ತತ್ವಜ್ಞಾನದ ಪ್ರಥಮ ಚಿಂತಕ ಶಂಕರಾಚಾರ್ಯರು

ಲೋಕದರ್ಶನ ವರದಿ

ಬಾಗಲಕೋಟೆ: 8ನೇ ಶತಮಾನದ ಶರಣರ ಯುಗಕ್ಕೆ ಚಾಲನೆ ನೀಡಿ ತತ್ವಜ್ಞಾನದ ಪ್ರಥಮ ಚಿಂತಕ ಎಣಿಸಿಕೊಂಡವರು ಶಂಕರಾಚಾರ್ಯರೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೆ ಬೇಕಾದ ಮೂಲ ಊಟ, ಬಟ್ಟೆ ಹಾಗೂ ವಸತಿ ಈ ಮೂರು ಸೌಕರ್ಯಗಳು ಅನುಕೂಲ ಇದೆ ಎಂದರೆ ಅವರು ಜೀವಿಸುತ್ತಿದ್ದಾರೆ ಎಂದರ್ಥ. ಆದರೆ ಬುದ್ದಿವಂತನಾದ ಮನುಷ್ಯ ಆಚಾರ, ವಿಚಾರ, ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಕೆಲವು ನಿಯಮಗಳನ್ನು ಆಚರಿಸಲು ಹೇಳಿಕೊಟ್ಟು ಸನ್ಮಾರ್ಗ ತೋರಿದವರು ಶಂಕರಾಚಾರ್ಯರೆಂದರು.

ದಕ್ಷಿಣ ಭಾರತ, ಉತ್ತರ ಭಾರತ ಕಡೆಗಳಲ್ಲಿ ಸಂಚರಿಸಿ 32 ವರ್ಷಗಳ ಜೀವಿತ ಅವಧಿಯಲ್ಲಿ 3 ಬಾರಿ ದೇಶ ಪರ್ಯಟಣೆ ಮಾಡಿ ನಾಲ್ಕು ಫೀಠಗಳನ್ನು ಸ್ಥಾಪಿಸಿದ ಕೀತರ್ಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದರು. ಹಿಂದೆ ಭಾಷಾ ತೊಂದರೆ ಅನುಭವಿಸುತ್ತಿರುವದರಿಂದ ಇಂದು 200 ಅಧಿಕೃತ ಭಾಷೆಗಳು 2000 ಉಪ ಭಾಷೆಗಳಿಗೆ ತಜರ್ುಮೆಗೊಂಡಿರುವ ಶಂಕರಾಚಾರ್ಯರ ತತ್ವಗಳು ಪ್ರಸ್ತುತವಾಗಿವೆ. ಇಂತಹ ಮಹನೀಯರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.

ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಶಂಕರರಾಚಾರ್ಯರು 32 ವರ್ಷಗಳ ತಮ್ಮ ಜೀವಿತ ಅವಧಿಯಲ್ಲಿ ದೇಶ ಸಂಚಾರ ಮಾಡಿ ವೇದಗಳ ಪ್ರಚಾರ ಮಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಸಮಾಜಕ್ಕೆ ಮುಡುಪಾಗಿದ್ದರು. ಶೃಂಗೇರಿ, ಕಂಚಿ, ದ್ವಾರಕ, ಬರದಿ ಪೀಠಗಳನ್ನು ಸ್ಥಾಪಿಸಿದ ಕೀತರ್ಿ ಶಂಕರಚಾರ್ಯರಿಗೆ ಸಲ್ಲುತ್ತದೆ ಎಂದರು. ಇಂತಹ ಮಹಾನ್ ವ್ಯಕ್ತಿಗಳು ನಮ್ಮ ಭಾರತದಲ್ಲಿ ಜನಿಸಿ ನಮ್ಮ ಸಂಸ್ಕೃತಿಯನ್ನು ಮೆರೆಸಿದ್ದಾರೆ. ಮಹಾನ್ ವ್ಯಕ್ತಿಗಳ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಮುಂದುವರೆಸಿ ಉತ್ತಮ ಜೀವನ ನಡೆಸುವಂತಾಗಬೇಕೆಂದರು. 

ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಭೂದಾಖಲೆಗಳ ಸಹಾಯಕ ನಿದರ್ೇಶಕ ಹಾಗೂ ಶೃಂಗೇರಿ ಮಠದಿಂದ ಉತ್ತರ ಕನರ್ಾಟಕದ 4 ಜಿಲ್ಲೆಗೆ ಶಂಕರತತ್ವ ಪ್ರಚಾರ ಅಭಿಯಾನದ ಉಸ್ತುವಾರಿ ಆಗಿರುವ ಚಿದಂಬರ ಇನಾಮದಾರ ಮಾತನಾಡಿ ಶಂಕರಾಚಾರ್ಯರು ಪ್ರತ್ಯಕ್ಷ ಪರಮೇಶ್ವರನ ಪರಾವತಾರಿಗಳಾಗಿದ್ದು, ಲೋಕಕಲ್ಯಾಣಕ್ಕಾಗಿ ಅವತಾರ ತಾಳಿದವರೆಂದರು. ಶಂಕರೋ ಅಂದರೆ ಆನಂದ, ಆಚಾರ್ಯರು ಎಂದರೆ ಆದ್ಯಾತ್ಮಿಕ ಚಿಂತಕ, ಪರರಿಗೆ ಆನಂದ ತರಯವಂತಹ ಕಾರ್ಯವನ್ನು ಮಾಡುವಾತನೇ ಎಂದರ್ಥ. ಮಾನವ ಕುಲದ ಉದ್ದಾರಕ್ಕಾಗಿ ತಮ್ಮ ವ್ಯಯಕ್ತಿಕ ಜೀವನದಲ್ಲಿ ಅನೇಕ ತೊಂದರೆ ಅನುಭವಿಸಿ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಲೋಕಪರ್ಯಟನೆ ಮಾಡಿ ಅದ್ವೈತ ತತ್ವ ಪ್ರಚಾರ ಮಾಡಿದವರು.

ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ವಿಶೇಷ ಅಧಿಕಾರಿ ಟಿ.ಎಚ್.ಕುಲಕಣರ್ಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.