ಗದಗ 16: ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ರಣೆ ನಂತರ ಅಂತಿಮ ಪಟ್ಟಿಯನ್ನು ಪ್ರಕಟಲಾಗಿದ್ದು ಜಿಲ್ಲೆಯಲ್ಲಿ 4,26,712 ಪುರುಷ, 4,19,526 ಮಹಿಳಾ, ಇತರೆ 49 ಸೇರಿದಂತೆ ಒಟ್ಟು 8,46,287 ಮತದಾರರಿದ್ದಾರೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. 10.10.2018ರಲ್ಲಿ ಪ್ರಕಟಿತ ಜಿಲ್ಲೆಯ ಮತದಾರ ಪಟ್ಟಿಯಲ್ಲಿ 4,25,311, ಪುರುಷ, 4,18,194, ಇತರೆ 52 ಸೇರಿದಂತೆ ಒಟ್ಟು 8,43,907 ಮತದಾರರಿದ್ದರು. ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು 10.10.2018 ರಿಂದ 25.11.2018 ರವರೆಗೆ ಅವಕಾಶವನ್ನು ನೀಡಲಾಗಿತ್ತು. ಅಲ್ಲದೇ 2018ರ ನವೆಂಬರ 18,23ರಿಂದ 25 ರವರೆಗೆ ಚುನಾವಣಾ ಆಯೋಗದ ನಿದರ್ೇಶನ ಮೇರೆಗೆ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಕೈಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ಮತದಾರ ಪರಿಷ್ಕರಣೆ ಕಾರ್ಯ ಕುರಿತಂತೆ ವಿವರ ನೀಡಿದರು.
ಮತದಾರ ಪಟ್ಟಿ ಪರಿಷ್ಕರಣೆ: ಗದಗ ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪರಿಷ್ರಣೆ ಸಂದರ್ಭದಲ್ಲಿ ಅವರು ತಮ್ಮ ವ್ಯಾಪ್ತಿಯಲ್ಲಿನ ಮನೆಮನೆಗೆ ಬೇಟಿ ನೀಡಿ ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಣಿ, ಬಿಡತಕ್ಕವುಗಳು ಹಾಗೂ ಮತದಾರ ಪಟ್ಟಿಯಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಲು ಕ್ರಮ ಕೈಕೊಂಡಿರುತ್ತಾರೆ. ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಣೆಗಾಗಿ 87 ಅಧಿಕಾರಿಗಳನ್ನು ನೇಮಿಸಲಾಗಿತ್ತು. ಪರಿಷ್ಕರಣಾ ಅವಧಿಯಲ್ಲಿ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳ ಪೈಕಿ 5379 ಪುರಷ ಮತದಾರರು ಹಾಗೂ 6082 ಮಹಿಳಾ ಮತದಾರರು ಹೀಗೆ ಒಟ್ಟು 11,429 ಮತದಾರರ ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಹಾಗೂ 4,299 ಪುರುಷ, 4,747 ಮಹಿಳಾ, 3 ಇತರೆ ಹೀಗೆ ಒಟ್ಟು 9,049 ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ. ತೆಗೆದುಹಾಕಲಾದ ಒಟ್ಟು 9,049 ಮತದಾರರ ಪೈಕಿ 2,811 ನಿಧನ, 5,156 ಸ್ಥಳಾಂತರ, 1,082 ಪುನರಾವರ್ತನೆಗೊಂಡ ಕಾರಣಗಳಿಂದ ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ. ಕರಡು ಮತದಾರ ಪಟ್ಟಿಯಲ್ಲಿ 18-19 ವರ್ಷದ ವಯೋಮಾನದ 9,474 ಮತದಾರರ ಹೆಸರು ಇದ್ದು, ಪ್ರಸ್ತುತ ಪರಿಷ್ಕರಣೆಯ ಸಂದರ್ಭದಲ್ಲಿ ಒಟ್ಟು 3,783 ಹೊಸ ಯುವ ಮತದಾರರ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರಿಸಲಾಗಿದೆ.
65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 1.05,782 ಮಹಿಳಾ, 1,08,400, ಇತರೆ 8 ಒಟ್ಟು 2,14,190 ಮತದಾರರಿದ್ದಾರೆ. 66-ಗದಗವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 1.09,210 ಮಹಿಳಾ, 1,09,362 ಪುರುಷ, ಇತರೆ 21 ಒಟ್ಟು 2,18,593 ಮತದಾರರಿದ್ದಾರೆ. 67-ರೋಣ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 1.12,346 ಮಹಿಳಾ, 1,13,655 ಪುರುಷ, ಇತರೆ 14 ಒಟ್ಟು 2,18,593 ಮತದಾರರಿದ್ದಾರೆ. 68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 92,188 ಮಹಿಳಾ, 95,295 ಪುರುಷ, ಇತರೆ 6 ಒಟ್ಟು 1,87,489 ಮತದಾರರಿದ್ದಾರೆ.
