ಧಾರವಾಡ 31: ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಮಿತಿ ಅಧ್ಯಕ್ಷರಾಗಿರುವ ,ಶಾಸಕ ಪ್ರಸಾದ ಅಬ್ಬಯ್ಯ ಅವರು ಇಂದು ಮುಖ್ಯ ವೇದಿಕೆ,ಮಾಧ್ಯಮ ಕೇಂದ್ರ, ಭೋಜನಾಂಗಣ, ಪುಸ್ತಕ ಮಳಿಗೆಗಳ ನಿಮರ್ಾಣ ಕಾರ್ಯ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ ಅಬ್ಬಯ್ಯ ಅವರು, 300*600 ಅಡಿಯ ಮುಖ್ಯ ವೇದಿಕೆಯನ್ನು 50 ಸಾವಿರ ಜನರಿಗೆ ಆಸನ ವ್ಯವಸ್ಥೆಯೊಂದಿಗೆ ನಿಮರ್ಿಸಲಾಗುತ್ತಿದೆ. ಶೇಕಡಾ 80 ರಷ್ಟು ಕಾರ್ಯ ಪೂರ್ಣವಾಗಿದೆ.ಕಲಾವಿದರಾದ ಬಿ.ಮಾರುತಿ,ಪ್ರತಾಪ ಬಹುರೂಪಿ ಹಾಗೂ ತಂಡದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಗೋಪುರ, ಹಂಪಿಯ ಶಿಲ್ಪಕಲಾಕೃತಿಗಳ ಪ್ರತಿಬಿಂಬಗಳನ್ನು ಒಳಗೊಂಡ ವೇದಿಕೆಯ ಸಭಾಮಂಟಪ ನಿಮರ್ಾಣವಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯ ಫುಟ್ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದಲ್ಲಿ ಮಾಧ್ಯಮಕೇಂದ್ರ ನಿಮರ್ಿಸಲಾಗುತ್ತಿದೆ. 500 ಪುಸ್ತಕ ಮಳಿಗೆಗಳು, 250 ವಾಣಿಜ್ಯ ಮಳಿಗೆಗಳು, ನೋಂದಣಿಗಾಗಿ 75 ಮಳಿಗೆಗಳು ತಲೆ ಎತ್ತಿವೆ. 150 ಜನ ಅಧಿಕಾರಿಗಳು ಹಾಗೂ 300 ಜನ ಎನ್.ಎಸ್.ಎಸ್. ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂಟಪದ ವಿನ್ಯಾಸವನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಶಿವಯೋಗಿ ಹಿರೇಮಠ, ಕಾರ್ಯನಿವರ್ಾಹಕ ಇಂಜಿನಿಯರ್ ವಿರೂಪಾಕ್ಷಪ್ಪ ಯಮಕನಮರಡಿ, ಎಇಇ ವಿ.ಎನ್.ಪಾಟೀಲ, ಎಇ ಯು.ಎಂ.ಗದಗಕರ್, ಲೆಕ್ಕ ಪರಿಶೋಧನಾಧಿಕಾರಿ ರಮೇಶ ಎಸ್ ಕುಲಕಣರ್ಿ, ಆಹಾರ ಇಲಾಖೆ ಉಪನಿದರ್ೇಶಕ ಸದಾಶಿವ ಮಜರ್ಿ, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್.ಚನ್ನೂರ, ಮಹೇಂದ್ರ ಸಿಂಘೆ, ಪವರ್ೇಜ್ ಕೊಣ್ಣೂರ ಹಾಗೂ ಮತ್ತಿತರರು ಇದ್ದರು.