ಸಂವಿಧಾನದ ಮೂಲಭೂತ ಹಕ್ಕುಗಳನ್ನು ಸಮರ್ಕವಾಗಿ ಜಾರಿಯಾಗಬೇಕು
ಮೂಡಲಗಿ 26: ನಮ್ಮ ಸಂವಿಧಾನದಲ್ಲಿ ಭಾರತದ ಗಣರಾಜ್ಯದ ಮೂಲಭೂತ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ವಿಧಿಸಲಾಗಿದೆ. ಇವುಗಳನ್ನು ಸಮರ್ಕವಾಗಿ ಪಾಲಿಸಬೇಕಾದುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಅರಭಾವಿ ಕಿ.ರಾ.ಚ.ತೋ ಮಹಾವಿದ್ಯಾಲಯದ ಡೀನ್ ಡಾ: ಎಮ್. ಜಿ. ಕೆರುಟಗಿ ಹೇಳಿದರು. ತಾಲೂಕಿನ ಅರಭಾವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದ ಮತ್ತು ರಾಜ್ಯದ ಮಹತ್ವದ ಸಾಧನೆಗಳನ್ನು ನೆನೆಸುತ್ತ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ಪ್ರಗತಿ ನೋಟ ಹಾಗೂ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿವಿಧ ಕ್ಷೇತ್ರದಲ್ಲಿನ ವರ್ಷದ ಸಾಧನೆಗಳನ್ನು ವಿವರಿಸಿದ ಅವರು ಭಾರತದ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1935 ರ ಸರ್ಕಾರದ ಕಾಯ್ದೆಗೆ ತಿದ್ದುಪಡಿತಂದು ವಾಸ್ತವವಾಗಿ ನವೆಂಬರ್ 26, 1949 ರಂದು ಅಂಗೀಕರಿಸಲ್ಪಟ್ಟು, 1950 ರ ಜನವರಿ 26 ರಂದು ಪ್ರಜಾಸತ್ತಾತ್ಮಕ ಗಣರಾಜ್ಯ ರಾಷ್ಟ್ರವೆಂದು ಘೋಷಿಸಲಾಯಿತು ಎಂದರು. ಮಹಾವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಕ ಹಾಗೂ ಸೇವಕಿಯರಿಂದ ಪಥ ಸಂಚಲನ ಮತ್ತು ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ರಾ.ಸೇ.ಯೋ. ಘಟಕ ಸಂಯೋಜನಾ ಅಧಿಕಾರಿ ಡಾ. ರಾಘವೇಂದ್ರ ಕೆ. ಎಸ್., ಡಾ. ಎಸ್.ಜಿ. ಪ್ರವೀಣಕುಮಾರ ಹಾಗೂ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು. ಕುಮಾರಿ ಪ್ರೇಮಾ ನಿರೂಪಿಸಿ ವಂದಿಸಿದರು. ಫೋಟೋ ಕ್ಯಾಪ್ಸನ್> ಮೂಡಲಗಿ: ಅರಭಾವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು