ನಾಳೆ 'ಯಕ್ಷಕಾಳಗ' ಎಂಬ ನಾಲ್ಕು ಆಖ್ಯಾನಗಳ ಪ್ರದರ್ಶನ

 ಸಿದ್ದಾಪುರ 29: ತಾಲೂಕಿನ ವಾಜಗದ್ದೆಯ ಶ್ರೀದುಗರ್ಾವಿನಾಯಕ ಸಭಾಭವನದ ದಿ.ಕಣ್ಣಿಮನೆ ಗಣಪತಿ ಭಟ್ಟ ವೇದಿಕೆಯಲ್ಲಿ ಅ.31ರಂದು 'ಯಕ್ಷಕಾಳಗ' ಎಂಬ ನಾಲ್ಕು ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.

            ಶ್ರೀದುಗರ್ಾವಿನಾಯಕ ಯಕ್ಷಮಿತ್ರ  ಬಳಗ (ರಿ) ವಾಜಗದ್ದೆ ಇವರು ಕಳೆದ 15ವರ್ಷಗಳಿಂದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ.2011ನೇ ಇಸವಿಯಿಂದ ಪ್ರತಿವರ್ಷ ಅ.31ನೇ ತಾರೀಖಿನಂದೇ ಪ್ರದರ್ಶನವನ್ನು ಏರ್ಪಡಿಸುತ್ತ 'ವಾಜಗದ್ದೆ ಆಟ' ಎಂದೇ ಖ್ಯಾತಿಯನ್ನು ಯಕ್ಷಗಾನ ವಲಯದಲ್ಲಿ ಪಡೆದುಕೊಂಡಿದೆ.

            ಈ ಬಾರಿಯ ಯಕ್ಷಗಾನ ಪ್ರದರ್ಶನದಲ್ಲಿ ಲವ-ಕುಶ, ಸುಧನ್ವಾಜರ್ುನ, ಕರ್ಣಪರ್ವ, ಗದಾಯುದ್ಧ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಕೇಶವ ಹೆಗಡೆ ಕೊಳಗಿ, ವಿ.ಗಣಪತಿ ಭಟ್ಟ, ಸುರೇಶ ಶೆಟ್ಟಿ, ಸತೀಶ ಹೆಗಡೆ ದಂಟಕಲ್, ರಾಘವೇಂದ್ರ ಆಚಾರ್ ಜನ್ಸಾಲೆ, ಹಿಲ್ಲೂರು ರಾಮಕೃಷ್ಣ ಹೆಗಡೆ.

            ಮದ್ದಲೆಯಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಪರಮೇಶ್ವರ ಭಂಡಾರಿ ಕಕರ್ಿ, ಸುನೀಲ್ ಭಂಡಾರಿ ಕಡತೋಕಾ, ಚಂಡೆಯಲ್ಲಿ ಗಣೇಶ ಗಾಂವಕರ್ ಕನಕಹಳ್ಳಿ, ರಾಕೇಶ ಮಲ್ಯ ಹಾಲಾಡಿ, ಶಿವಾನಂದ ಕೋಟಾ ಭಾಗವಹಿಸಲಿದ್ದಾರೆ.

            ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳ್ಕೂರು, ಹಡಿನಬಾಳ ಶ್ರೀಪಾದ ಹೆಗಡೆ, ಗೋಪಾಲ ಆಚಾರ್ ತೀರ್ಥಹಳ್ಳಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಥಂಡಿಮನೆ ಶ್ರೀಪಾದ ಭಟ್ಟ, ಸುಬ್ರಹ್ಮಣ್ಯ ಚಿಟ್ಟಾಣಿ, ರಮೇಶ ಭಂಡಾರಿ, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಹೆಗಡೆ ಚಪ್ಪರಮನೆ, ತೋಟಿಮನೆ ಗಣಪತಿ ಹೆಗಡೆ, ವಿದ್ಯಾಧರ ಜಲವಳ್ಳಿ,ಶ್ರೀಧರ ಭಟ್ಟ ಕಾಸರಕೋಡ, ಸುಬ್ರಹ್ಮಣ್ಯ ಯಲ್ಲಗುಪ್ಪ, ಶಶಿಕಾಂತ ಶೆಟ್ಟಿ, ನೀಲ್ಕೋಡ ಶಂಕರ ಹೆಗಡೆ, ಸಂಜಯ ಬೆಳೆಯೂರು, ಉದಯ ಕಡಬಾಳ, ಕ್ಯಾದಗಿ ಮಹಾಬಲೇಶ್ವರ, ರಾಜೇಶ ಭಂಡಾರಿ, ಕಾತರ್ೀಕ ಚಿಟ್ಟಾಣಿ, ವಿಜಯ ಗಾಣಿಗ, ನರಸಿಂಹ ಗಾಂವಕರ, ಮಹಾಬಲೇಶ್ವರ ಗೌಡ, ಷಣ್ಮುಖ ಗೌಡ, ಪ್ರಣವ ಭಟ್ಟ, ವೆಂಕಟೇಶ ಬಗರಿಮಕ್ಕಿ, ನಿತಿನ್ ದಂಟಕಲ್, ಅಭಿಷೇಕ ಅಡಿ, ಕಾತರ್ಿಕ ಕಣ್ಣಿ ಇವರು ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.

            ಹಲವು ಆಕರ್ಷಣೆ ಯಕ್ಷಗಾನ ಪ್ರದರ್ಶನದಲ್ಲಿ ಸಂಯೋಜಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.