲ್ಯಾಳ, ರಮೇಶ ಕನಮಡಿ, ಸಕೀನಾಬೇಗಂ ಪಾಟೀಲ, ವಿನೋದ ದೊಡ್ಡಗಾಣಿಗೇರ, ಎನ್.ಎಸ್.ತೆಗ್ಗೆಳ್ಳಿ, ಡಿ.ಬಿ.ಕುಂಬಾರ, ಎ.ಎಸ್.ಪಾಸೋಡಿ, ಮೌಲಾಲಿ ಯಾಳಗಿ, ವಿಲಾಸ ಹುಲ್ಲೇನವರ, ಮಲಕಯ್ಯ ಮಠಪತಿ, ದತ್ತಾತ್ರೇಯ ಮಠಪತಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. ಈ ಸಂದರ್ಭದಲ್ಲಿ 64 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು, ಇದಕ್ಕೂ ಮುಂಚೆ ಶ್ರೀ ಸಿದ್ದರಾಯ ದೇವರ ಪಲ್ಲಕ್ಕಿ ಹಾಗೂ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳನ್ನು ಕುಂಭದೊಂದಿಗೆ ಮೆರವಣಿಗೆ ಮೂಲಕ ಪುಂಡಲಿಂಗ ಶ್ರೀಗಳ ದೇವಸ್ಥಾನಕ್ಕೆ ಬರಲಾಯಿತು.