ಗೋಲ್ ಬಾರಿಸಿ ಪ್ರೇಮ ನಿವೇದನೆ ಮಾಡಿದ ಫುಟ್ಬಾಲಿಗನಿಗೆ 3 ತಿಂಗಳ ನಿಷೇಧದ ಶಿಕ್ಷೆ

ವೆನಿಜುವೆಲ್ಲ 31: ತನ್ನ ಪ್ರೀತಿಗೆ ಪಾತ್ರಳಾಗಬೇಕಿರುವ ಗೆಳತಿ ಮೈದಾನದಲ್ಲಿ ತನ್ನ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಗೋಲು ಹೊಡೆದ ಖುಷಿಯಲ್ಲಿ ಫುಟ್ಬಾಲಿಗನೊಬ್ಬ ಮೈದಾನದಲ್ಲೇ ಆಕೆಗೆ ಪ್ರೇಮ ನಿವೇದನೆ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.  
	ವೆನಿಜುವೆಲ್ಲ ಫುಟ್ಬಾಲ್ ಆಟಾಗರ ಎಡ್ವಡರ್್ ಬೆಲ್ಲೊ ಚಿಲಿಯನ್ ಪ್ರಿಮಿಯರ್ ವಿಭಾಗದ ಪಂದ್ಯದಲ್ಲಿ ಎವರ್ಟನ್ ತಂಡದ ವಿರುದ್ಧ ಗೋಲ್ ಹೊಡೆದಿದ್ದರು. ಗೋಲ್ ಹೊಡೆದ ಮರುಕ್ಷಣವೇ ಗೆಳತಿಯ ಬಳಿ ಓಡಿ ಹೋಗಿ ಆಕೆಯ ಮುಂದೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.  
	ಎಡ್ವಡರ್್ ಪ್ರೇಮ ನಿವೇದನೆಗೆ ಅಚ್ಚರಿಯಾದ ಗೆಳತಿ ಗ್ಯಾಬ್ರಿಯೆಲ್ಲಾ ಬ್ರಿಟೊ ಒಪ್ಪಿಗೆಯೂ ಸೂಚಿಸಿದ್ದಾರೆ. ಈ ಕ್ಷಣವನ್ನು ಫುಟ್ಬಾಲ್ ಮೈದಾನದಲ್ಲಿದ್ದ ಪ್ರತಿಯೊಬ್ಬರೂ ಖುಷಿಯಿಂದ ಕಣ್ತುಂಬಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
	ಇನ್ನು ಆಟದ ಮಧ್ಯೆ ಮೈದಾನದಿಂದ ಹೊರಗಿದ್ದ ಎಡ್ವಡರ್್ ಗೆ ರೆಫ್ರಿ ಹಳದಿ ಕಾಡರ್್ ನೀಡಿ ಮೂನರ್ಾಲ್ಕು ತಿಂಗಳು ಯಾವುದೇ ಪಂದ್ಯ ಆಡದಂತೆ ಸೂಚಿಸಿದ್ದಾರೆ. ಇದಕ್ಕೆ ಎಡ್ವಡರ್್ ನಾನು ಮೂನರ್ಾಲ್ಕು ತಿಂಗಳು ತಂಡದಿಂದ ಹೊರಗುಳಿಯುತ್ತೇನೆ ಎಂದು ಗೊತ್ತು. ಆದರೂ ಈ ಸಮಯದಲ್ಲಿ ತಂಡದಿಂದ ಹೊರಗಿರುವ ಸಮಯ ನನಗೆ ಸಿಹಿಯಾಗಿರುತ್ತದೆ ಎಂದು ಹೇಳಿದ್ದಾರೆ.  
    ಸಾಮಾನ್ಯವಾಗಿ ಗಾಯಗಳಾದಾಗ ತಂಡದಿಂದ ಹೊರಗುಳಿಯುವುದು ಮನಸ್ಸಿಗೆ ನೋವು ತರುತ್ತದೆ. ಆದರೆ ಗೆಳತಿ ನನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಾಗ ತಂಡದಿಂದ ದೂರವಿರುವುದು ಸಿಹಿ ಅನುಭವ ನೀಡುತ್ತದೆ ಎಂದರು.