ಪ್ರಸ್ತುತ ಅಂತಿಮ ಮತದಾರ ಪಟ್ಟಿಯ ಅನ್ವಯ 983.3 ಲಿಂಗಾನುಪಾತವಿದ್ದು, ಜನಸಂಖ್ಯೆ ಹಾಗೂ ಮತದಾರರ ಸರಾಸರಿ ಶೇ. 73.67 ಆಗಿರುತ್ತದೆ. ಅಂತಿಮ ಮತದಾರ ಪಟ್ಟಿಯಲ್ಲಿ ಎಲ್ಲ ಮತದಾರರ ಭಾವಚಿತ್ರ ಅಳವಡಿಸಲಾಗಿದೆ. ಮತದಾರರ ಗುರುತಿನ ಚೀಟಿ ವಿತರಿಸಿದೆ. ಒಟ್ಟು 7,329 ವಿಕಲಚೇತನ ಮತದಾರರಿದ್ದಾರೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಒಟ್ಟು 1353 ಸೇವಾ ಮತದಾರರನ್ನು ಮತದಾರ ಪಟ್ಟಿಯ ಕೊನೆಯ ಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ 1950 ದೂರವಾಣಿ ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ.
ಸ್ವೀಪ ಚಟುವಟಿಕೆ: ಜಿಲ್ಲೆಯಲ್ಲಿ 1-1-2019ಕ್ಕೆ ಅರ್ಹತಾ ದಿನಾಂಕಕ್ಕೆ ಅನ್ವಯಿಸಿ ಯುವ ಮತದಾರರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಅವಕಾಶ ಇರುವುದನ್ನು ಗಮನಿಸಲಾಗಿದೆ. ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ ಅಧ್ಯಕ್ಷತೆಯ ಗದಗ ಜಿಲ್ಲಾ ಸ್ವೀಪ ಸಮಿತಿ ಹಾಗೂ ಜಿಲ್ಲಾಡಳಿತ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ನೋದಣಿ ಹಾಗೂ ಮತದಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚುನಾವಣಾ ಆಯೋಗದ ಜಿಲ್ಲೆಯ ಮತದಾರರ ಪಟ್ಟಿಯ ವಿಶéೇ ವೀಕ್ಷಕರ ಸಲಹೆಯಂತೆ ಎಲ್ಲ ಕಾಲೇಜುಗಳ ಪ್ರಾಚಾರ್ಯರ ಸಭೆ ಜರುಗಿಸಿ ಅರ್ಹತೆಯದ್ದು ನೊಂದಾವಣೆ ಮಾಡಿಸಿಕೊಳ್ಳದ ಯುವ ಮತದಾರರನ್ನು ಕಾಲೇಜುಗಳಲ್ಲಿ ಪರಶೀಲಿಸಿ ಗುರುತಿಸಲು ತಿಳಿಸಲಾಗಿತ್ತು. ಅಂದಾಜು ಐದುಸಾವಿರಕ್ಕೂ ಅಂತಹ ಯುವಕ ಯುವತಿಯರು ಮತದಾರ ಪಟ್ಟಿಯಲ್ಲಿ ಇನ್ನು ಸೇರ್ಪಡೆ ಆಗದಿರುವುದನ್ನು ಗುರುತಿಸಿದೆ ಅವರಿಗೆ ಹೆಸರ ನೊದಾವಣೆ ನಮೂನೆ ನೀಡಿ ಭತರ್ಿ ಮಾಡಿಸಿ ಅಗತ್ಯದ ದಾಖಲೆಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರರಿಗೆ ಆಯಾ ಕಾಲೇಜುಗಳಿಂದ ನೀಡಲು ಸೂಚಿಸಲಾಗಿದೆ. ಮುಂದಿನ ಮತಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಇವುಗಳನ್ನು ಪರಿಗಣಿಸಲಾಗುವದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಜನೇವರಿ 25ರಂದು ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ಬೂತ ಮಟ್ಟ, ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ ನೀಡುವ ಹಾಗೂ ಮತದಾರ ಜಾಗೃತಿಗಾಗಿ ಕಾಲೇಜು ವಿದ್ಯಾಥರ್ಿಗಳಿಗಾಗಿ ಎರ್ಪಡಿಸಿದ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ನುಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಳೆ, ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗದ ಅಧಿಕಾರಿ, ಸಿಬ್ಬಂದಿ ಪತ್ರಿಕಾಗೋಷ್ಟಿಯಲ್ಲಿದ್ದರು.