ಜ.19ರಂದು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿಧರ್ಾರ

ಕಾಗವಾಡ 23: ಬರುವ ಜನೆವರಿ 19 ರಂದು ಕಾಗವಾಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉಗಾರ ಖುರ್ದ ವಿಹಾರ ಸಭಾ ಭವನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಶನಿವಾರ ಸಂಜೆ ಉಗಾರ ವಿಹಾರ ಸಭಾ ಭವನದಲ್ಲಿ ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ನಿಧರ್ಾರ ಕೈಗೊಳ್ಳಲಾಯಿತು. 

ಸಭೆಯಲ್ಲಿ ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹಾಂತೇಶ ಉಕಲಿ, ಮತ್ತು ನಿಕಟಪೂರ್ವ ಸಮ್ಮೇಳನ ಅಧ್ಯಕ್ಷೆ ಶಾಲಿನಿತಾಯಿ ದೊಡ್ಮನಿ ಇವರ ಮುಖ್ಯ ಉಪಸ್ಥಿತಿಯಲ್ಲಿ ಸಮ್ಮೇಳನ ಯಶಸ್ವಿಗೊಳಿಸಲು ಚಚರ್ಿಸಲಾಯಿತು.

ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಕವಿಗೋಷ್ಟಿ, ಚಿಂತನಗೋಷ್ಟಿ, ಆಶೆಯ ಭಾಷಣ, ಉದ್ಘಾಟನೆ, ಧ್ವಜಾರೋಹಣ, ಎಲ್ಲ ಸಂಗತಿಗಳ ಕುರಿತು ವಿವರವಾದ ಚಚರ್ೆ ಜರುಗಿತು. 

ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಸಿದ್ಧರಾಮ ಮೋಟಗಿ ಇವರು ಸಾಹಿತ್ಯ ಸಮ್ಮೇಳನ ಬಗ್ಗೆ ಅನೇಕ ಮಹತ್ವದ ಮಾಹಿತಿ ನೀಡಿದರು. ಮಹಾದೇವ ಬಿರಾದಾರ, ಉಗಾರ ಪುರಸಭೆ ಸದಸ್ಯರಾದ ಮಂಜುನಾಥ ತೇರದಾಳೆ, ಮದನ ದೇಶಿಂಗೆ, ಯೊಗೇಶ ಕುಂಬಾರ, ಶ್ರೀಹರಿ ವಿದ್ಯಾಲಯದ ಮುಖ್ಯಾಧ್ಯಾಪಕ ಆರ್.ಎ.ಮಿಜರ್ೆ, ವಿಜಯ ಆಸೂದೆ, ಪ್ರಕಾಶ ರಾಜಮಾನೆ, ವಿಲಾಸ ಶಿಂಗೆ, ಭಾಲಚಂದ್ರ ರುಗ್ಗೆ, ದೀಪಕ ಪಾಟೀಲ, ಉಮೇಶ ಪಾಟೀಲ, ಸೇರಿದಂತೆ ಅನೇಕರು ಇದ್ದರು.ಸನ್ಮತಿ ವಿದ್ಯಾಲಯದ ಗುರುಗಳಾದ ಹನಮಂತ ನಾಯಿಕ ವಂದಿಸಿದರು.

ಫೋಟೊ ಶಿಷರ್ಿಕೆ: 22 ಕಾಗವಾಡ 1 ಉಗಾರ ಖುರ್ದದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿಸಲು ಚಚರ್ಿಸುತ್ತಿರುವ ಡಾ. ಸಿದ್ಧಗೌಡಾ ಕಾಗೆ, ಡಾ. ಮಹಾನತೇಶ ಉಕಲಿ, ಶಾಲಿನಿತಾಯಿ ದೊಡ್ಮನಿ.